ನೀನೇ
ನೀನೇ |
ಮನದಾಸೆ ನೀನೇ
ಓ ನನ್ನ ಚೆಲುವೆ
ನನ್ನನು ನೋಡಿ
ನೀ ಏಕೆ ನಗುವೇ
ಸುಡುವ ಕನಸು
ತೆರೆದಿದೆ ಮನಸು
ಬಳಿ ಬಂದು ಯಾಕೋ
ಕರೆದಿದೆ ವಯಸ್ಸು
ಹಸಿಗನಸು ನಿನ್ನದು
ಹೊಂಗನಸು ನನ್ನದು
ಆಸೆಯ ಬಿತ್ತಿದ
ಪ್ರೀತಿಯಮೆತ್ತಿದ
ಸಿಹಿಗನಸು ನಮದು
ಕನಸನ್ನೆಯಲಿ ಮೋಡಿ
ನೆನಪನು ಬರಮಾಡಿ
ನಾವಿಬ್ಬರು ಜೊತೆಗೂಡಿ
ಸಾಗುವ ನವಜೋಡಿ
ತೀರಿದ ದಾಹಕೆ
ನೀರು ನಿನಾದೆ
ಸುಡುವ ಮನಸ್ಸಿಗೆ
ತಂಗಾಳಿಯಾದೆ
ಮುಳುಗುವ ದೋಣಿಗೆ
ನಾವಿಕನಾದೆ
ದೂರದ ಊರಿಗೆ
ಪಯಣಿಕ ನಾನಾದೆ
********ರಚನೆ ********
ಡಾ. ಚಂದ್ರಶೇಖರ. ಸಿ.ಹೆಚ್
Comments
Post a Comment