ಮಂಕುತಿಮ್ಮ
ಬದುಕು ಅನುಭವದ ಯಾತ್ರೆ
ಕನಸು ಮನಸ್ಸಿನ ಪ್ರೀತಿ ಜಾತ್ರೆ
ಜೀವನ ಸುಖ ದುಃಖ್ಖದ ಪಾತ್ರೆ
ಅನುಭುವಿಸು ನಗುವಿನ ಮಾತ್ರೆ
ಮನವೆಂಬ ವೈದ್ಯ ನೀಡುವ ಕನಸು
ಕನಸ ನನಸಾಗಿಸುವ ಮುದ್ದು ಮನಸು
ನೋವು ನಲಿವಿನ ಒಲವ ಸೊಗಸು
ಕಷ್ಟ ಸುಖಗಳ ಪ್ರೀತಿ ನೀ ಸಹಿಸು
ಬೆವರ ಹನಿಯೇ ಮಾತ್ರೆಯ ಶಕ್ತಿ
ಕಾಯಕದಲ್ಲಿ ಮನಸಿಡುವುದೇ ಭಕ್ತಿ
ಶ್ರದ್ದೆಯಲಿ ತೋರು ನಿನ್ನ ಯುಕ್ತಿ
ದೇವರು ನೀಡುವನು ಮನಸ್ಸಿಗೆ ಮುಕ್ತಿ
ಬಾಳು ಬೆಳಗಿತು ನಕ್ಷತ್ರದಂತೆ
ಒಲವ ಸವಿಯು ನೋಟಿನ ಕಂತೆ
ಮರೆತು ಬದುಕು ನೀ ನೋವಿನ ಚಿಂತೆ
ನಾನು ಎಂಬುದು ಅಹಂಕಾರವಂತೆ
ಎಲ್ಲರೂಳಗು ಒಂದಾಗು ತಮ್ಮ
ಕಾಯುವಳು ನಿನ್ನ ಕನ್ನಡಮ್ಮ
ಕತ್ತಲೆ ಹೋಗಿ ಬೆಳುಕು ನಮ್ಮದಮ್ಮ
ರುಚಿಸಿದೆ ಜೀವನ ಪಯಣ ಮಂಕುತಿಮ್ಮ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment