ಹೊಸವರ್ಷ 2026

 


ಹೊಸವರ್ಷ ಬಂತು ಮನದಿ

ಹೊಸ ಹರುಷ ತಂತು ನಭದಿ

ಹಸಿರು ಉಸಿರಾಗಿ ಕುಣಿದಿದೆ

ಹೆಸರು ಎಲ್ಲೆಡೆಯು ಹರಡಿದೆ 


ಹೊಸದು ಹೆಸರಲಿ ಸಂಭ್ರಮ 

ಪ್ರೀತಿಯ ಬಾಳಲಿ ಅನುಪಮ 

ನೂರೆಂಟು  ಬಣ್ಣದ ಕನಸು 

ಆಚರಸಿಲು ಸಿದ್ದ ಹೊಸ ತಿನಿಸು


ಹಳೆಯ ವರ್ಷದ ಮೇಲೆ ಮುನಿಸು 

ಹೊಸ ವರ್ಷಕ್ಕೆ ಹೊಸದಿರಿಸು 

ತಂತು ಬಾಳಲಿ ಹೊಸ ಉಲ್ಲಾಸ 

ಕಾಯಕದಿ ಕಾಣು ನೀ ಕೈಲಾಸ


ಯೋಜನೆಗಳ ಬಂಡಿಯ ಸಾಲು

ಬದುಕು ಕಷ್ಟ ಸುಖದ ನೂಲು 

ಜೀವನ ಹೊಸ ಬಗೆ ಗೋಳು 

ಸಾಗದಿದ್ದಾರೆ ಎಲ್ಲಾ ಹಾಳು 


ತಿಳಿದು ನೀ ನೆಡೆ ಮನುಜ

ಸೋಲು ಗೆಲುವು ಸಹಜ

ಬಿದ್ದರೆ ನೀನು ಕುಗ್ಗಬೇಡ 

ಎದ್ದರೆ ಎಲ್ಲಾ ಮರೆಯಬೇಡ 


ಸಾಗು ನೀ ಭಕ್ತಿಯ ಹಾದಿಯಲಿ 

ಬಜಿಸು ನೀ ದೈವದ ನಾಮದಲಿ 

ಬದುಕು ದೇವರ ಕರುಣೆಯಲಿ

ಪ್ರೀತಿ ತುಂಬಲಿ ಮನೆ  ಮನದಲಿ 


ಹೊಸವರ್ಷ ಬಂತು ಮನದಿ

ಹೊಸ ಹರುಷ ತಂತು ನಭದಿ

ಹಸಿರು ಉಸಿರಾಗಿ ಕುಣಿದಿದೆ

ಹೆಸರು ಎಲ್ಲೆಡೆಯು ಹರಡಿದೆ 


**********ರಚನೆ********* 

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ