Posts

Showing posts from December, 2021

ಹೊಸವರ್ಷ 2022

Image
ಹೊಸದಿನಕೆ ಹೊಸತೇ ಹೊಸವರುಷ ಕಳೆದೋದ ದಿನಗಳು ಕಾಡಿದ ಸಂಘರ್ಷ ಮುಂಬರುವ ದಿನಗಳ ಪ್ರೀತಿ ಉತಕರ್ಷ ನೆನ್ನೆಯ ಮರೆತು ನಾಳೆಯ ಸವಿ ಹರ್ಷ ದಿನಗಳ ದೂಡುತ ಕಾಲವ ಕಳೆಯುತ ಪ್ರೀತಿಯ ಸಂಭ್ರಮ ನೆನಪು ಅನುಪಮ ಮನಸ್ಸುಗಳ ಮಿಲನ ಕನಸ್ಸುಗಳ ಚಲನ ನೋವುಗಳ ಪತನ ಆಸೆಗಳ ತನನ ಮಾಗಿಯ ಕಾಲದಿ ವಯಸ್ಸಿನ ಅಳದಿ ಆಸೆಗಳು ನೂರು ಬಯಕೆಗಳು ಚೂರು ಕ್ಷಣಕೊಂದು ಕಥೆ ಒಲವಿನ ವ್ಯಥೇ ಬೆಳಕಿನ ಕಿರಣ ರಾತ್ರಿಯ ಚುಕ್ಕಿಗಳ ಮರಣ ಹೊಸತನವ ಹುಡುಕಿ ಕನಸ್ಸುಗಳ ಕೆದಕಿ ನಡೆಯುವುದು ಕಾಲ ಬಾಷೆಗಳ ಜಾಲ ಋತುಗಳು ಕೊಟ್ಟ ದಿಕ್ಕುಗಳ ನೆಟ್ಟ ಮುಂಗಾರು ಮಳೆಗೆ ಬಂಗಾರದ ಕಳೆಗೆ  ಒಲವಾಯಿತೇ ಹಸಿರು ಬದುಕು ನನ್ನವುಸಿರು ಹೊಸತನವ ತಂತೆ ಹೊಸ ಹರುಷ ಬಂತೆ ಸಡಗರದ ಬಾಳು ಸುಡಬೇಡ ಕೇಳು ದೇವರೇ ಹರಸು ನವ ಜೀವನ ತರಿಸು **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಊಸಿರಿಗೆ ಹೆಸರಿಡುವಾಸೆ

Image
ನಿನ್ನ ಊಸಿರಿಗೆ ಹೆಸರಿಡುವಾಸೆ ಮನದ ಸವಿ ಒಲವಿಗೆ ನಿನ್ನಾಸೆ ಪ್ರೇಮದಿ ಕೂಗಿ ನಿನ್ನ ಕರೆವಾಸೆ ಓ ಗೆಳತಿಯೇ ನಿನಗೇಕೆ ಮುನಿಸೆ ಒರೆಗಣ್ಣಲಿ ನೋಡಿ ಹಾಕಿದೆ ಚೂರಿ ನೀನೇಬೇಕೆಂದು ಮನಸ್ಸು ಹೇಳಿದೆ ಸಾರಿ ನಗುವೆಯ ಒಮ್ಮೆ ನಿನ್ನ ಮೊಗ ತೋರಿ ಮನಸ್ಸನ್ನು ಕದ್ದ ಕೆಂಪು ಕೆನ್ನೆ ಚೋರಿ ನುಡಿವಾಗ ನೀನು ಸುಂದರ ಕೋಗಿಲೆ ನಡೆವಾಗ ನೀನು ಮೈತುಂಬಿದ ನವಿಲೇ ನಗುವೊಂದು ಮಿನುಗುವ ನಕ್ಷತ್ರ ನಿನಗಾಗಿ ಬರೆಯಲೇ ಒಲವಿನ ಪತ್ರ ನೀನಿಲ್ಲದ ಬದುಕು ಸಾವಿನ ಘೋರಿ ಮನವೇಕೋ ಹುಡುಕಿದೆ ಮುಗಿಲ ದಾರಿ ಎದೆ ಬಡಿತ ಹೇಳಿದೆ ಪ್ರತಿ ಬಾರಿ ನಿನ್ನೆ ನನ್ನ ಒಲವಿನ ಸುಂದರಿ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಯಾರನು ಗೆಲ್ಲಲ್ಲಲಿ

Image
  ಪಯಣವು ಸ್ನೇಹದ ಬುಟ್ಟಿ ಪ್ರೀತಿಯ ಮೇವನು ಹೊಟ್ಟಿ ಸುಡುಲು ಪ್ರಣಯದ ರೋಟ್ಟಿ ಯಾರನು ಗೆಲ್ಲಲ್ಲಲಿ ನಾ ಸುಟ್ಟಿ ಮನವು ಹಸಿವಿನ ಬೆಣ್ಣೆ ಕರಗಲು ಪ್ರೀತಿಯ ಹೇಳಿ ಯಾರನು ಕರೆಯಲು ಕೇಳಿ ಹಾಡಲು ಒಲವಿನ ಹೋಳಿ ಬದುಕು ಬೆಯುವ ಸುಣ್ಣ ಜೀವನ ಬೆಂದ ಬಿಳಿ ಬಣ್ಣ ನೋಡಲು ನಿನ್ನ ಕಣ್ಣ ಯಾರನು ಬೇಡಲಿ ಅಣ್ಣ ಮನಸ್ಸು ಏಕೋ ಮಾಗಿದೆ ಕನಸ್ಸು ಕೈಬಿಸಿ ಕರೆದಿದೆ ವಯಸ್ಸು ಹೊಡುತ ಕೂಗಿದೆ ನನ್ನಾಣೆ ನೋವು ನಿನಗೆ ತಿಳಿಯದೆ ನಗುವ ಸೋಗೂಸು ಮನಕೆ ಪ್ರೀತಿ ಹೇಳುವ ಬಯಕೆ ಯಾರಿಗೆ ಹೆಸರಿಡಲಿ ಒಲವೇ ಪ್ರೀತಿಯ ನಲಿವಿನ ಗೆಲುವೇ **********ರಚನೆ ******-** ಡಾ. ಚಂದ್ರಶೇಖರ. ಸಿ. ಹೆಚ್

ಹುಡುಕಿದೆ ನಿನ್ನ

Image
  ಮೌನದ ಯಾತ್ರೆ ಕನಸಿನ ಜಾತ್ರೆ ಸುಡುವ ವಯಸ್ಸು ಬೆಂಕಿಯ ಪಾತ್ರೆ ಕಳೆಯುತಿದೆ ಕಾಲ ಸುಡುತ ಬಾಳು  ಯಾರಿಗೆ ಬೇಕು ಈ ಜೀವನದ ಗೋಳು ಮರೆಯಾಗೋ ಕನಸು ನೆಲೆಯಿಲ್ಲದ ನನಸು ಬುಸುಗುಟ್ಟಿ ಬಂತು ಮನಸ್ಸನ್ನು ತಿಂತು ತಿರುಗಿದೆ ಜೀವ ಅಲೆಮಾರಿಯಂತೆ ಬಯಸದೆ ಬಂತು ನೋವಿನ ಸಂತೆ ಸಿಕ್ಕಿತೆ ಸಂತೋಷ ಅಮೃತವಾಯಿತೇ ವಿಷ ಯಾತನೆ ನೂರೆಂಟು ಬದುಕೊಂದ್ದು ಕಗಂಟು ಬಿಡಿಸಲು ಹೋದೆ ಸುಳಿಯಲಿ ನೊಂದೆ ಮರೆತಾಗ ನಿನ ನೆನಪು ಏನೋ ಹುರುಪು ಹಸಿದ ಹೊಟ್ಟೆಗೆ ಇಟ್ಟನ್ನು ಇಟ್ಟಾಗೆ ಹಕ್ಕಿಯು ಬಳಿ ಬಂದು ಕಿಚ ಗುಟ್ಟಿ  ನವ ಮಾಸದ ಹೃದಯವು ಪ್ರೀತಿ ಬುಟ್ಟಿ ಯಾರಿಗೆ ನೀಡಲಿ ಮನದ ಪುಷ್ಪ ಕಣ್ಣೀರು ಕೊನೆಯ ಆನಂದ ಬಾಷ್ಪ ಸಾಗಲಿ ಬದುಕು ಬೆಳಗಿ ಬೆಳಕು ಮನದ ದುರಾಸೆ ಕಿತ್ತು ಕೊಳಕು ಒಲವೆಂಬ ಮಾಯೆ ಒಂದೂ ಹಸಿವು ಸಿಗುತ್ತಿಲ್ಲ ಏಕೋ ಒಲವ ಸುಳಿವು *********ರಚನೆ ******** ಡಾ. ಚಂದ್ರಶೇಖರ.ಸಿ. ಹೆಚ್

ಕೈ ಮುಗಿವೆ ದೇವಾ

Image
  ಬೆಟ್ಟವ ಅತ್ತಿ ಭಕ್ತಿಯ ಬಿತ್ತಿ ದೇವರ ಸುತ್ತಿ ಕೇಳಿದೆ ವರವ ಓ ದೇವಾ ನೀಡು ನೀ ಮನವ ದಾರಿಯಲ್ಲಿ ಎಡವಿ ಹೇಳುವ ಚಲವ ಮೆಟ್ಟಿಲುಗಳು ಮುಟ್ಟಿ ಬಾಗಿಲ ತಟ್ಟಿ ಕರೆದರೆ ನಿನ್ನ ನೀ ನೋ ಡು ನನ್ನ  ಮೈತುಂಬಾ ಹೂವು ಭಕ್ತರ ನೋವು ಅರಿವ ಒಲವು ನೀಡು ಪಲವು ದೀಪವು ಉರಿದು ಕತ್ತಲೆ ಕಳೆದು ಮನವು ಬರಿದು ಬೇಡಲು ನೆನೆದು ಎಲ್ಲಿಹದು ದುಃಖ್ಖ ಭಕ್ತಿಯ ಪಕ್ಕ ನೋವು ಮಾಯ ನಿನ್ನಯ ಕಾಯ ಕೈಮುಗಿದು ಬೇಡುವೆನು ನೀಡು ವರವ ಮನೆಯೆಲ್ಲಾ ಭಕ್ತಿಯಲಿ ಬೆಳಗುವ ಫಲವ ಮನದಲ್ಲಿ ಶಕ್ತಿ ನಿನ್ನಲ್ಲಿ ಭಕ್ತಿ ಬೇಡುವೆ ನಿನ್ನ ಕೊಡು ನೀನು ಮುಕ್ತಿ ಅರಿಸಿನದ ಕೆನ್ನೆ ಕಣ್ಣಲ್ಲಿ ಸನ್ನೆ ಕೈಯಲ್ಲಿ ಚಕ್ರ ಒಲವ ಶಂಖ ಅವರಿಸಲು ನಿನ್ನ ಇನ್ನು ಚೆನ್ನಾ ದೇವರೇ ನೀನು ಪ್ರಕೃತಿ ನಿನ್ನ ಅಭಯ ಸುಕೃತಿ ************ರಚನೆ **-***** ಡಾ. ಚಂದ್ರಶೇಖರ. ಸಿ. ಹೆಚ್

ಮನದಾಸೆ ಹೂವೆ

Image
  ಮೋಹಕ ಮಾತು ಪ್ರೀತಿಯ ಗುರುತು ಕಲೆತು ಬೆರೆತು ಕಂಡ ಕನಸಿನ ಸೌಂದರ್ಯ ಅರಳಿದ ಹೂವು ಕೆರಳಿದ ನಗುವು ಪ್ರೀತಿ ಚೆಲುವು ಯಾರಿಗೆ ನೀಡಲು ಈ ಶೌರ್ಯ ಬಾಡಿದ ಹೂವು ಬೇಡಿದೆ ವರವ ನೀಡು ನಿನ್ನ ಚೆಲುವ ಸೂರ್ಯನ ಕಿರಣಕೆ ಕರಗುವ ಮನವ  ಮಾತು ಮರೆತೂಯ್ತು ಪ್ರೀತಿ ಮಸೊಯ್ತು ಗೆಲುವು ಸೂತೋಯ್ತು ಕಂಡ ಕನಸು ನನಸಾಗದೆ ಹೋರಾಟಯ್ತು ಯಾರಿಗೆ ಹೇಳಲಿ ಈ ಪ್ರೀತಿ ಕಥೆಯ ಮನದಲಿ ಮುಚ್ಚಿಟ್ಟ ಬದುಕನ್ನು ಸುಟ್ಟ ಒಲವಿನ  ವ್ಯಥೆಯ ************ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಮಂಕುತಿಮ್ಮ

Image
  ಬದುಕು ಅನುಭವದ ಯಾತ್ರೆ ಕನಸು ಮನಸ್ಸಿನ ಪ್ರೀತಿ ಜಾತ್ರೆ ಜೀವನ ಸುಖ ದುಃಖ್ಖದ ಪಾತ್ರೆ ಅನುಭುವಿಸು ನಗುವಿನ ಮಾತ್ರೆ ಮನವೆಂಬ ವೈದ್ಯ ನೀಡುವ ಕನಸು ಕನಸ ನನಸಾಗಿಸುವ ಮುದ್ದು ಮನಸು ನೋವು ನಲಿವಿನ ಒಲವ ಸೊಗಸು ಕಷ್ಟ ಸುಖಗಳ ಪ್ರೀತಿ ನೀ ಸಹಿಸು ಬೆವರ ಹನಿಯೇ ಮಾತ್ರೆಯ ಶಕ್ತಿ ಕಾಯಕದಲ್ಲಿ ಮನಸಿಡುವುದೇ ಭಕ್ತಿ ಶ್ರದ್ದೆಯಲಿ ತೋರು ನಿನ್ನ ಯುಕ್ತಿ ದೇವರು ನೀಡುವನು ಮನಸ್ಸಿಗೆ ಮುಕ್ತಿ ಬಾಳು ಬೆಳಗಿತು ನಕ್ಷತ್ರದಂತೆ ಒಲವ ಸವಿಯು ನೋಟಿನ ಕಂತೆ ಮರೆತು ಬದುಕು ನೀ ನೋವಿನ ಚಿಂತೆ ನಾನು ಎಂಬುದು ಅಹಂಕಾರವಂತೆ ಎಲ್ಲರೂಳಗು ಒಂದಾಗು ತಮ್ಮ ಕಾಯುವಳು ನಿನ್ನ ಕನ್ನಡಮ್ಮ ಕತ್ತಲೆ ಹೋಗಿ ಬೆಳುಕು ನಮ್ಮದಮ್ಮ ರುಚಿಸಿದೆ ಜೀವನ ಪಯಣ ಮಂಕುತಿಮ್ಮ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ವರ ನೀಡು ದೇವಾ

Image
ಕಾಣದ ದೇವರ ಬೇಡುವುದೆಲ್ಲಿ ಮನದ ಆಸೆಯ ಕೇಳುವುದೆಲ್ಲಿ ಕಲ್ಲಿನ ಶಿಲ್ಪಾದ ಕಥೆ ಹೇಳುವುದೇಲ್ಲಿ ನಾನಿಟ್ಟ ನಂಬಿಕೆ ಕೊನೆಯಗುವುದೇ ಇಲ್ಲಿ ಓ ದೇವರೇ ನೀನಿರುವ ಗುಡಿ ನಾ ಬಂದೆ ಕೊಡಲು ಮುಡಿ ಅರ್ಚಕನಿಗಿಲ್ಲದ ಹಾ ಮಡಿ ಜೇವವು ನಂಬಿದೆ ನಿನ್ನೆ ತಡಿ  ಆಸೆಗಳು ಚೂರು ಕನಸಗಳು ಮೂರು ನೀ ಇಲ್ಲದೆ ಕೇಳುವರು ಯಾರು ಓ ದೇವರೇ ನೀ ಬಾ ಬೇಗಾ ಹೇಳುವೆನು ಭಕ್ತಿಯ ರಾಗಾ ಕಣ್ಮುಂದೆ ಬಂದು ವರವನ್ನು ನೀಡು ಒಡೆಯುವೆನು ತೆಂಗಿನ ಜೋಡು ಕನಸುಗಳು ನೆರವನ್ನು ನೀಡು ನಿನಗಾಗಿ ಅಲೆದಿರುವೆನು ನೋಡು ಯಾಕೆ ನೀ ಮಾಯವಾದೆ ನನ ಜೊತೆಗೆ ನೀ ಇರದೇ ವರವನ್ನು ನೀ ಕೂಡದೆ ಖುಷಿಯೇಕೋ ಮರೆತ್ತೋಯ್ತು ಮನೆಸೆಕ್ಕೊ ಕಲ್ಲಾಯತು  ನಿನ ನೆನೆಪು ಜೊತೆಯಾಯ್ತು ********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್