ಅತಿಸರ್ಗ
ಅತಿಸರ್ಗ |
ಸವಿನೆನಪಿನ ಅತಿಸರ್ಗ
ಗೆಳೆಯರ ಬೀಳ್ಕೊಡುಗೆಯ ಸ್ವರ್ಗt
ಅಳಿಯದ ನೆನಪು
ಮಾತುಗಳ ಮೆಲುಕು
ಕಳೆದ ಕ್ಷಣಗಳ ಹೊಳಪು
ಕಲೆತು ಕೂಡಿ
ಬೆರೆತು ಆಡಿ
ಸವಿಬೆಳಕಿನ ಮೋಡಿ
ಮನಸ್ಸುಗಳ ಮುದಗೊಳಿಸಿ
ಗೆಳೆತನವ ಅದಗೊಳಿಸಿ
ಅಂದವ ತಿದ್ದಿ ತೀಡಿ
ಕಳೆದ ಎರಡು ವರ್ಷ
ತಂದ ಹೊಸಬಗೆಯ ಹರುಷ
ಹೋಗುವಾಗ ನೋವು
ಬೇರೆತ ಹೃದಯದ ಕಾವು
ಕೂಡಿ ನಲಿದರೆ ಗೆಲುವು
ಈ ಅತಿಸರ್ಗದ ಒಲವು
ಹೇಳೋಣ ಗೆಳೆಯರಿಗೆ ಬಾಯ್
ಮತೊಮ್ಮೆ ಸಿಕ್ಕಿದಾಗ ಹಾಯ್
ಕೂತು ಕುಡಿಯೋಣ ಒಮ್ಮೆ ಚಾಯ್
ಮತೊಮ್ಮೆ ನಿಮಗೆ ಅತಿಸರ್ಗದ ಹಾಯ್ ಬಾಯ್
**********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Nice sir 😍😍..
ReplyDeleteThank you so much ❤