ಹುಡುಕಿದೆ ನಿನ್ನ
ಮೌನದ ಯಾತ್ರೆ ಕನಸಿನ ಜಾತ್ರೆ
ಸುಡುವ ವಯಸ್ಸು ಬೆಂಕಿಯ ಪಾತ್ರೆ
ಕಳೆಯುತಿದೆ ಕಾಲ ಸುಡುತ ಬಾಳು
ಯಾರಿಗೆ ಬೇಕು ಈ ಜೀವನದ ಗೋಳು
ಮರೆಯಾಗೋ ಕನಸು ನೆಲೆಯಿಲ್ಲದ ನನಸು
ಬುಸುಗುಟ್ಟಿ ಬಂತು ಮನಸ್ಸನ್ನು ತಿಂತು
ತಿರುಗಿದೆ ಜೀವ ಅಲೆಮಾರಿಯಂತೆ
ಬಯಸದೆ ಬಂತು ನೋವಿನ ಸಂತೆ
ಸಿಕ್ಕಿತೆ ಸಂತೋಷ ಅಮೃತವಾಯಿತೇ ವಿಷ
ಯಾತನೆ ನೂರೆಂಟು ಬದುಕೊಂದ್ದು ಕಗಂಟು
ಬಿಡಿಸಲು ಹೋದೆ ಸುಳಿಯಲಿ ನೊಂದೆ
ಮರೆತಾಗ ನಿನ ನೆನಪು ಏನೋ ಹುರುಪು
ಹಸಿದ ಹೊಟ್ಟೆಗೆ ಇಟ್ಟನ್ನು ಇಟ್ಟಾಗೆ
ಹಕ್ಕಿಯು ಬಳಿ ಬಂದು ಕಿಚ ಗುಟ್ಟಿ
ನವ ಮಾಸದ ಹೃದಯವು ಪ್ರೀತಿ ಬುಟ್ಟಿ
ಯಾರಿಗೆ ನೀಡಲಿ ಮನದ ಪುಷ್ಪ
ಕಣ್ಣೀರು ಕೊನೆಯ ಆನಂದ ಬಾಷ್ಪ
ಸಾಗಲಿ ಬದುಕು ಬೆಳಗಿ ಬೆಳಕು
ಮನದ ದುರಾಸೆ ಕಿತ್ತು ಕೊಳಕು
ಒಲವೆಂಬ ಮಾಯೆ ಒಂದೂ ಹಸಿವು
ಸಿಗುತ್ತಿಲ್ಲ ಏಕೋ ಒಲವ ಸುಳಿವು
*********ರಚನೆ ********
ಡಾ. ಚಂದ್ರಶೇಖರ.ಸಿ. ಹೆಚ್
Very nice Chandru
ReplyDelete