ಮಕ್ಕಳ ಗೀತೆ -26

 



🌹ಮುದ್ದಿನ ಗಿಳಿಯೇ 🌹


ಗಿಳಿಯೇ ನನ್ನ ಮುದ್ದಿನ ಅಚ್ಚು ಮೆಚ್ಚು ಗಿಳಿಯೇ 

ಕೆಂಪು ಮೂತಿ ಹಸಿರ ಮೈಯಿನ ಬಣ್ಣದ ಗಿಳಿಯೇ 

ನನ್ನ ಮನೆಗೆ ಬಾರೆ ನನ್ನಯ ಪ್ರೀತಿಯ  ಗಿಳಿಯೇ 

ಮಾವಿನ ಮರದಿ ಹಣ್ಣು ಇದೆ ತಿನ್ನುವ ಗಿಳಿಯೇ 


ಅಪ್ಪನ ಸಂತೆಗೆ ತರಕಾರಿ ತರಲು ಹೋಗಿಹನು 

ಅಮ್ಮನು  ಸಿಹಿ ಹೋಳಿಗೆ ಅಡಿಗೆ ಮಾಡಿಹಳು 

ಅಕ್ಕನು ನವೋದಯ ಪರೀಕ್ಷೆಗೆ ಓದುತ ಕೂತಿಹಳು 

ನಾವು ನಲಿದು ಆಟ ಆಡೋಣ ಬಾರೆ ಗಿಳಿಯೇ 


ಬೆಕ್ಕನ್ನು ಕಂಡರೆ ನಿನಗೆ ಭಯವೇ ಗಿಳಿಯೇ 

ನಾಯಿ ಕಂಡರೆ ನಡುಕವೆ ನಿನಗೆ ಗಿಳಿಯೇ 

ಬೋನಲ್ಲಿ ಕೂಡಿ ಹಾಕುವುದಿಲ್ಲ ಬಾರೆ ಬಳಿಗೆ 

ನಾನು ನೀನು ಸೇರಿ ಚಿರುತ ಕೂಗೋಣ


ಹೊಲದಿ ಸೂರ್ಯಕಾಂತಿ, ಜೋಳ ಬಂದಿಹುದು 

ಸೂರ್ಯನು ನೋಡುತ ತಿರುಗಿ ನಿಂತಿಹುದು 

ಜೋಳ, ಸೂರ್ಯಕಾಂತಿ ತಿನ್ನೋಣ ಬಾರೆ 

ಕುಣಿಯುತ ನಲಿಯುತ ಹಾಡನ್ನು ಹೇಳುವ ಬಾರೆ 


***********ರಚನೆ*********

ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple