ನನ್ನವಳು
ನನ್ನವಳು |
ನನ ಮನಸು ಹೇಳುತಿದೆ ನೀ ನನಗೆಂದು
ಬರುತಿದೆ ನೆನಪು ನೀ ನನ್ನವಳೆಂದು
ಆಕಾಶದಿ ನಕ್ಷತ್ರ ನೀನಾದೆ
ಹುಣ್ಣಿಮೆಯ ಚಂದ್ರನ ಬೆಳಕಾದೆ
ಸುಡುವ ಸೂರ್ಯನ ಕರಗಿಸಿದ ಒಲವಾದೆ
ನನ್ನಯ ಮನಸ್ಸಿನ ಪ್ರೀತಿಯ ಕಣ್ಣದೆ
ಬಾಳಲಿ ಬಂದ ಸಿಹಿಗನಸು
ನಿನಗಾಗಿ ಕಾಯುತಿದೆ ಹೊಂಗನಸು
ಮೌನದ ಮಾತು ಒಲವ ಹೇಳಿದೆ
ನಿನ್ನಯ ನೆನಪು ನನ್ನ ಕಾಡಿದೆ
ಬಯಕೆ ನೂರೆಂಟು ಕತೆಯ ಹೇಳಿದೆ
ಸುಡುವ ಬಿಸಿಲಿಗೆ ನಾನು ಬಳಲಿದೆ
ನೀನೇ ನನ್ನವಳೆಂದು ಮನವು ಹೇಳಿದೆ
ಯಾಕೆ ಕಾಡುವೆ ನನ್ನ ಒಲವೇ
ಒಮ್ಮೆ ಎಳೆಯ ನಾನೆ ಚೆಲುವೆ
ನನಗಾಗಿ ಬಂದ ಪ್ರಿಯಾ ವರವೇ
ಹಾಡಲಿ ಬಂದ ನನ್ನ ಸ್ವರವೇ
ಮೌನದ ಮಾತು ನುಡಿ ಯಾಯಿತು
ಪ್ರೀತಿಯ ಜ್ವರವು ಬಂದಾಯಿತು
ನೀ ನನ್ನವಳೆಂದು ತಿಳಿದಾಯಿತು
ಯಾಕೋ ಏನೋ ಮನಸಾಯತು
*********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Sir Super kavana
ReplyDelete