ಬಾಳು ಸುಂದರ ಪಯಣ
ಹುಟ್ಟು ಒಂದು ತಿಳಿಯದ ಜನನ
ಜೀವನ ಒಂದು ಸುಂದರ ಪಯಣ
ನಮಗೆ ಇರುವುದು ಒಂದೇ ಬಾಳು
ಸುಮ್ಮನೆ ಕೂತರೆ ಬದುಕು ಹಾಳು
ಇರುವ ತನಕ ಒಳ್ಳೆಯದು ಮಾಡು
ಬೇಕು ಬೇಡ ಚಿಂತೆಯ ಬಿಡು
ಕಾಲವನ್ನು ಕಾದು ಕಾದು ಧೂಕು
ಸೋಲುಗಳನ್ನು ತಳ್ಳಿದರೆ ಸಾಕು
ಗೆಲುವು ನಮಗೆ ಶಾಶ್ವತ ಅಲ್ಲ
ಜೀವನ ರುಚಿಯ ಬೇವು ಬೆಲ್ಲ
ಸುಖ ದುಃಖ ಎರಡು ಮಾಮೂಲಿ
ದಿನದ ದುಡಿಮೆ ನಮ್ಮ ಖಯಾಲಿ
ಕಷ್ಟಗಳನ್ನು ನೂಕುತ ತಳ್ಳಿ ಬಿಡು
ಚಿಂತೆಗಳನ್ನು ಬೆಂಕಿಯಲ್ಲಿ ಸುಟ್ಟು ಬಿಡು
ಬಾಳನ್ನು ಸರಿಯಾಗಿ ಬದುಕಿ ಬಿಡು
ದೇವರ ನಾಮ ಬಜಿಸಿ ಬಿಡು
ಮೂರು ದಿನದ ಬದುಕ ಬಾಳು
ನೋವು ನಲಿವುಗಳೆಂಬ ಗೋಳು
ಎಡರು ತೊಡರು ಏಳು ಬೀಳು
ಬಾಳ ಪಯಣ ಸುಂದರ ಕೂಳು
**********ರಚನೆ**********
ಡಾಕ್ಟರ್ ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments
Post a Comment