ಕನ್ನಡತಿಯೇ ನೀನು
ಕನ್ನಡತಿಯೇ ನೀನು |
ಕನ್ನಡತಿಯೇ ನೀನು
ಪೀತಿಯ ಹಾಲು ಜೇನು
ಮೌನದ ಮುತ್ತು ನೀನು
ನನ್ನಯ ಸಿಹಿ ಮೀನು
ಹೇಳಲು ನಿನ್ನ ಹೆಸರು
ಒಲವೇ ನನ್ನ ಉಸಿರು
ಕನ್ನಡತಿಯಾಗಿ ನಗುವು
ತೋರುತ್ತಿದೆ ಒಲವು
ಪ್ರೇಮವನ್ನು ಹೊತ್ತು ತಂದೆ
ಪ್ರೀತಿಯನ್ನು ಬಿತ್ತಿ ಬಂದೆ
ಮನಸ್ಸಲೆಕೋ ನಿನ್ನ ಮಿಡಿತ
ಹೃದಯದಲ್ಲಿ ನಿನ್ನ ಬಡಿತ
ಕನ್ನಡತಿಯ ಪ್ರೀತಿ
ತೋರಿದ ಒಲವ ರೀತಿ
ನುಡಿವ ಮಾತು ಮುತ್ತು
ಮಳೆಯಲಿ ನೆನೆದ ಹೊತ್ತು
ಹೃದಯದಲ್ಲಿ ನಿನದೆ ಧ್ಯಾನ
ಬಳಿಗೆ ಬಂದ ಸುಂದರ ಮೌನ
ಓ ನನ್ನ ಕನ್ನಡತಿ ನನ್ನ ಬೋಂಬೆ
ಪ್ರೇಮದಲ್ಲಿ ಮಧುರ ಗೊಂಬೆ
**********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment