ಮನವ ಕಲಕಿದೆ
ತಿಳಿ ಮನವ ಕಲಕಿ ರಾಡಿ ಮಾಡಿದ ಒಲವೇ
ಈ ಬದುಕಿಗೆ ನೀನೆ ತಾನೆ ಗೆಲುವೆ
ಕಣ್ಣೀರು ನನ್ನಯ ಬಾಳಲಿ ತುಂಬಿ
ಸೋತೆ ನಾನು ಈ ಒಲವ ನಂಬಿ// ಪಲ್ಲವಿ//
ಜೀವನವಾಯ್ತು ಗೋಳಿನ ನರಕ
ಯಾರು ನೀಡಬೇಕು ಪ್ರೀತಿಯ ಸರಕ
ಯೌವ್ವನದ ಬಯಕೆಗೆ ತಣ್ಣೀರು ಬಿಟ್ಟೆ
ಆಸೆಯ ಜಾಡಲಿ ಹೊಡೆದಿದೆ ಬಾಳ ಕಟ್ಟೆ
ರುಚಿಯೇ ಇಲ್ಲ ಜೀವನದ ಊಟ
ಕಲಿತರು ಕೂಡ ಮರೆತ ಪಾಠ
ಜೀವನ ಏಳು ಬಿಳಿನ ಆಟ
ಕಲಿತು ಒಡಬೇಕು ನಾವು ಓಟ
ಸೋಲಲಿ ಕಲಿಯುವುದು ಬೇಕಾದಷ್ಟು
ನೊವಲಿ ತಿಳಿಯುವುದು ತಿಳಿದಷ್ಟು
ಬಾಳ ಪಯಣ ಬೇಸರ ತಂದಿದೆ
ಬದುಕು ಏಕೋ ಕುಂಟುತ್ತ ನಡೆದಿದೆ
***********ರಚನೆ********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment