ಕೈ ಮುಗಿವೆ ದೇವಾ

 



ಬೆಟ್ಟವ ಅತ್ತಿ ಭಕ್ತಿಯ ಬಿತ್ತಿ

ದೇವರ ಸುತ್ತಿ ಕೇಳಿದೆ ವರವ

ಓ ದೇವಾ ನೀಡು ನೀ ಮನವ

ದಾರಿಯಲ್ಲಿ ಎಡವಿ ಹೇಳುವ ಚಲವ


ಮೆಟ್ಟಿಲುಗಳು ಮುಟ್ಟಿ ಬಾಗಿಲ ತಟ್ಟಿ

ಕರೆದರೆ ನಿನ್ನ ನೀ ನೋ ಡು ನನ್ನ 

ಮೈತುಂಬಾ ಹೂವು ಭಕ್ತರ ನೋವು

ಅರಿವ ಒಲವು ನೀಡು ಪಲವು


ದೀಪವು ಉರಿದು ಕತ್ತಲೆ ಕಳೆದು

ಮನವು ಬರಿದು ಬೇಡಲು ನೆನೆದು

ಎಲ್ಲಿಹದು ದುಃಖ್ಖ ಭಕ್ತಿಯ ಪಕ್ಕ

ನೋವು ಮಾಯ ನಿನ್ನಯ ಕಾಯ


ಕೈಮುಗಿದು ಬೇಡುವೆನು ನೀಡು ವರವ

ಮನೆಯೆಲ್ಲಾ ಭಕ್ತಿಯಲಿ ಬೆಳಗುವ ಫಲವ

ಮನದಲ್ಲಿ ಶಕ್ತಿ ನಿನ್ನಲ್ಲಿ ಭಕ್ತಿ

ಬೇಡುವೆ ನಿನ್ನ ಕೊಡು ನೀನು ಮುಕ್ತಿ


ಅರಿಸಿನದ ಕೆನ್ನೆ ಕಣ್ಣಲ್ಲಿ ಸನ್ನೆ

ಕೈಯಲ್ಲಿ ಚಕ್ರ ಒಲವ ಶಂಖ

ಅವರಿಸಲು ನಿನ್ನ ಇನ್ನು ಚೆನ್ನಾ

ದೇವರೇ ನೀನು ಪ್ರಕೃತಿ ನಿನ್ನ ಅಭಯ ಸುಕೃತಿ


************ರಚನೆ **-*****

ಡಾ. ಚಂದ್ರಶೇಖರ. ಸಿ. ಹೆಚ್

Comments