Posts

ಆಡೋಣ ಗೆಳತಿ ಬಾ

Image
  ನಲಿಯೋಣ ಬಾ ಗೆಳತಿ  ನಮ್ಮ ಮನದ ಕಸವ  ಗುಡಿಸಿ ನಾವು ನಲಿಯೋಣ  ಮೂರು ದಿನದ ಈ ಬದುಕು  ಏತಕ್ಕಾಗಿ ಅಸೂಯೆ ದ್ವೇಷ  ಎಲ್ಲ ಮರೆತು ಕುಣಿಯೋಣ ಬಾ ಗೆಳತಿ  ಕೈಯಲ್ಲಿ ಕೈ ಹಿಡಿದು  ಏಳು ಹೆಜ್ಜೆ ಒಟ್ಟಿಗೆ ನಡೆದು  ಬದುಕೋಣ ಬಾ ಗೆಳತಿ ಬದುಕೋಣ  ಮನಸ ಬಾರವ ಕಳೆದು  ಮಕ್ಕಳಂತ ಆಡುತ್ತ ಮಕ್ಕಳಾಗೋಣ  ಆಡೋಣ ಬಾ ಗೆಳತಿ ನಲಿದು ಬಾ  ದಿನಗಳು ಓಡುತ್ತಿವೆ  ಸಮಯ ಉರುಳುತ್ತಿವೆ ಕನಸುಗಳು ಕಾಡುತ್ತಿವೆ  ನನಸಾಗಿಸೋಣ ಬಾ ಗೆಳತಿ ಬಾ  ಮಾತು ಮಾತಿಗು ಕದನ ಬಿಟ್ಟು  ಶಾಂತಿ ಶಾಂತಿ ಎನ್ನುತ ಸಾಗಿ  ಜೀವನ ನಡೆಸೋಣ ಯುದ್ಧದಿ ಬಾ ಗೆಳತಿ ಬಾ  ಜಾತಿಗಳು ನೂರಾರು ಬೇದ ಭಾವಗಳ ಸೂರು  ಕಿತ್ತು ಬಿಸಾಡೋಣ ಬಾ ಗೆಳತಿ ಬಾ  ***********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -28

Image
  🌹ಮುದ್ದು ನೀನು🌹 ಎದೆಯೊಳಗೆ ನೂರು ಕನಸು ರೆಕ್ಕೆ ಬಿಚ್ಚಾವೆ  ನಿನ್ನ ಮುದ್ದಾಡೋ ಆಸೆಗಳು  ಹೆಚ್ಚಾವೆ  ನೀನೆ ನನ್ನ ಜೀವ ಎಂದು ಮನಸ್ಸು ಏಳೈತೆ  ಕಣ್ಣಿನೊಳಗೆ ನಿನ್ನ ಬಿಂಬ ಹಾಡು ಹಾಡೈತೆ  ನೀ ಇಡುವ ಹೆಜ್ಜೆ ನೋಡಿ ಹೃದಯ ಕೂಗೈತೆ  ನಿನ್ನ ನೋಡಿದ ಮನವು ಹುಚ್ಚಾಗಿ ಕುಣಿದೈತೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಾರೆ  ನನ್ನ ಮುದ್ದು ಕಂದ  ನಿನ್ನ ನಗುವ ನೋಡಿ ಮನದಿ ತುಂಬಿತು ಆನಂದ  ಬರಡು ಜೀವಕ್ಕೆ ಬೆಳಕಾಗಿ ನೀ ಬಂದೆ  ಸೋತ ಬದುಕಿಗೆ ಮುಂಗಾರು ಮಳೆ ತಂದೆ ಉಸಿರು ನಿಂತ ಮನಕೆ ಹಸಿರು ನೀನಾದೆ  ಪ್ರಾಣವಿಲ್ಲದ ಜೀವಕ್ಕೆ ಮರು ಜೀವ ನೀನಾದೆ  **********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -27

Image
  🌹ಕಾಗೆ ಮರಿ 🌹 ಕಾಗೆ ಮರಿ ಕಾಗೆ ಮರಿ  ನಿನ್ನ ಬಣ್ಣ ಕಪ್ಪು ಏಕೆ  ಬೆಂಕಿಯಲ್ಲಿ ನಿನ್ನ ಸುಟ್ಟಂಗೆ  ಕಾಣುತ್ತೀಯ ಏಕೆ  ಕಾಕಾ ಎಂದು ನೀನು ಕೂಗುತ್ತೀಯ  ತೊಟ್ಟಿಲಿದ್ದ ನೀರು ಕುಡಿಯುತ್ತೀಯ  ಶನೇಶ್ವರನಿಗೆ ನೀನೇ ವಾಹನವಂತೆ  ದೇವರನ್ನು  ಹೊತ್ತು ಮೆರೆಸುವಂತೆ ಊಜಿಯಲ್ಲಿದೇ ನೀರು ತಳದಿ  ಕೊಕ್ಕು ಹಾಕಿ ಸುಮ್ಮನಾದೆ ಸಿಗದಿ  ಸಣ್ಣ ಸಣ್ಣ ಕಲ್ಲುಗಳನ್ನು ಹಾಕಿ  ಮೇಲೆ ಬಂದ ನೀರು ಕುಡಿದೆ  ಬದುಕಿದ್ದಾಗ ಅನ್ನ ಹಾಕದವರು  ಸತ್ತಾಗ ನಿನಗೆ ಕೂಳು ಇಟ್ಟರು  ನೀನು ಬಂದು ಕೂಳು ತಿಂದಾಗ  ಮಾಡಿದ ಪಾಪ ಕಳೆಯಿತೆಂದರು  **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -26

Image
  🌹ಮುದ್ದಿನ ಗಿಳಿಯೇ 🌹 ಗಿಳಿಯೇ ನನ್ನ ಮುದ್ದಿನ ಅಚ್ಚು ಮೆಚ್ಚು ಗಿಳಿಯೇ  ಕೆಂಪು ಮೂತಿ ಹಸಿರ ಮೈಯಿನ ಬಣ್ಣದ ಗಿಳಿಯೇ  ನನ್ನ ಮನೆಗೆ ಬಾರೆ ನನ್ನಯ ಪ್ರೀತಿಯ  ಗಿಳಿಯೇ  ಮಾವಿನ ಮರದಿ ಹಣ್ಣು ಇದೆ ತಿನ್ನುವ ಗಿಳಿಯೇ  ಅಪ್ಪನ ಸಂತೆಗೆ ತರಕಾರಿ ತರಲು ಹೋಗಿಹನು  ಅಮ್ಮನು  ಸಿಹಿ ಹೋಳಿಗೆ ಅಡಿಗೆ ಮಾಡಿಹಳು  ಅಕ್ಕನು ನವೋದಯ ಪರೀಕ್ಷೆಗೆ ಓದುತ ಕೂತಿಹಳು  ನಾವು ನಲಿದು ಆಟ ಆಡೋಣ ಬಾರೆ ಗಿಳಿಯೇ  ಬೆಕ್ಕನ್ನು ಕಂಡರೆ ನಿನಗೆ ಭಯವೇ ಗಿಳಿಯೇ  ನಾಯಿ ಕಂಡರೆ ನಡುಕವೆ ನಿನಗೆ ಗಿಳಿಯೇ  ಬೋನಲ್ಲಿ ಕೂಡಿ ಹಾಕುವುದಿಲ್ಲ ಬಾರೆ ಬಳಿಗೆ  ನಾನು ನೀನು ಸೇರಿ ಚಿರುತ ಕೂಗೋಣ ಹೊಲದಿ ಸೂರ್ಯಕಾಂತಿ, ಜೋಳ ಬಂದಿಹುದು  ಸೂರ್ಯನು ನೋಡುತ ತಿರುಗಿ ನಿಂತಿಹುದು  ಜೋಳ, ಸೂರ್ಯಕಾಂತಿ ತಿನ್ನೋಣ ಬಾರೆ  ಕುಣಿಯುತ ನಲಿಯುತ ಹಾಡನ್ನು ಹೇಳುವ ಬಾರೆ  ***********ರಚನೆ********* ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -25

Image
  🌹ರೈಲು ಬಂತು🌹  ರೈಲು ಬಂತು, ರೈಲು ಬಂತು, ರೈಲು ಬಂತು ನಮ್ಮೂರ ಹೊಲದ ಹಳಿಯ ಮೇಲೆ ಬಂತು ರೈಲು ಏಕೋ ಸುಮ್ಮನೆ ಅಳುತ್ತಾ ಬಂತು  ಆಕಾಶಕ್ಕೆ ಹೊಗೆ ಉಗುಳುತ ರೈಲು ಬಂತು  ನೂರು ಮೈಲಿ ವೇಗದಿ ರೈಲು  ಓಡುತ್ತಂತೆ  ಚುಕುಬುಕು ಚುಕುಬುಕು ಶಬ್ದ ಮಾಡುತ್ತಂತೆ  ಹಳಿಗಳ ಮೇಲೆ ಜೋರಾಗಿ ನುಗ್ಗುತ್ತಂತೆ  ಚಿಣ್ಣರ ಅಚ್ಚುಮೆಚ್ಚಿನ ಮುದ್ದು ರೈಲು ಅಂತೆ  ಕೆಂಪು ಬಾವುಟ ತೋರಿಸಿದರೆ ರೈಲೂ ನಿಲ್ಲುತಂತೆ  ಹಸಿರು ಬಾವುಟ ಹಿಡಿದರೆ ರೈಲು ಮುಂದೆ ಓಡುತಂತೆ  ರೈಲ ತುಂಬಾ ನೂಕು ನುಗ್ಗೊ ಜನ ಜಂಗುಳಿ ಜಾತ್ರೆ  ಊರಿಂದ ಊರಿಗೆ ಹೊರಟಿಹರು ನಮ್ಮವರು ಯಾತ್ರೆ  ಬೆಟ್ಟಗುಡ್ಡ ಸುರಂಗ ಮಾರ್ಗದಿ ಮುನ್ನುಗ್ಗೋ ರೈಲು  ಕಾಡಿನಲ್ಲಿ ಚುಕ್ಕು ಬುಕ್ಕು ಕೂಗುತಾ ಓಡೋ ರೈಲು  ರೈಲು ನೋಡಿ ಸಣ್ಣ ಸಣ್ಣ ಮಕ್ಕಳಿಗೆ ಏನೋ ಖುಷಿ  ರೈಲು ಬಿಟ್ಟು ಓಡಿತು ಪಕ್ಕದಲ್ಲಿ ನಾವು ನೆಟ್ಟ ಸಸಿ  ರಾಮಣ್ಣ ರೈಲಿನಲ್ಲಿ ತಿಂಡಿ ಕಾಫಿ, ತಂದನಂತೆ ಸೋಮಣ್ಣ ದುಡ್ಡು ಕೊಟ್ಟು ಕಾಫಿ ಕುಡಿದನಂತೆ ರೈಲಿನಲ್ಲಿ ಅಪಾಯದಿ ಚೈನು ಎಳೆಯಬೇಕಂತೆ  ಓಡುವ ರೈಲು  ಹಳಿಯ ಮೇಲೆ ನಿಲ್ಲುತ್ತಂತೆ  ಟಿಕೆಟ್ ಇಲ್ಲದೆ ರೈಲಿನ ಪ್ರಯಾಣ ಖಂಡಿತ ತಪ್ಪು ಆದ್ರೂ ರೈಲು ಹತ್ತಿದ ಕರಿಯಣ್ಣ ಹಾಕದೆ ಸೊಪ್ಪು  ಸ್ವಚ್ಛವಾಗಿ ಇಡಬೇಕು ನಾವು ರೈಲುಗಳ ಭೋಗಿ  ಸ್ವಚ್ಛ ಭಾರತ ಎಂದು ಕೂಗುತವರೆ ನಮ್ಮ ಮೋದಿ...

ಮಕ್ಕಳ ಗೀತೆ -24

Image
  🌹ತೂಗುವ ತೊಟ್ಟಿಲು 🌹 ಮೋಡದ ಬಾನಲಿ ತೂಗುವ  ನನ್ನಯ ತೊಟ್ಟಿಲು  ಅಮ್ಮ ಕೊಟ್ಟಳು ಕುಡಿಯಲು  ಹಾಲಿನ ಬಟ್ಟಲು  ನೀಲಿ ಆಕಾಶದಿ ಭೂಮಿಯು  ಕಂಡಿತ ಬೆತ್ತಲು ಮೋಡವು ಮಳೆಯ ಹನಿಗೆ  ಸೋರಿದೆ ಸುತ್ತಲು ಬಿಳಿಯ ಬಣ್ಣದ ಮುಗಿಲು  ಎತ್ತರಕ್ಕೆ ಹಾರಿದೆ ನವಿಲು  ಬಾನು ಕಂಡಿತ ನೀಲಿ  ಭೂಮಿಗೆ ಹಾಕಿದ ಬೇಲಿ  ಚಂದಿರನ ಹಿಡಿಯಲು ಹೊರಟೆ  ಸಿಗದೇ ಹೋಗಿ ಒಡೆದೆ ಹರಟೆ  ಸೂರ್ಯನು ಕೆಂಪಾಗಿ ಬೆಂದಾನು  ಸಿಟ್ಟಲ್ಲಿ ನನ್ನನ್ನು ಸುಟ್ಟಾನು  ಚುಕ್ಕೆಗಳೆಲ್ಲ ಕಣ್ಣು ಹೊಡೆದಂತೆ  ಬೆಳ್ಳಗೆ ಹೊಳೆವ ಬಿಳಿ ಬಣ್ಣವಂತೆ  ಸಾಕು ಬಾನಿನ ಸಹವಾಸ  ತೂಗುವ ತೊಟ್ಟಿಲಲಿ ನಾ ಉಪವಾಸ  ಜೀಕುತಾ ಕಂಡೆ ತೊಟ್ಟಿಲ ಸ್ವರ್ಗ  ಮರದಿ ಕಟ್ಟಿದ ತೊಟ್ಟಿಲು ಹಗ್ಗ  ಭೂಮಿಯ ಒಂದು ಪ್ರಕೃತಿ ಬೆಡಗು  ನಮ್ಮಯ ಜೀವನ ಪ್ರೀತಿಯ ಮೆರಗು ************ರಚನೆ********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ದಿಕ್ಕು ಕಾಣದಾಗಿದೆ

Image
  ತೊರೆವ ನದಿಗೆ ಹರಿವ ಜರಿಗೆ  ದಿಕ್ಕು ಕಾಣದಾಗಿದೆ  ಮತಿಗೆಟ್ಟ ಈ ಮನುಜನಿಗೆ  ಸೊಕ್ಕು ಜಾಸ್ತಿಯಾಗಿದೆ  ಹೃದಯದ ಅಂಗಳದಲ್ಲಿ  ಮೊಗ್ಗು ಬಿರಿದಿದೆ  ಕಂಪು ಸೂಸಿ ತಂಪು ಎರೆದು ಹೂವು ಅರಳಿದೆ  ಸಕಲ ಜೀವಿಗಳಿಗೆ ಬದುಕ  ದಾರಿ ಬಿಟ್ಟು  ದೇಹ ಬಳಕುತ ನಡೆದು ಬಾಳು ಸಾಗಿದೆ  ಯಾರ ಬಾಳ ಶಾಪ ಯಾರ  ಬದುಕು ಮೂಡಿಗೋ  ಯಾರ ಬಾಳ ನೋವು ಯಾರ  ಜೀವ ತಲೆಗೋ  ಜೀವ ಮಸಣದಡೆಗೆ ಸುಮ್ಮನೆ  ಅತ್ತು  ಕರೆದು ಹೊರಟಿದೆ  ಮಣ್ಣಿನಲ್ಲಿ ಕನಸು ಹೊತ್ತು ಬಿತ್ತಿ ಬಾಳ ಪಯಣ ಮುಗಿದಿದೆ *********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ