ಗುರು ನೀನು ಗುರಿ ಏನು
ಶಿಕ್ಷಕ |
ಬದುಕೆಂಬ ದಾರಿಯಲಿ
ಬೇಕು ನಮಗೆ ಶಿಕ್ಷಕ
ವಿದ್ಯೆ ಕಲಿಸಿ ಜೀವನವನ್ನೇ
ತೋರಿಸುವ ನಮ್ಮ ರಕ್ಷಕ
ಬದುಕಿನ ಮೊದಲ ಗುರು ತಾಯಿ
ಜೀವನದ ಮೊದಲ ನಡೆ ಅಪ್ಪ
ಶಾಲೆಯ ಕನಸುಗಳ ದೀಪ
ನಮ್ಮ ಜ್ಞಾನದ ಸ್ವರೂಪ ಶಿಕ್ಷಕ
ಬೆಳೆದ ನಮ್ಮ ಕೀರ್ತಿ
ನಾವು ಪಡೆದ ಪ್ರೀತಿ
ನಮ್ಮ ನಡೆಯ ಕ್ರಾಂತಿ
ನನ್ನ ಮನದ ಸ್ಫೂರ್ತಿ
ಬೆಳೆಸೋ ಗುರುವೇ ಶಿಕ್ಷಕ
ಕಲ್ಲು ಮುಳ್ಳಿನ ದಾರಿಯಲ್ಲಿ
ನೋವು ದುಃಖ್ಖದ ಬೇಲಿಯಲಿ
ಗೊತ್ತು ಗುರಿ ಇಲ್ಲದ ಹಾದಿಯಲ್ಲಿ
ದಾರಿ ದೀಪವೇ ನಮ್ಮ ಶಿಕ್ಷಕ
ಊರು ಊರು ಸುತ್ತಿ
ಕನಸುಗಳ ಹೊತ್ತು
ಜೀವನದಿ ಬೇಸತ್ತು
ಮಾಡುವಾಗ ಕಸರತ್ತು
ಮೊನ್ನೆಡೆಸುವ ನಮ್ಮ ಗುರುವೇ ಶಿಕ್ಷಕ
ಬಾಳ ನೋಗವ ಹೊತ್ತು
ಪ್ರೀತಿ ನಗುವ ಬಿತ್ತು
ತೆರೆದ ಮನದ ಮುತ್ತು
ನಮ್ಮ ಹೃದಯದ ಸ್ವತ್ತು ಶಿಕ್ಷಕ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment