ಮಕ್ಕಳ ಗೀತೆ -25
🌹ರೈಲು ಬಂತು🌹
ರೈಲು ಬಂತು, ರೈಲು ಬಂತು, ರೈಲು ಬಂತು
ನಮ್ಮೂರ ಹೊಲದ ಹಳಿಯ ಮೇಲೆ ಬಂತು
ರೈಲು ಏಕೋ ಸುಮ್ಮನೆ ಅಳುತ್ತಾ ಬಂತು
ಆಕಾಶಕ್ಕೆ ಹೊಗೆ ಉಗುಳುತ ರೈಲು ಬಂತು
ನೂರು ಮೈಲಿ ವೇಗದಿ ರೈಲು ಓಡುತ್ತಂತೆ
ಚುಕುಬುಕು ಚುಕುಬುಕು ಶಬ್ದ ಮಾಡುತ್ತಂತೆ
ಹಳಿಗಳ ಮೇಲೆ ಜೋರಾಗಿ ನುಗ್ಗುತ್ತಂತೆ
ಚಿಣ್ಣರ ಅಚ್ಚುಮೆಚ್ಚಿನ ಮುದ್ದು ರೈಲು ಅಂತೆ
ಕೆಂಪು ಬಾವುಟ ತೋರಿಸಿದರೆ ರೈಲೂ ನಿಲ್ಲುತಂತೆ
ಹಸಿರು ಬಾವುಟ ಹಿಡಿದರೆ ರೈಲು ಮುಂದೆ ಓಡುತಂತೆ
ರೈಲ ತುಂಬಾ ನೂಕು ನುಗ್ಗೊ ಜನ ಜಂಗುಳಿ ಜಾತ್ರೆ
ಊರಿಂದ ಊರಿಗೆ ಹೊರಟಿಹರು ನಮ್ಮವರು ಯಾತ್ರೆ
ಬೆಟ್ಟಗುಡ್ಡ ಸುರಂಗ ಮಾರ್ಗದಿ ಮುನ್ನುಗ್ಗೋ ರೈಲು
ಕಾಡಿನಲ್ಲಿ ಚುಕ್ಕು ಬುಕ್ಕು ಕೂಗುತಾ ಓಡೋ ರೈಲು
ರೈಲು ನೋಡಿ ಸಣ್ಣ ಸಣ್ಣ ಮಕ್ಕಳಿಗೆ ಏನೋ ಖುಷಿ
ರೈಲು ಬಿಟ್ಟು ಓಡಿತು ಪಕ್ಕದಲ್ಲಿ ನಾವು ನೆಟ್ಟ ಸಸಿ
ರಾಮಣ್ಣ ರೈಲಿನಲ್ಲಿ ತಿಂಡಿ ಕಾಫಿ, ತಂದನಂತೆ
ಸೋಮಣ್ಣ ದುಡ್ಡು ಕೊಟ್ಟು ಕಾಫಿ ಕುಡಿದನಂತೆ
ರೈಲಿನಲ್ಲಿ ಅಪಾಯದಿ ಚೈನು ಎಳೆಯಬೇಕಂತೆ
ಓಡುವ ರೈಲು ಹಳಿಯ ಮೇಲೆ ನಿಲ್ಲುತ್ತಂತೆ
ಟಿಕೆಟ್ ಇಲ್ಲದೆ ರೈಲಿನ ಪ್ರಯಾಣ ಖಂಡಿತ ತಪ್ಪು
ಆದ್ರೂ ರೈಲು ಹತ್ತಿದ ಕರಿಯಣ್ಣ ಹಾಕದೆ ಸೊಪ್ಪು
ಸ್ವಚ್ಛವಾಗಿ ಇಡಬೇಕು ನಾವು ರೈಲುಗಳ ಭೋಗಿ
ಸ್ವಚ್ಛ ಭಾರತ ಎಂದು ಕೂಗುತವರೆ ನಮ್ಮ ಮೋದಿ
**********ರಚನೆ*********
ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment