ಮಕ್ಕಳ ಗೀತೆ -28

 



🌹ಮುದ್ದು ನೀನು🌹


ಎದೆಯೊಳಗೆ ನೂರು ಕನಸು ರೆಕ್ಕೆ ಬಿಚ್ಚಾವೆ 

ನಿನ್ನ ಮುದ್ದಾಡೋ ಆಸೆಗಳು  ಹೆಚ್ಚಾವೆ 


ನೀನೆ ನನ್ನ ಜೀವ ಎಂದು ಮನಸ್ಸು ಏಳೈತೆ 

ಕಣ್ಣಿನೊಳಗೆ ನಿನ್ನ ಬಿಂಬ ಹಾಡು ಹಾಡೈತೆ 


ನೀ ಇಡುವ ಹೆಜ್ಜೆ ನೋಡಿ ಹೃದಯ ಕೂಗೈತೆ 

ನಿನ್ನ ನೋಡಿದ ಮನವು ಹುಚ್ಚಾಗಿ ಕುಣಿದೈತೆ


ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಾರೆ  ನನ್ನ ಮುದ್ದು ಕಂದ 

ನಿನ್ನ ನಗುವ ನೋಡಿ ಮನದಿ ತುಂಬಿತು ಆನಂದ 


ಬರಡು ಜೀವಕ್ಕೆ ಬೆಳಕಾಗಿ ನೀ ಬಂದೆ 

ಸೋತ ಬದುಕಿಗೆ ಮುಂಗಾರು ಮಳೆ ತಂದೆ


ಉಸಿರು ನಿಂತ ಮನಕೆ ಹಸಿರು ನೀನಾದೆ 

ಪ್ರಾಣವಿಲ್ಲದ ಜೀವಕ್ಕೆ ಮರು ಜೀವ ನೀನಾದೆ 


**********ರಚನೆ**********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments