ನಿನ್ನ ಕಣ್ಣ ನೋಟ
ನಿನ್ನ ಕಣ್ಣ ನೋಟ |
ಕನ್ಯೆ ನಿನ್ನ ಕಣ್ಣ ನೋಟ
ಇಡಿಸಿತು ನಾನಾಗೆ ಮಾಟ
ಪ್ರೀತಿ ಎಂಬ ಪದಾದಿ ಆಟ
ಹೇಳಿತು ನನ್ನಗೆ ಪಾಠ
ಯಾಕೋ ಏನೋ ಮುರಿದ ಮೌನ
ಕಾಡಿತು ನನ್ನ ಧ್ಯಾನ
ಮನಸ್ಸು ತುಂಬಾ ನಿನ್ನ ಬಡಿತ
ಒಲವಿನಲ್ಲಿ ನಿನ್ನ ತುಡಿತ
ಕನಸಿನಲ್ಲಿ ನೀ ಬಂದೆ
ಪ್ರೀತಿಯನು ಹೊತ್ತು ತಂದೆ
ಮನಸ್ಸಿನಲ್ಲಿ ತುಂಟ ನಗುವು
ನೀ ತಂದ ಪ್ರೀತಿ ಒಲವು
ಹೃದಯದಿ ಬಂದ ಒಲವು
ನೀ ತಂದ ಮನದ ಗೆಲುವು
ಮನದ ಹೊಳಪು ನೀನು
ಸೌಂದರ್ಯದ ಗಣಿ ನೀನು
ಚಿಂತೆ ಏಕೆ ಓ ಒಲವೇ
ಕಣ್ಣೀರು ನಿನಾಗಾಗಿ ಅಲವೇ
ಸ್ವರದಲ್ಲಿ ರಾಗ ಮೌನ
ಮಿಡಿದಿದೆ ನಿನ್ನ ಗಾನ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment