ಕಣ್ಣೀರ ಹನಿ*

 


ಎದೆಗೋಡೆದ ದುಃಖದ ಮಾತೊಂದು ಮನದಲ್ಲಿ ಸತ್ತಿತ್ತು 

ಕಣ್ಣೀರು ಹನಿಯಾಗಿ ತಿಳಿ ನೀಲಿ ಕಡಲೊಳಗೆ ಸೇರಿತ್ತು

ದುಃಖವು ಜಿನುಗಿ ಜಿನುಗಿ ಒಡಲೊಳಗೆ ಬೆಂದಿತ್ತು 

ಮೂಕ ವೇದನೆಯು ಮನೆಯನ್ನು ಸುಟ್ಟು ತಿಂದಿತ್ತು


ಯಾರೋ ಚೆಲ್ಲಿದ ಬಣ್ಣ ಕಾಮನಬಿಲ್ಲಾಗಿ ಮೂಡಿತ್ತು 

ಬಿಸಿಲಲ್ಲಿ ಸುರಿದ ಮಳೆ ಇಳೆಗೆ ನೀರನ್ನು ಹೋದಿಸಿತ್ತು 

ಭೂಮಿಯು ಕಾವಾಗಿ ಸುಡುತಾ ನೆಲವೆಲ್ಲ ಬಿರಿದಿತ್ತು

ಹಸಿರಲ್ಲಿ ಕೆಂಪು ಹೂವೊಂದು ಮಸಣವ ಸೇರಿತ್ತು 


ಈ ಲೋಕವು ನೂರೆಂಟು ಸುಳ್ಳುಪಳ್ಳುಗಳ ಸಂತೆ

ಸತ್ಯಕ್ಕೆ ಕೊಡಲಿ ಪೆಟ್ಟು ಅಧರ್ಮದ ನೆಲೆಯ ಕಂತೆ 

ಮೋಸ ತುಂಬಿದ ಮನುಜನಿಗೆ ನ್ಯಾಯವೆಂಬ ಚಿಂತೆ 

ಯಾರಿಗೆ ನೀಡುವನು ವರವ ದೇವರು ನಿಂತೆ


ಸುಡುಗಾಡಿನಲ್ಲಿ ಸಿಗುವುದೆ ಸಂತೋಷದ ಚಿಲುಮೆ 

ದೇಹ ತೋರೆದ ಮನುಜನಿಗೆ ಈ ನ್ಯಾಯವೇ ಒಲುಮೆ 

ಪರಲೋಕ ಸೇರಿತು ಆತ್ಮ ಮಸಣದಲ್ಲಿ ಇದೇ ಪ್ರೇತಾತ್ಮ 

ಕಾಯುವವರು ಯಾರು ಬಿಟ್ಟು ಹೋದ ಜೋಳಿಗೆಯನ್ನ


ಬ್ರಹ್ಮನ ಮೂರಕ್ಷರದ ಬರಹ ತಿದ್ದಲು ಆಗಲಿಲ್ಲ 

ವಿಧೀ  ಎಂಬ ಬಲು ಕಪಟ ಯಾರನ್ನು ಬಿಡಲಿಲ್ಲ 

ಆರು ಮೂರಡಿಯ ಮಂಟಪವೆ ನೆಲೆಯಾಯಿತಲ್ಲ 

ಎಳು ಬಿಳಿನ ಜೀವನ ಕೊನೆಗೂ ಕೊನೆಯಾಯ್ತಲ್ಲ 


***********ರಚನೆ********* 

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ