ಸಾಯಬೇಡ ಮನವೇ
ಚಿಂತೆಯೆಂಬ ಚಿತೆಯಲ್ಲಿ ಬೇಯಬೇಡ ಮನವೇ
ನಕ್ಕು ನೀ ಒಮ್ಮೆ ತಿಳಿಯಾಗು
ಆಸೆಗಳ ಸಂತೆಯಲ್ಲಿ ಸಾಯಬೇಡ ಮನವೇ
ನಿಟ್ಟುಸಿರು ಬಿಟ್ಟು ನೀ ಒಮ್ಮೆ ಗೆಲುವಾಗು//ಪಲ್ಲವಿ//
ಕನಸುಗಳ ಮರುಭೂಮಿಯಲ್ಲಿ ಸಿಗುವುದಾದರೂ ಏನು
ಸಮುದ್ರದ ನೀರು ಕುಡಿದರೆ ರುಚಿಸುವುದೇನು
ಯಾರ ಪಾಪದ ಕರ್ಮ ಯಾರೋ ಮೂಡಿಗೋ
ಯಾರೋ ಬೇವರ ಹನಿಯು ಯಾರೋ ಮನೆಗೋ
ಜೀವನದಿ ಒಳಿತು ಮಾಡಿದರೆ ಸಿಗುವುದೇ ಸ್ವರ್ಗ
ಯಾರೋ ಪಾಪಕೆ ಇನ್ನ ಯಾರಿಗೂ ನರಕ
ಆಡಿ ಆಡಿ ಮನವು ನೋಂದೇಾಯ್ತು
ಬೇಡಿ ಬೇಡಿ ತನುವು ಸುಸ್ತಾಯ್ತೋ
ಯಾವ ಹೊಲದ ಹೂವು ಯಾವ ದೇವರಿಗೂ
ಯಾರ ಮಲ್ಲಿಗೆ ಯಾರೋ ಮುಡಿಯಲಿ
ಯಾರ ಕನಸಿನ ದೀಪ ಎಲ್ಲೋ ಬೆಳಗಿತು ಏಕೋ
ಯಾರ ನೋವಿನ ಶಾಪ ಯಾರಿಗೋ ತಗುಲಿತು ಏಕೋ
**********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment