ಮಕ್ಕಳ ಗೀತೆ -27
🌹ಕಾಗೆ ಮರಿ 🌹
ಕಾಗೆ ಮರಿ ಕಾಗೆ ಮರಿ
ನಿನ್ನ ಬಣ್ಣ ಕಪ್ಪು ಏಕೆ
ಬೆಂಕಿಯಲ್ಲಿ ನಿನ್ನ ಸುಟ್ಟಂಗೆ
ಕಾಣುತ್ತೀಯ ಏಕೆ
ಕಾಕಾ ಎಂದು ನೀನು ಕೂಗುತ್ತೀಯ
ತೊಟ್ಟಿಲಿದ್ದ ನೀರು ಕುಡಿಯುತ್ತೀಯ
ಶನೇಶ್ವರನಿಗೆ ನೀನೇ ವಾಹನವಂತೆ
ದೇವರನ್ನು ಹೊತ್ತು ಮೆರೆಸುವಂತೆ
ಊಜಿಯಲ್ಲಿದೇ ನೀರು ತಳದಿ
ಕೊಕ್ಕು ಹಾಕಿ ಸುಮ್ಮನಾದೆ ಸಿಗದಿ
ಸಣ್ಣ ಸಣ್ಣ ಕಲ್ಲುಗಳನ್ನು ಹಾಕಿ
ಮೇಲೆ ಬಂದ ನೀರು ಕುಡಿದೆ
ಬದುಕಿದ್ದಾಗ ಅನ್ನ ಹಾಕದವರು
ಸತ್ತಾಗ ನಿನಗೆ ಕೂಳು ಇಟ್ಟರು
ನೀನು ಬಂದು ಕೂಳು ತಿಂದಾಗ
ಮಾಡಿದ ಪಾಪ ಕಳೆಯಿತೆಂದರು
**********ರಚನೆ**********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment