ನನ್ನ ಕವಿತೆ
ಮನದ ಒಳಗೇ ಮೂಡಿದ ಕವಿತೆ ಒಮ್ಮೆ ಕೂಗಿ ಕರೆದಿದೆ
ಅಂದ ಚೆಂದ ತೂಗಿ ನಲಿದು ಮುಗುಳ್ನಗೆಯ ಬೀರಿದೆ
ವರ್ಣಿಸಲು ಪದಗಳಿಲ್ಲ ಕವಿತೆ ಅಂದ ಚೆಂದವ
ಬಣ್ಣ ಬಳಿದು ನೋಡುತ್ತಿದ್ದರೆ ಸೂಸುತಿದೆ ಗಂಧವ
ನೋವು ಹೊತ್ತು ತರಲು ಜೀವ ನೀನು ತುಂಬಿದೆ
ಖುಷಿಯೂ ನನ್ನಲಿ ಬರಲು ಕಾಲವೆಕೋ ಮಾಗಿದೆ
ಸೋಲು ಎಂಬ ಬೇಸರ ನನ್ನಲೆಕೋ ಮೂಡಿದೆ
ಗೆದ್ದು ನಾನು ಬೀಗಲು ಪ್ರಶಸ್ತಿ ನನಗೆ ಬೇಕಿದೆ
ನನ್ನ ನೆನಪು ನಿಮಗೆ ಬಿಡದೆ ಕಾಡಿ ಬಿಡುವುದೇ
ಸಾಲುಗಳಲಿ ಮಾತು ಏಕೋ ಮೌನವಾಗಿದೆ
ಹೇಳಲು ಹೊರಟ ನೋವು ಕಣ್ಣೀರು ಹಾಕಿದೆ
ಮನಕೆ ತಗುಲಿದ ಮಾತು ನೂರು ಕಥೆ ಹೇಳಿದೆ
ಬರೆಯ ಹೊರಟ ಕವಿತೆ ಹೂವಿನಂತೆ ಅರಳಿದೆ
ಕಾದು ಕೂತ ಜೇನು ನೊಣ ಸವಿಯ ತಾನೆ ಸವಿದಿದೆ
ಬರೆದ ಪದಗಳು ಕಾಲಿಯಾಗಿ ಕವಿತೆ ಮೂಕವಾಗಿದೆ
ಓದಿ ಒಮ್ಮೆ ನನ್ನ ಕಥೆಯ ಎಂದು ಕವಿತೆ ಕೂಗಿ ಕರೆದಿದೆ
**********ರಚನೆ**********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments
Post a Comment