Posts

Showing posts from September, 2021

ನೀನೇ

Image
ನೀನೇ  ಮನದಾಸೆ ನೀನೇ ಓ ನನ್ನ ಚೆಲುವೆ ನನ್ನನು ನೋಡಿ ನೀ ಏಕೆ ನಗುವೇ ಸುಡುವ ಕನಸು ತೆರೆದಿದೆ ಮನಸು ಬಳಿ ಬಂದು ಯಾಕೋ ಕರೆದಿದೆ ವಯಸ್ಸು ಹಸಿಗನಸು ನಿನ್ನದು ಹೊಂಗನಸು ನನ್ನದು ಆಸೆಯ ಬಿತ್ತಿದ ಪ್ರೀತಿಯಮೆತ್ತಿದ ಸಿಹಿಗನಸು ನಮದು ಕನಸನ್ನೆಯಲಿ ಮೋಡಿ ನೆನಪನು ಬರಮಾಡಿ ನಾವಿಬ್ಬರು ಜೊತೆಗೂಡಿ ಸಾಗುವ ನವಜೋಡಿ ತೀರಿದ ದಾಹಕೆ ನೀರು ನಿನಾದೆ ಸುಡುವ ಮನಸ್ಸಿಗೆ  ತಂಗಾಳಿಯಾದೆ  ಮುಳುಗುವ ದೋಣಿಗೆ   ನಾವಿಕನಾದೆ ದೂರದ ಊರಿಗೆ ಪಯಣಿಕ ನಾನಾದೆ ********ರಚನೆ ******** ಡಾ. ಚಂದ್ರಶೇಖರ. ಸಿ.ಹೆಚ್

ಕನ್ನಡತಿಯೇ ನೀನು

Image
ಕನ್ನಡತಿಯೇ ನೀನು  ಕನ್ನಡತಿಯೇ ನೀನು ಪೀತಿಯ ಹಾಲು ಜೇನು ಮೌನದ ಮುತ್ತು ನೀನು ನನ್ನಯ ಸಿಹಿ ಮೀನು ಹೇಳಲು ನಿನ್ನ ಹೆಸರು ಒಲವೇ ನನ್ನ ಉಸಿರು ಕನ್ನಡತಿಯಾಗಿ ನಗುವು ತೋರುತ್ತಿದೆ ಒಲವು ಪ್ರೇಮವನ್ನು ಹೊತ್ತು ತಂದೆ ಪ್ರೀತಿಯನ್ನು ಬಿತ್ತಿ ಬಂದೆ ಮನಸ್ಸಲೆಕೋ ನಿನ್ನ ಮಿಡಿತ ಹೃದಯದಲ್ಲಿ ನಿನ್ನ ಬಡಿತ   ಕನ್ನಡತಿಯ ಪ್ರೀತಿ ತೋರಿದ ಒಲವ ರೀತಿ ನುಡಿವ ಮಾತು ಮುತ್ತು ಮಳೆಯಲಿ ನೆನೆದ ಹೊತ್ತು ಹೃದಯದಲ್ಲಿ ನಿನದೆ ಧ್ಯಾನ ಬಳಿಗೆ ಬಂದ ಸುಂದರ ಮೌನ ಓ ನನ್ನ ಕನ್ನಡತಿ ನನ್ನ ಬೋಂಬೆ  ಪ್ರೇಮದಲ್ಲಿ ಮಧುರ ಗೊಂಬೆ **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ನಿನ್ನ ಕಣ್ಣ ನೋಟ

Image
ನಿನ್ನ ಕಣ್ಣ ನೋಟ  ಕನ್ಯೆ ನಿನ್ನ ಕಣ್ಣ ನೋಟ ಇಡಿಸಿತು ನಾನಾಗೆ ಮಾಟ  ಪ್ರೀತಿ ಎಂಬ ಪದಾದಿ ಆಟ ಹೇಳಿತು ನನ್ನಗೆ ಪಾಠ ಯಾಕೋ ಏನೋ ಮುರಿದ ಮೌನ ಕಾಡಿತು ನನ್ನ ಧ್ಯಾನ ಮನಸ್ಸು ತುಂಬಾ ನಿನ್ನ ಬಡಿತ ಒಲವಿನಲ್ಲಿ ನಿನ್ನ ತುಡಿತ ಕನಸಿನಲ್ಲಿ ನೀ ಬಂದೆ ಪ್ರೀತಿಯನು ಹೊತ್ತು ತಂದೆ ಮನಸ್ಸಿನಲ್ಲಿ ತುಂಟ ನಗುವು  ನೀ ತಂದ ಪ್ರೀತಿ ಒಲವು ಹೃದಯದಿ ಬಂದ ಒಲವು ನೀ ತಂದ ಮನದ ಗೆಲುವು ಮನದ ಹೊಳಪು ನೀನು ಸೌಂದರ್ಯದ ಗಣಿ ನೀನು ಚಿಂತೆ ಏಕೆ ಓ ಒಲವೇ ಕಣ್ಣೀರು ನಿನಾಗಾಗಿ ಅಲವೇ ಸ್ವರದಲ್ಲಿ ರಾಗ ಮೌನ ಮಿಡಿದಿದೆ ನಿನ್ನ ಗಾನ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಅತಿಸರ್ಗ

Image
ಅತಿಸರ್ಗ  ಸವಿನೆನಪಿನ ಅತಿಸರ್ಗ ಗೆಳೆಯರ ಬೀಳ್ಕೊಡುಗೆಯ ಸ್ವರ್ಗt ಅಳಿಯದ ನೆನಪು ಮಾತುಗಳ ಮೆಲುಕು ಕಳೆದ ಕ್ಷಣಗಳ ಹೊಳಪು ಕಲೆತು ಕೂಡಿ ಬೆರೆತು ಆಡಿ ಸವಿಬೆಳಕಿನ ಮೋಡಿ ಮನಸ್ಸುಗಳ ಮುದಗೊಳಿಸಿ ಗೆಳೆತನವ ಅದಗೊಳಿಸಿ ಅಂದವ ತಿದ್ದಿ ತೀಡಿ ಕಳೆದ ಎರಡು ವರ್ಷ ತಂದ ಹೊಸಬಗೆಯ ಹರುಷ ಹೋಗುವಾಗ ನೋವು ಬೇರೆತ ಹೃದಯದ ಕಾವು ಕೂಡಿ ನಲಿದರೆ ಗೆಲುವು ಈ ಅತಿಸರ್ಗದ ಒಲವು ಹೇಳೋಣ ಗೆಳೆಯರಿಗೆ ಬಾಯ್ ಮತೊಮ್ಮೆ ಸಿಕ್ಕಿದಾಗ ಹಾಯ್ ಕೂತು ಕುಡಿಯೋಣ ಒಮ್ಮೆ ಚಾಯ್ ಮತೊಮ್ಮೆ ನಿಮಗೆ ಅತಿಸರ್ಗದ  ಹಾಯ್ ಬಾಯ್ **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ನನಗಾಗಿ ನೀನು

Image
ನನಗಾಗಿ ನೀನು  ಕಣ್ಣಲ್ಲಿ ಕೂಡಿಟ್ಟ ಕಣ್ಣೀರೇ ನೀನು ಮನಸಲ್ಲಿ ಬಚ್ಚಿಠ ಒಲವಿನ ಜೇನು ಸೌಂದರ್ಯದ ಪ್ರಕೃತಿಯೇನು ಮಾಡಿಲ್ಲಲ್ಲಿ ಮುಚ್ಚಿಟ್ಟ ಕೆಂಡವೆ ಬಾನು ನನಗಾಗಿ ದರೆಗಿಳಿದ ಮಳೆಹನಿಯೇ ನೀನು ಕಾರ್ಮೋಡ ಕವಿದಾಗ ನ ಕಂಡ ಮಿಂಚಂದೆ ನೀನು ಆಗಸದಿ ನಕ್ಷತ್ರ ಒಳೆದಂತೆ ಮಿನುಗುವ ಬಾನು ಬಂಗಾರದ ಗಣಿ ನೀನು ಬಾಯಾರಿಸೋ ಕಲ್ಪವೃಕ್ಷವೇ ಹಾಲಜೇನು ಗೋಮಾತೆ ಸುರಿಸುವ ಅಮೃತವೇ ನೀನು ವಿಸ್ಮಯವ ನ ಕಂಡು ಮೂಕನದೆ ನಾನು ನಗುವಾಗ ಬೆಳಕಿನ ಹಲ್ನೋರೆಯೇ ನೀನು ಗಮಗಾಮಿಸೋ ಶ್ರೀಗಂಧವೆ ನೀನು ಮುಂಜಾನೆಯಲ್ಲಿ ಮಂಜಾದೆ ನೀನು ಕಡಲಡಿಯ ಒಳೆವ ಮುತ್ತಾದೆ ನೀನು  ನಸುನಕ್ಕು ನೋಟವ ಬೀರುವ ಹೂವದೇ ನೀನು ಮನಬಿಚ್ಚಿ ಮೈತುಂಬಿ ಹರಿವ ಜರಿಯೇನು ಬಣ್ಣದಲ್ಲಿ ಮಿಂಧಡೆದ್ದ ಕಾಮನಬಿಲ್ಲಾದೆ ನೀನು ಸುರಿವ ಮಳೆಗೆ ಕೊಡೇಯಾದೆ ನೀನು ಒಲವಿನ ನೆನಪಿಗೆ ನೆಲೆಯಾದೆ ನೀನು ನಿನ್ನಯ ಅಂಧಕೆ ಬೆರೆಗಾದೆ ನಾನು *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಗುರು ನೀನು ಗುರಿ ಏನು

Image
ಶಿಕ್ಷಕ  ಬದುಕೆಂಬ ದಾರಿಯಲಿ ಬೇಕು ನಮಗೆ ಶಿಕ್ಷಕ ವಿದ್ಯೆ ಕಲಿಸಿ ಜೀವನವನ್ನೇ ತೋರಿಸುವ ನಮ್ಮ ರಕ್ಷಕ ಬದುಕಿನ ಮೊದಲ ಗುರು ತಾಯಿ ಜೀವನದ ಮೊದಲ ನಡೆ ಅಪ್ಪ ಶಾಲೆಯ ಕನಸುಗಳ ದೀಪ ನಮ್ಮ ಜ್ಞಾನದ ಸ್ವರೂಪ ಶಿಕ್ಷಕ ಬೆಳೆದ ನಮ್ಮ ಕೀರ್ತಿ ನಾವು ಪಡೆದ ಪ್ರೀತಿ ನಮ್ಮ ನಡೆಯ ಕ್ರಾಂತಿ ನನ್ನ ಮನದ ಸ್ಫೂರ್ತಿ  ಬೆಳೆಸೋ ಗುರುವೇ ಶಿಕ್ಷಕ ಕಲ್ಲು ಮುಳ್ಳಿನ ದಾರಿಯಲ್ಲಿ ನೋವು ದುಃಖ್ಖದ ಬೇಲಿಯಲಿ ಗೊತ್ತು ಗುರಿ ಇಲ್ಲದ ಹಾದಿಯಲ್ಲಿ ದಾರಿ ದೀಪವೇ ನಮ್ಮ ಶಿಕ್ಷಕ ಊರು ಊರು ಸುತ್ತಿ ಕನಸುಗಳ ಹೊತ್ತು ಜೀವನದಿ ಬೇಸತ್ತು ಮಾಡುವಾಗ ಕಸರತ್ತು ಮೊನ್ನೆಡೆಸುವ ನಮ್ಮ ಗುರುವೇ ಶಿಕ್ಷಕ ಬಾಳ ನೋಗವ ಹೊತ್ತು ಪ್ರೀತಿ ನಗುವ ಬಿತ್ತು ತೆರೆದ ಮನದ ಮುತ್ತು ನಮ್ಮ ಹೃದಯದ ಸ್ವತ್ತು ಶಿಕ್ಷಕ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ನನ್ನವಳು

Image
ನನ್ನವಳು ನನ ಮನಸು ಹೇಳುತಿದೆ ನೀ ನನಗೆಂದು ಬರುತಿದೆ ನೆನಪು ನೀ ನನ್ನವಳೆಂದು ಆಕಾಶದಿ ನಕ್ಷತ್ರ ನೀನಾದೆ ಹುಣ್ಣಿಮೆಯ ಚಂದ್ರನ ಬೆಳಕಾದೆ ಸುಡುವ ಸೂರ್ಯನ ಕರಗಿಸಿದ ಒಲವಾದೆ ನನ್ನಯ ಮನಸ್ಸಿನ ಪ್ರೀತಿಯ ಕಣ್ಣದೆ ಬಾಳಲಿ ಬಂದ ಸಿಹಿಗನಸು ನಿನಗಾಗಿ ಕಾಯುತಿದೆ ಹೊಂಗನಸು ಮೌನದ ಮಾತು ಒಲವ ಹೇಳಿದೆ ನಿನ್ನಯ ನೆನಪು ನನ್ನ ಕಾಡಿದೆ ಬಯಕೆ ನೂರೆಂಟು ಕತೆಯ ಹೇಳಿದೆ ಸುಡುವ ಬಿಸಿಲಿಗೆ ನಾನು ಬಳಲಿದೆ ನೀನೇ ನನ್ನವಳೆಂದು ಮನವು ಹೇಳಿದೆ  ಯಾಕೆ ಕಾಡುವೆ ನನ್ನ ಒಲವೇ ಒಮ್ಮೆ ಎಳೆಯ ನಾನೆ ಚೆಲುವೆ ನನಗಾಗಿ ಬಂದ ಪ್ರಿಯಾ ವರವೇ ಹಾಡಲಿ ಬಂದ ನನ್ನ ಸ್ವರವೇ ಮೌನದ ಮಾತು ನುಡಿ ಯಾಯಿತು  ಪ್ರೀತಿಯ ಜ್ವರವು ಬಂದಾಯಿತು ನೀ ನನ್ನವಳೆಂದು ತಿಳಿದಾಯಿತು ಯಾಕೋ ಏನೋ ಮನಸಾಯತು *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಪುಸ್ತಕ

Image
ಪುಸ್ತಕವ ಬರೆದೇನು ನಾನು ಪುಸ್ತಕವ ನೋಡಿ ಬಿಡುಗಡೆ ಸಂಭ್ರಮವ ವಿಷಯವು ರಾಸಾಯನಶಾಸ್ತ್ರ ತೆರೆದಿದೆ ಕೆಮಿಕಲ್ಸ್ ಸೂತ್ರ ಮೋಲ್ ಪ್ರಮಾಣವನ್ನು ಹೊಂದಿಸಿ ದುಂಡಾದ ಗಾಜಿನ ಫ್ಲಾಸ್ಕಲಿ ಸೇರಿಸಿ ಅಣು ಅಣುಗಳು ಬೆರೆಯುವ ಪ್ರೇಮ ಪತ್ರವನ್ನು ತೋರಿಸಿ  ಪರಮಾಣು ಗಳು ಕೂಡಿ ಅಣುಗಳು  ಅಣುಗಳು ಕೂಡಿ ಸಂಯುಕ್ತ  ಒಂದಕೊಂದು ಡಿಕ್ಕಿ ಒಡೆದು ಹುಟ್ಟಿತು ಉತ್ಪನ್ನ ಒಂದೂ ವೈದ್ಯರ ಬಳಿ ಬಂದೆ ನೋವನು ಹೊತ್ತು ತಂದೆ ಬಿಪಿ ಯು ಸರಿಯಿತ್ತು  ಎನಗೆ  ಹೃದಯದ ಬಡಿತ ಕೊನೆಗೆ  ಓಷಧಿ ಗುಣವಿರುವ  ಮಾತ್ರೆ ನುಂಗಲು ರೋಗಿಗಳ ಜಾತ್ರೆ ಕಾಯಿಲೆ ಗುಣವಾಯಿತು ದೇಹವು ಹಗುರಯಿತು ಬರೆದೇನು ನಾನು ಪುಸ್ತಕವ ನೋಡಿ ಬಿಡುಗಡೆ ಸಂಭ್ರಮವ ಓದಿ ತಿಳಿಯಿರಿ ರಸಾಯನಶಾಸ್ತ್ರ ಅಣುಗಳು ಡಿಕ್ಕಿ ಯ ತಂತ್ರ  ಉತ್ಪನ್ನ ಸಂಬ್ರಾಮಿಸುವ ಮಂತ್ರ ***********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್