ದಿಕ್ಕು ಕಾಣದಾಗಿದೆ
ತೊರೆವ ನದಿಗೆ ಹರಿವ ಜರಿಗೆ
ದಿಕ್ಕು ಕಾಣದಾಗಿದೆ
ಮತಿಗೆಟ್ಟ ಈ ಮನುಜನಿಗೆ
ಸೊಕ್ಕು ಜಾಸ್ತಿಯಾಗಿದೆ
ಹೃದಯದ ಅಂಗಳದಲ್ಲಿ
ಮೊಗ್ಗು ಬಿರಿದಿದೆ
ಕಂಪು ಸೂಸಿ ತಂಪು ಎರೆದು
ಹೂವು ಅರಳಿದೆ
ಸಕಲ ಜೀವಿಗಳಿಗೆ ಬದುಕ
ದಾರಿ ಬಿಟ್ಟು
ದೇಹ ಬಳಕುತ ನಡೆದು
ಬಾಳು ಸಾಗಿದೆ
ಯಾರ ಬಾಳ ಶಾಪ ಯಾರ
ಬದುಕು ಮೂಡಿಗೋ
ಯಾರ ಬಾಳ ನೋವು ಯಾರ
ಜೀವ ತಲೆಗೋ
ಜೀವ ಮಸಣದಡೆಗೆ ಸುಮ್ಮನೆ
ಅತ್ತು ಕರೆದು ಹೊರಟಿದೆ
ಮಣ್ಣಿನಲ್ಲಿ ಕನಸು ಹೊತ್ತು ಬಿತ್ತಿ
ಬಾಳ ಪಯಣ ಮುಗಿದಿದೆ
*********ರಚನೆ**********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment