ಹೊಸವರ್ಷ 2022


ಹೊಸದಿನಕೆ ಹೊಸತೇ ಹೊಸವರುಷ

ಕಳೆದೋದ ದಿನಗಳು ಕಾಡಿದ ಸಂಘರ್ಷ

ಮುಂಬರುವ ದಿನಗಳ ಪ್ರೀತಿ ಉತಕರ್ಷ

ನೆನ್ನೆಯ ಮರೆತು ನಾಳೆಯ ಸವಿ ಹರ್ಷ


ದಿನಗಳ ದೂಡುತ ಕಾಲವ ಕಳೆಯುತ

ಪ್ರೀತಿಯ ಸಂಭ್ರಮ ನೆನಪು ಅನುಪಮ

ಮನಸ್ಸುಗಳ ಮಿಲನ ಕನಸ್ಸುಗಳ ಚಲನ

ನೋವುಗಳ ಪತನ ಆಸೆಗಳ ತನನ


ಮಾಗಿಯ ಕಾಲದಿ ವಯಸ್ಸಿನ ಅಳದಿ

ಆಸೆಗಳು ನೂರು ಬಯಕೆಗಳು ಚೂರು

ಕ್ಷಣಕೊಂದು ಕಥೆ ಒಲವಿನ ವ್ಯಥೇ

ಬೆಳಕಿನ ಕಿರಣ ರಾತ್ರಿಯ ಚುಕ್ಕಿಗಳ ಮರಣ


ಹೊಸತನವ ಹುಡುಕಿ ಕನಸ್ಸುಗಳ ಕೆದಕಿ

ನಡೆಯುವುದು ಕಾಲ ಬಾಷೆಗಳ ಜಾಲ

ಋತುಗಳು ಕೊಟ್ಟ ದಿಕ್ಕುಗಳ ನೆಟ್ಟ

ಮುಂಗಾರು ಮಳೆಗೆ ಬಂಗಾರದ ಕಳೆಗೆ 


ಒಲವಾಯಿತೇ ಹಸಿರು ಬದುಕು ನನ್ನವುಸಿರು

ಹೊಸತನವ ತಂತೆ ಹೊಸ ಹರುಷ ಬಂತೆ

ಸಡಗರದ ಬಾಳು ಸುಡಬೇಡ ಕೇಳು

ದೇವರೇ ಹರಸು ನವ ಜೀವನ ತರಿಸು


**********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

  1. ಹೊಸ ವರ್ಷದ ಶುಭಾಶಯಗಳು ಸರ್🤩

    ReplyDelete

Post a Comment

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20