Posts

ಹೊಸವರ್ಷ 2026

Image
  ಹೊಸವರ್ಷ ಬಂತು ಮನದಿ ಹೊಸ ಹರುಷ ತಂತು ನಭದಿ ಹಸಿರು ಉಸಿರಾಗಿ ಕುಣಿದಿದೆ ಹೆಸರು ಎಲ್ಲೆಡೆಯು ಹರಡಿದೆ  ಹೊಸದು ಹೆಸರಲಿ ಸಂಭ್ರಮ  ಪ್ರೀತಿಯ ಬಾಳಲಿ ಅನುಪಮ  ನೂರೆಂಟು  ಬಣ್ಣದ ಕನಸು  ಆಚರಸಿಲು ಸಿದ್ದ ಹೊಸ ತಿನಿಸು ಹಳೆಯ ವರ್ಷದ ಮೇಲೆ ಮುನಿಸು  ಹೊಸ ವರ್ಷಕ್ಕೆ ಹೊಸದಿರಿಸು  ತಂತು ಬಾಳಲಿ ಹೊಸ ಉಲ್ಲಾಸ  ಕಾಯಕದಿ ಕಾಣು ನೀ ಕೈಲಾಸ ಯೋಜನೆಗಳ ಬಂಡಿಯ ಸಾಲು ಬದುಕು ಕಷ್ಟ ಸುಖದ ನೂಲು  ಜೀವನ ಹೊಸ ಬಗೆ ಗೋಳು  ಸಾಗದಿದ್ದಾರೆ ಎಲ್ಲಾ ಹಾಳು  ತಿಳಿದು ನೀ ನೆಡೆ ಮನುಜ ಸೋಲು ಗೆಲುವು ಸಹಜ ಬಿದ್ದರೆ ನೀನು ಕುಗ್ಗಬೇಡ  ಎದ್ದರೆ ಎಲ್ಲಾ ಮರೆಯಬೇಡ  ಸಾಗು ನೀ ಭಕ್ತಿಯ ಹಾದಿಯಲಿ  ಬಜಿಸು ನೀ ದೈವದ ನಾಮದಲಿ  ಬದುಕು ದೇವರ ಕರುಣೆಯಲಿ ಪ್ರೀತಿ ತುಂಬಲಿ ಮನೆ  ಮನದಲಿ  ಹೊಸವರ್ಷ ಬಂತು ಮನದಿ ಹೊಸ ಹರುಷ ತಂತು ನಭದಿ ಹಸಿರು ಉಸಿರಾಗಿ ಕುಣಿದಿದೆ ಹೆಸರು ಎಲ್ಲೆಡೆಯು ಹರಡಿದೆ  **********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ನನ್ನ ಕವಿತೆ

Image
  ಮನದ ಒಳಗೇ ಮೂಡಿದ ಕವಿತೆ ಒಮ್ಮೆ ಕೂಗಿ ಕರೆದಿದೆ ಅಂದ ಚೆಂದ ತೂಗಿ ನಲಿದು ಮುಗುಳ್ನಗೆಯ ಬೀರಿದೆ  ವರ್ಣಿಸಲು ಪದಗಳಿಲ್ಲ ಕವಿತೆ ಅಂದ ಚೆಂದವ ಬಣ್ಣ ಬಳಿದು ನೋಡುತ್ತಿದ್ದರೆ ಸೂಸುತಿದೆ ಗಂಧವ  ನೋವು ಹೊತ್ತು ತರಲು  ಜೀವ ನೀನು ತುಂಬಿದೆ  ಖುಷಿಯೂ ನನ್ನಲಿ ಬರಲು ಕಾಲವೆಕೋ ಮಾಗಿದೆ ಸೋಲು ಎಂಬ ಬೇಸರ ನನ್ನಲೆಕೋ ಮೂಡಿದೆ ಗೆದ್ದು ನಾನು ಬೀಗಲು ಪ್ರಶಸ್ತಿ ನನಗೆ ಬೇಕಿದೆ ನನ್ನ ನೆನಪು ನಿಮಗೆ ಬಿಡದೆ ಕಾಡಿ ಬಿಡುವುದೇ ಸಾಲುಗಳಲಿ ಮಾತು ಏಕೋ ಮೌನವಾಗಿದೆ ಹೇಳಲು ಹೊರಟ ನೋವು ಕಣ್ಣೀರು ಹಾಕಿದೆ  ಮನಕೆ ತಗುಲಿದ ಮಾತು ನೂರು ಕಥೆ ಹೇಳಿದೆ ಬರೆಯ ಹೊರಟ ಕವಿತೆ ಹೂವಿನಂತೆ ಅರಳಿದೆ ಕಾದು ಕೂತ ಜೇನು ನೊಣ ಸವಿಯ ತಾನೆ ಸವಿದಿದೆ ಬರೆದ ಪದಗಳು ಕಾಲಿಯಾಗಿ ಕವಿತೆ ಮೂಕವಾಗಿದೆ  ಓದಿ ಒಮ್ಮೆ ನನ್ನ ಕಥೆಯ ಎಂದು ಕವಿತೆ ಕೂಗಿ ಕರೆದಿದೆ  **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ನೋವು ತುಂಬಿ

Image
  ಭಾವದೊಳಗೆ ನೋವು ತುಂಬಿ  ಮನಸ್ಸು ಅಳುವುದೇ  ದೇಹದೊಳಗೆ ವಯಸ್ಸು ನಂಬಿ  ಕನಸು ಕುಣಿವುದೆ  ಗೆದ್ದ ಖುಷಿಯು ಕಣ್ಣೀರಾಗಿ ಆನಂದ  ಭಾಷ್ಪ ಸುರಿವುದೇ  ನಗುವ ಚಿಲುಮೆ ಮುಖದಿ ಅರಳಿ  ಭಾವ ಮಿಡಿವುದೇ  ಏಳು ಬೀಳು ಜೀವನದಿ ಉಂಟು  ಸೋಲು ಅಳುವುದೇ  ಗೆದ್ದ ಖುಷಿಯಲ್ಲಿ ದೇಹ ಕುಣಿದು  ಗೆಲುವು ನಗುವುದೇ  ಬಾಳ ಪಯಣ ಜೋಡಿ ನಂಬಿ  ದೂರ ನಡೆವುದೇ  ಬಾಳ ನೋಗವು ಮುರಿದು ಬಿದ್ದು  ಬಂಡಿ ಅಳುವುದೇ  ಸಾಗಬೇಕು ನಾವು ಎಲ್ಲ ಸಹಿಸಿ  ದೂರ ತೀರಕೆ  ಈಜ ಬೇಕು ನಾವು ಎಲ್ಲಾ ಸಹಿಸಿ  ಬಾಳ ದಡಕ್ಕೆ  ನೂಕಬೇಕು ನಾವು ಇಲ್ಲಿ ಬದುಕ  ದೋಣಿಯ ಸವೆಸಬೇಕು ಕಾಲವನ್ನು ನಡೆಸುತ   ಸಿಹಿ ಬಾಳ್ವೆಯ **********ರಚನೆ*******  ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಬಾಳು ಸುಂದರ ಪಯಣ

Image
  ಹುಟ್ಟು ಒಂದು ತಿಳಿಯದ ಜನನ  ಜೀವನ ಒಂದು ಸುಂದರ ಪಯಣ  ನಮಗೆ ಇರುವುದು ಒಂದೇ ಬಾಳು  ಸುಮ್ಮನೆ ಕೂತರೆ ಬದುಕು ಹಾಳು  ಇರುವ ತನಕ ಒಳ್ಳೆಯದು ಮಾಡು  ಬೇಕು ಬೇಡ ಚಿಂತೆಯ ಬಿಡು  ಕಾಲವನ್ನು ಕಾದು ಕಾದು ಧೂಕು  ಸೋಲುಗಳನ್ನು ತಳ್ಳಿದರೆ ಸಾಕು  ಗೆಲುವು ನಮಗೆ ಶಾಶ್ವತ ಅಲ್ಲ  ಜೀವನ ರುಚಿಯ ಬೇವು ಬೆಲ್ಲ  ಸುಖ ದುಃಖ ಎರಡು ಮಾಮೂಲಿ  ದಿನದ ದುಡಿಮೆ ನಮ್ಮ ಖಯಾಲಿ  ಕಷ್ಟಗಳನ್ನು ನೂಕುತ ತಳ್ಳಿ ಬಿಡು ಚಿಂತೆಗಳನ್ನು ಬೆಂಕಿಯಲ್ಲಿ ಸುಟ್ಟು ಬಿಡು  ಬಾಳನ್ನು ಸರಿಯಾಗಿ ಬದುಕಿ ಬಿಡು  ದೇವರ ನಾಮ ಬಜಿಸಿ ಬಿಡು ಮೂರು ದಿನದ ಬದುಕ ಬಾಳು  ನೋವು ನಲಿವುಗಳೆಂಬ ಗೋಳು  ಎಡರು ತೊಡರು ಏಳು ಬೀಳು  ಬಾಳ ಪಯಣ ಸುಂದರ ಕೂಳು  **********ರಚನೆ**********  ಡಾಕ್ಟರ್ ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಕಣ್ಣೀರ ಹನಿ*

Image
  ಎದೆಗೋಡೆದ ದುಃಖದ ಮಾತೊಂದು ಮನದಲ್ಲಿ ಸತ್ತಿತ್ತು  ಕಣ್ಣೀರು ಹನಿಯಾಗಿ ತಿಳಿ ನೀಲಿ ಕಡಲೊಳಗೆ ಸೇರಿತ್ತು ದುಃಖವು ಜಿನುಗಿ ಜಿನುಗಿ ಒಡಲೊಳಗೆ ಬೆಂದಿತ್ತು  ಮೂಕ ವೇದನೆಯು ಮನೆಯನ್ನು ಸುಟ್ಟು ತಿಂದಿತ್ತು ಯಾರೋ ಚೆಲ್ಲಿದ ಬಣ್ಣ ಕಾಮನಬಿಲ್ಲಾಗಿ ಮೂಡಿತ್ತು  ಬಿಸಿಲಲ್ಲಿ ಸುರಿದ ಮಳೆ ಇಳೆಗೆ ನೀರನ್ನು ಹೋದಿಸಿತ್ತು  ಭೂಮಿಯು ಕಾವಾಗಿ ಸುಡುತಾ ನೆಲವೆಲ್ಲ ಬಿರಿದಿತ್ತು ಹಸಿರಲ್ಲಿ ಕೆಂಪು ಹೂವೊಂದು ಮಸಣವ ಸೇರಿತ್ತು  ಈ ಲೋಕವು ನೂರೆಂಟು ಸುಳ್ಳುಪಳ್ಳುಗಳ ಸಂತೆ ಸತ್ಯಕ್ಕೆ ಕೊಡಲಿ ಪೆಟ್ಟು ಅಧರ್ಮದ ನೆಲೆಯ ಕಂತೆ  ಮೋಸ ತುಂಬಿದ ಮನುಜನಿಗೆ ನ್ಯಾಯವೆಂಬ ಚಿಂತೆ  ಯಾರಿಗೆ ನೀಡುವನು ವರವ ದೇವರು ನಿಂತೆ ಸುಡುಗಾಡಿನಲ್ಲಿ ಸಿಗುವುದೆ ಸಂತೋಷದ ಚಿಲುಮೆ  ದೇಹ ತೋರೆದ ಮನುಜನಿಗೆ ಈ ನ್ಯಾಯವೇ ಒಲುಮೆ  ಪರಲೋಕ ಸೇರಿತು ಆತ್ಮ ಮಸಣದಲ್ಲಿ ಇದೇ ಪ್ರೇತಾತ್ಮ  ಕಾಯುವವರು ಯಾರು ಬಿಟ್ಟು ಹೋದ ಜೋಳಿಗೆಯನ್ನ ಬ್ರಹ್ಮನ ಮೂರಕ್ಷರದ ಬರಹ ತಿದ್ದಲು ಆಗಲಿಲ್ಲ  ವಿಧೀ  ಎಂಬ ಬಲು ಕಪಟ ಯಾರನ್ನು ಬಿಡಲಿಲ್ಲ  ಆರು ಮೂರಡಿಯ ಮಂಟಪವೆ ನೆಲೆಯಾಯಿತಲ್ಲ  ಎಳು ಬಿಳಿನ ಜೀವನ ಕೊನೆಗೂ ಕೊನೆಯಾಯ್ತಲ್ಲ  ***********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಸಾಯಬೇಡ ಮನವೇ

Image
  ಚಿಂತೆಯೆಂಬ ಚಿತೆಯಲ್ಲಿ ಬೇಯಬೇಡ ಮನವೇ ನಕ್ಕು ನೀ ಒಮ್ಮೆ ತಿಳಿಯಾಗು  ಆಸೆಗಳ ಸಂತೆಯಲ್ಲಿ ಸಾಯಬೇಡ ಮನವೇ ನಿಟ್ಟುಸಿರು ಬಿಟ್ಟು ನೀ ಒಮ್ಮೆ ಗೆಲುವಾಗು//ಪಲ್ಲವಿ// ಕನಸುಗಳ ಮರುಭೂಮಿಯಲ್ಲಿ ಸಿಗುವುದಾದರೂ ಏನು  ಸಮುದ್ರದ ನೀರು ಕುಡಿದರೆ ರುಚಿಸುವುದೇನು ಯಾರ ಪಾಪದ ಕರ್ಮ ಯಾರೋ ಮೂಡಿಗೋ  ಯಾರೋ ಬೇವರ ಹನಿಯು ಯಾರೋ ಮನೆಗೋ  ಜೀವನದಿ ಒಳಿತು ಮಾಡಿದರೆ ಸಿಗುವುದೇ ಸ್ವರ್ಗ  ಯಾರೋ ಪಾಪಕೆ ಇನ್ನ ಯಾರಿಗೂ ನರಕ ಆಡಿ ಆಡಿ ಮನವು ನೋಂದೇಾಯ್ತು  ಬೇಡಿ ಬೇಡಿ ತನುವು ಸುಸ್ತಾಯ್ತೋ ಯಾವ ಹೊಲದ ಹೂವು ಯಾವ ದೇವರಿಗೂ  ಯಾರ ಮಲ್ಲಿಗೆ ಯಾರೋ ಮುಡಿಯಲಿ  ಯಾರ ಕನಸಿನ ದೀಪ ಎಲ್ಲೋ  ಬೆಳಗಿತು ಏಕೋ  ಯಾರ ನೋವಿನ ಶಾಪ ಯಾರಿಗೋ ತಗುಲಿತು ಏಕೋ  **********ರಚನೆ********* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮನವ ಕಲಕಿದೆ

Image
  ತಿಳಿ ಮನವ ಕಲಕಿ ರಾಡಿ ಮಾಡಿದ ಒಲವೇ ಈ ಬದುಕಿಗೆ ನೀನೆ ತಾನೆ ಗೆಲುವೆ ಕಣ್ಣೀರು ನನ್ನಯ ಬಾಳಲಿ ತುಂಬಿ ಸೋತೆ ನಾನು ಈ ಒಲವ ನಂಬಿ// ಪಲ್ಲವಿ// ಜೀವನವಾಯ್ತು ಗೋಳಿನ ನರಕ ಯಾರು ನೀಡಬೇಕು ಪ್ರೀತಿಯ ಸರಕ  ಯೌವ್ವನದ ಬಯಕೆಗೆ ತಣ್ಣೀರು ಬಿಟ್ಟೆ ಆಸೆಯ ಜಾಡಲಿ ಹೊಡೆದಿದೆ ಬಾಳ ಕಟ್ಟೆ  ರುಚಿಯೇ ಇಲ್ಲ ಜೀವನದ ಊಟ ಕಲಿತರು ಕೂಡ ಮರೆತ  ಪಾಠ  ಜೀವನ ಏಳು ಬಿಳಿನ ಆಟ ಕಲಿತು ಒಡಬೇಕು ನಾವು ಓಟ ಸೋಲಲಿ ಕಲಿಯುವುದು ಬೇಕಾದಷ್ಟು ನೊವಲಿ ತಿಳಿಯುವುದು ತಿಳಿದಷ್ಟು ಬಾಳ ಪಯಣ ಬೇಸರ ತಂದಿದೆ ಬದುಕು ಏಕೋ ಕುಂಟುತ್ತ ನಡೆದಿದೆ ***********ರಚನೆ******** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ