ಊಸಿರಿಗೆ ಹೆಸರಿಡುವಾಸೆ
ನಿನ್ನ ಊಸಿರಿಗೆ ಹೆಸರಿಡುವಾಸೆ
ಮನದ ಸವಿ ಒಲವಿಗೆ ನಿನ್ನಾಸೆ
ಪ್ರೇಮದಿ ಕೂಗಿ ನಿನ್ನ ಕರೆವಾಸೆ
ಓ ಗೆಳತಿಯೇ ನಿನಗೇಕೆ ಮುನಿಸೆ
ಒರೆಗಣ್ಣಲಿ ನೋಡಿ ಹಾಕಿದೆ ಚೂರಿ
ನೀನೇಬೇಕೆಂದು ಮನಸ್ಸು ಹೇಳಿದೆ ಸಾರಿ
ನಗುವೆಯ ಒಮ್ಮೆ ನಿನ್ನ ಮೊಗ ತೋರಿ
ಮನಸ್ಸನ್ನು ಕದ್ದ ಕೆಂಪು ಕೆನ್ನೆ ಚೋರಿ
ನುಡಿವಾಗ ನೀನು ಸುಂದರ ಕೋಗಿಲೆ
ನಡೆವಾಗ ನೀನು ಮೈತುಂಬಿದ ನವಿಲೇ
ನಗುವೊಂದು ಮಿನುಗುವ ನಕ್ಷತ್ರ
ನಿನಗಾಗಿ ಬರೆಯಲೇ ಒಲವಿನ ಪತ್ರ
ನೀನಿಲ್ಲದ ಬದುಕು ಸಾವಿನ ಘೋರಿ
ಮನವೇಕೋ ಹುಡುಕಿದೆ ಮುಗಿಲ ದಾರಿ
ಎದೆ ಬಡಿತ ಹೇಳಿದೆ ಪ್ರತಿ ಬಾರಿ
ನಿನ್ನೆ ನನ್ನ ಒಲವಿನ ಸುಂದರಿ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment