ಮಕ್ಕಳ ಗೀತೆ -24

 



🌹ತೂಗುವ ತೊಟ್ಟಿಲು 🌹

ಮೋಡದ ಬಾನಲಿ ತೂಗುವ 

ನನ್ನಯ ತೊಟ್ಟಿಲು 

ಅಮ್ಮ ಕೊಟ್ಟಳು ಕುಡಿಯಲು 

ಹಾಲಿನ ಬಟ್ಟಲು 


ನೀಲಿ ಆಕಾಶದಿ ಭೂಮಿಯು 

ಕಂಡಿತ ಬೆತ್ತಲು

ಮೋಡವು ಮಳೆಯ ಹನಿಗೆ 

ಸೋರಿದೆ ಸುತ್ತಲು


ಬಿಳಿಯ ಬಣ್ಣದ ಮುಗಿಲು 

ಎತ್ತರಕ್ಕೆ ಹಾರಿದೆ ನವಿಲು 

ಬಾನು ಕಂಡಿತ ನೀಲಿ 

ಭೂಮಿಗೆ ಹಾಕಿದ ಬೇಲಿ 


ಚಂದಿರನ ಹಿಡಿಯಲು ಹೊರಟೆ 

ಸಿಗದೇ ಹೋಗಿ ಒಡೆದೆ ಹರಟೆ 

ಸೂರ್ಯನು ಕೆಂಪಾಗಿ ಬೆಂದಾನು 

ಸಿಟ್ಟಲ್ಲಿ ನನ್ನನ್ನು ಸುಟ್ಟಾನು 


ಚುಕ್ಕೆಗಳೆಲ್ಲ ಕಣ್ಣು ಹೊಡೆದಂತೆ 

ಬೆಳ್ಳಗೆ ಹೊಳೆವ ಬಿಳಿ ಬಣ್ಣವಂತೆ 

ಸಾಕು ಬಾನಿನ ಸಹವಾಸ 

ತೂಗುವ ತೊಟ್ಟಿಲಲಿ ನಾ ಉಪವಾಸ 


ಜೀಕುತಾ ಕಂಡೆ ತೊಟ್ಟಿಲ ಸ್ವರ್ಗ 

ಮರದಿ ಕಟ್ಟಿದ ತೊಟ್ಟಿಲು ಹಗ್ಗ 

ಭೂಮಿಯ ಒಂದು ಪ್ರಕೃತಿ ಬೆಡಗು 

ನಮ್ಮಯ ಜೀವನ ಪ್ರೀತಿಯ ಮೆರಗು


************ರಚನೆ******** 

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa