ನೋವು ತುಂಬಿ
ಭಾವದೊಳಗೆ ನೋವು ತುಂಬಿ
ಮನಸ್ಸು ಅಳುವುದೇ
ದೇಹದೊಳಗೆ ವಯಸ್ಸು ನಂಬಿ
ಕನಸು ಕುಣಿವುದೆ
ಗೆದ್ದ ಖುಷಿಯು ಕಣ್ಣೀರಾಗಿ ಆನಂದ
ಭಾಷ್ಪ ಸುರಿವುದೇ
ನಗುವ ಚಿಲುಮೆ ಮುಖದಿ ಅರಳಿ
ಭಾವ ಮಿಡಿವುದೇ
ಏಳು ಬೀಳು ಜೀವನದಿ ಉಂಟು
ಸೋಲು ಅಳುವುದೇ
ಗೆದ್ದ ಖುಷಿಯಲ್ಲಿ ದೇಹ ಕುಣಿದು
ಗೆಲುವು ನಗುವುದೇ
ಬಾಳ ಪಯಣ ಜೋಡಿ ನಂಬಿ
ದೂರ ನಡೆವುದೇ
ಬಾಳ ನೋಗವು ಮುರಿದು ಬಿದ್ದು
ಬಂಡಿ ಅಳುವುದೇ
ಸಾಗಬೇಕು ನಾವು ಎಲ್ಲ ಸಹಿಸಿ
ದೂರ ತೀರಕೆ
ಈಜ ಬೇಕು ನಾವು ಎಲ್ಲಾ ಸಹಿಸಿ
ಬಾಳ ದಡಕ್ಕೆ
ನೂಕಬೇಕು ನಾವು ಇಲ್ಲಿ ಬದುಕ
ದೋಣಿಯ
ಸವೆಸಬೇಕು ಕಾಲವನ್ನು ನಡೆಸುತ
ಸಿಹಿ ಬಾಳ್ವೆಯ
**********ರಚನೆ*******
ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments
Post a Comment