ಪುಸ್ತಕ
ಪುಸ್ತಕವ |
ಬರೆದೇನು ನಾನು ಪುಸ್ತಕವ
ನೋಡಿ ಬಿಡುಗಡೆ ಸಂಭ್ರಮವ
ವಿಷಯವು ರಾಸಾಯನಶಾಸ್ತ್ರ
ತೆರೆದಿದೆ ಕೆಮಿಕಲ್ಸ್ ಸೂತ್ರ
ಮೋಲ್ ಪ್ರಮಾಣವನ್ನು ಹೊಂದಿಸಿ
ದುಂಡಾದ ಗಾಜಿನ ಫ್ಲಾಸ್ಕಲಿ ಸೇರಿಸಿ
ಅಣು ಅಣುಗಳು ಬೆರೆಯುವ
ಪ್ರೇಮ ಪತ್ರವನ್ನು ತೋರಿಸಿ
ಪರಮಾಣು ಗಳು ಕೂಡಿ ಅಣುಗಳು
ಅಣುಗಳು ಕೂಡಿ ಸಂಯುಕ್ತ
ಒಂದಕೊಂದು ಡಿಕ್ಕಿ ಒಡೆದು
ಹುಟ್ಟಿತು ಉತ್ಪನ್ನ ಒಂದೂ
ವೈದ್ಯರ ಬಳಿ ಬಂದೆ
ನೋವನು ಹೊತ್ತು ತಂದೆ
ಬಿಪಿ ಯು ಸರಿಯಿತ್ತು ಎನಗೆ
ಹೃದಯದ ಬಡಿತ ಕೊನೆಗೆ
ಓಷಧಿ ಗುಣವಿರುವ ಮಾತ್ರೆ
ನುಂಗಲು ರೋಗಿಗಳ ಜಾತ್ರೆ
ಕಾಯಿಲೆ ಗುಣವಾಯಿತು
ದೇಹವು ಹಗುರಯಿತು
ಬರೆದೇನು ನಾನು ಪುಸ್ತಕವ
ನೋಡಿ ಬಿಡುಗಡೆ ಸಂಭ್ರಮವ
ಓದಿ ತಿಳಿಯಿರಿ ರಸಾಯನಶಾಸ್ತ್ರ
ಅಣುಗಳು ಡಿಕ್ಕಿ ಯ ತಂತ್ರ
ಉತ್ಪನ್ನ ಸಂಬ್ರಾಮಿಸುವ ಮಂತ್ರ
***********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment