ಆಡೋಣ ಗೆಳತಿ ಬಾ

 



ನಲಿಯೋಣ ಬಾ ಗೆಳತಿ 

ನಮ್ಮ ಮನದ ಕಸವ 

ಗುಡಿಸಿ ನಾವು ನಲಿಯೋಣ 


ಮೂರು ದಿನದ ಈ ಬದುಕು 

ಏತಕ್ಕಾಗಿ ಅಸೂಯೆ ದ್ವೇಷ 

ಎಲ್ಲ ಮರೆತು ಕುಣಿಯೋಣ ಬಾ ಗೆಳತಿ 


ಕೈಯಲ್ಲಿ ಕೈ ಹಿಡಿದು 

ಏಳು ಹೆಜ್ಜೆ ಒಟ್ಟಿಗೆ ನಡೆದು 

ಬದುಕೋಣ ಬಾ ಗೆಳತಿ ಬದುಕೋಣ 


ಮನಸ ಬಾರವ ಕಳೆದು 

ಮಕ್ಕಳಂತ ಆಡುತ್ತ ಮಕ್ಕಳಾಗೋಣ 

ಆಡೋಣ ಬಾ ಗೆಳತಿ ನಲಿದು ಬಾ 


ದಿನಗಳು ಓಡುತ್ತಿವೆ 

ಸಮಯ ಉರುಳುತ್ತಿವೆ ಕನಸುಗಳು ಕಾಡುತ್ತಿವೆ 

ನನಸಾಗಿಸೋಣ ಬಾ ಗೆಳತಿ ಬಾ 


ಮಾತು ಮಾತಿಗು ಕದನ ಬಿಟ್ಟು 

ಶಾಂತಿ ಶಾಂತಿ ಎನ್ನುತ ಸಾಗಿ 

ಜೀವನ ನಡೆಸೋಣ ಯುದ್ಧದಿ ಬಾ ಗೆಳತಿ ಬಾ 


ಜಾತಿಗಳು ನೂರಾರು

ಬೇದ ಭಾವಗಳ ಸೂರು 

ಕಿತ್ತು ಬಿಸಾಡೋಣ ಬಾ ಗೆಳತಿ ಬಾ 


***********ರಚನೆ*********

 ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa