Posts

ಓಡು ಗೆಳೆಯ ಓಡು& ಓಡು ಗೆಳತಿ ಓಡು

Image
  ಓಡು ಗೆಳೆಯ ಓಡು ನೋಡು ಗೆಳತಿ ನೋಡು  ಕಾಲ ಒಡುತಿದೆ ಕನಸ್ಸು ಅರಳುತಿದೆ ಮನಸ್ಸು ಕೇರಳುತಿದೆ ಭಾವನೆ ಮಿಡಿಯುತಿದೆ ನೆನಪು ಕಾಡುತಿದೆ ವಯಸ್ಸು ಉರುಳುತಿದೆ ಜೀವನ ಸಾಗುತಿದೆ ಆಸೆ ನೂರೆಂಟಿದೆ ಭಾಷೆ ಬಾಡಿದೆ ಬದುಕು ಸವೆಯುತಿದೆ ಕಷ್ಟ ಕರಗುತಿದೆ ನಷ್ಟ ಮರುಗುತಿದೆ ಇಷ್ಟ ಇಂಡುತಿದೆ ಮಾತು ಮುತ್ತಾಗಿದೆ ಪ್ರೀತಿ ಮತ್ತಾಗಿದೆ ಸುಖ ಕರೆಯುತಿದೆ ದುಃಖ ದೂರವಾಗಿದೆ ಚಿಂತೆ ಮರೆಯಾಗಿದೆ  ಓಡು ಗೆಳೆಯ ಓಡು ಜೀವನ ಜಿಕುವ ವರೆಗೆ ಓಡು ಭರವಸೆಯೇ ಬದುಕು ಚಿಂತೆ ಬಿಟ್ಟು ಬದುಕ ಬಂಡಿ ನೂಕು ಮದ್ಯೆ ಅನ್ಸಿದ್ರೆ ಇನ್ನು ಬೇಕು ಬೇಜಾರಾದ್ರೆ ಒಂದೂ ಕ್ವಾಟ್ರು ಹಾಕು ಓಡು ಗೆಳಯ ಓಡು ಅನ್ಸೋವರೆಗೂ ಸಾಕು ಹಾಗದಿದ್ದರೆ ಒಮ್ಮೆ ದೇವರ ಬೇಡು ಬೇಡುತ ಒಮ್ಮೆ ಹರಿ ನಾಮ ಹಾಡು  ಕಾಪಾಡುವನು ದೇವರು ನೋಡು *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

Bon Voyoge ಶುಭ ಪ್ರಯಾಣ

Image
  ಮರೆಯದ ನೆನಪು ನೂರು ಬಿಟ್ಟೋಗಲು ಬಲು ಬೇಜಾರು ಸ್ನಾತಕೋತ್ತರ ಕೇಂದ್ರದ ಸೂರು ಗೆಳಯರಿಲ್ಲದೆ ಇರುವುದು ಯಾಕೊ ಬಲು ಬೋರು ಕಳೆದ್ವಿ ನಾವು ಎರಡು ವರ್ಷ  ಒಂದೂ ವರ್ಷ ಕೊರೋನ  ಎಂಬ ಕರೀನಾ ನೋಡಿದ ಹಾಗೆ ಮತ್ತೊಂದು ವರ್ಷ ಲ್ಯಾಬ್ ಇಲ್ಲದೆ ಕತ್ರಿನಾ ನೋಡಿದ ಹಾಗೆ ಮೊನ್ನೆ ಸೇರಿದ ಹಾಗಿದೆ ನಾವು ಕಳೆಯುವ ಸಮಯದ ಕಾವು ಎಲ್ಲರಿಗೂ ತರಿಸಿದೆ ನೋವು ಮನಸ್ಸೇ ಬರ್ತಾ ಇಲ್ಲ ಬಿಡಲು ತಿಂದ್ರುನು ಬೆಲ್ಲ ಇಲ್ಲದ ಬೇವು  ಬಿಟ್ಟೋಗೋ ಸಮಯದಿ ಮುಂದಿನ ಭವಿಷ್ಯದ ಚಿಂತೆ ಉದ್ಯೋಗ ಸಿಗೋದು   ಕಷ್ಟ ಎಂಬ ಅಂತೇ ಕಂತೆ ಮನದ ತಲ್ಲಣ್ಣ ನೊರೆಂಟು ಅಂತೇ ಸಮಾಧಾನವಾಗಿರು ಉಟ್ಟಿಸಿದ ದೇವರು ಎಲ್ಲರಿಗೂ ಉಲ್ಲು ಮೈಸೂ ತಾನೇ ಮರೆತು ಚಿಂತೆ  ಬೈಕೊಂಡ್ವಿ ನಾವು ಟೀಚರಗಳನ್ನ ನೆನುಸ್ಕೊಂಡ್ರೆ ಬೇಜಾರು ಫ್ಯೂಚರನ್ನ ಸ್ಪೋರ್ಟ್ಸ್ ಹಾಡಿ ಮಜಾ ಮಾಡಿ ಕಳ್ದ್ವಿ ದಿನಗಳನ್ನ ಟೀಚರ್ ಕಂಡ್ರೆ ಬೇಜಾರು  ಆದ್ರೂನು ಅನ್ಸುತ್ತೆ ಒಮ್ಮೊಮ್ಮೆ  ನಮ್ಮ ಟೀಚರ್ ಸೂಪರ್  ಕುಣಿದು ಕುಪ್ಪಳಿಸಿ ಹಾಕು ಸ್ಟೇಪ್ಪು Gc pc ಹುಡುಗಳು ಮಾಡಲ್ಲ ತಪ್ಪು ನೋಡೋಕೆ ನಾವು ಒಂತರ ರಪ್ಪು ಮುಂದಿನ ವರ್ಷ RCB ದೆ ಕಪ್ಪು  ಬಿಟ್ಟೋಗೋ ಖುಷಿಲಿ ಬರೆಯೋಣ ಎಕ್ಸಾಮ್ ನೆನಪುಗಳು ಸವಿ ಒಂತರ ಮನ್ಸೂನ್ ಜ್ಞಾಪಸೊಕೊ ಒಮ್ಮೆ     ಯಾರಿಗದ್ರೋ ಕೊಟ್ಟಿರೋ ದಿಲ್ಲನು ಪ್ರೀತಿ ಒಂತರ   ಗುಲಾಬ ಜಾಮೂನ್  ಪ್ರೀತಿ ಫೈಲ್ ಆದ್ರೆ ಒಡೆದು ಹೋದ ಹಾ...

ಪ್ರೀತಿ ಮಾಡ ಹೋದೆ

Image
ಪ್ರೀತಿ ಮಾಡ ಹೋದೆ ತರುಣಿಯೊಡನೆ ಬಂದೆ ತರುಣಿ ಸೇರ ಹೋಗಿ ಒಲವ ಮಳೆಯಲ್ಲಿ ನೆನೆದೆ ಮಳೆಯ ಹಿಡಿಯ ಹೋದೆ ನಗುವ ನದಿಯಂತೆ ಹರಿದೆ ಕಣ್ಣ ನೋಟಕೆ ಕಾದು ಸೆಳೆವ ಹುಡುಗಿಯೊಡನೆ ಬಂದೆ ತಿರುಗಿ ನೋಡಲು ಇವಳು ಕಾಣೆಯಾದಳು ಪ್ರೀತಿ ಮಾಡ ಹೋದೆ ತರುಣಿಯೊಡನೆ ಬಂದೆ ನಕ್ಕರೆ ನಾಚಿ ಮುತ್ತು ತರುವ ಕಲೆತರೆ ಮನಸ್ಸು ಕೊಟ್ಟು ಬಿಡುವ ಪ್ರೇಮ ಸಂಚಿಕೆ ರಾಗ ಮಾಲಿಕೆ ತಿರುಗಿ ನೋಡಲು ಇವಳು ಕಾಣೆಯಾದಳು ಪ್ರೀತಿ ಮಾಡ ಹೋದೆ ತರುಣಿಯೊಡನೆ ಬಂದೆ ಅರಿತರೆ ಚೆಂದದಿ ನಗುವೇ ಬೇರೆತರೆ ನನ್ನನ್ನು ಕಾಡುವ ಒಲವೇ ಸೌಂದರ್ಯ ಕನ್ನಿಕೆ ಕವಿಯ ಬೇಡಿಕೆ ತಿರುಗಿ ನೋಡಲು ಇವಳು ಕಾಣೆಯಾದಳು ಪ್ರೀತಿ ಮಾಡ ಹೋದೆ ತರುಣಿಯೊಡನೆ ಬಂದೆ ಕಣ್ಣ ನೋಟಕೆ ಕಾದು ಸೆಳೆವ ಹುಡುಗಿಯೊಡನೆ ಬಂದೆ ತಿರುಗಿ ನೋಡಲು ಇವಳು ಕಾಣೆಯಾದಳು *********ರಚನೆ********** ಡಾ. ಚಂದ್ರಶೇಖರ. ಸಿ. ಹೆಚ್

ಗೆಳತಿ ನೀ ನಗಬೇಕು

Image
ನಗಬೇಕು ಗೆಳೆತಿ ನೀ ನಗಬೇಕು ನನ್ನೆದೆಯ ತೋಟದಲ್ಲಿ ಮಲ್ಲಿಗೆಯ ಗಿಡವಾಗಿ ಮೋಗ್ಗೊಂದು ಅರಳಿದಂತೆ ನೀ ನಗಬೇಕು ನಗಬೇಕು ಗೆಳೆತಿ ನೀ ನಗಬೇಕು ಕನಸ್ಸುಗಳು ಮುದುಡಿದರು  ಮನಸ್ಸುಗಳು ಕದಡಿದರು  ಹರಿವ ಜರಿಯಂತೆ ನೀ ನಗಬೇಕು ನಗಬೇಕು ಗೆಳೆತಿ ನೀ ನಗಬೇಕು ದೇಹಕೆ ಅವರಿಸಿದ ಮುಪ್ಪು ಮುಖದ ತುಂಬಾ ಸುಕ್ಕು ಕಾಂತಿಹೀನ ಕಣ್ಗಳು ಬಿರುಕಿನ ಕೆಂಪು ತುಟಿ ಬಿಟ್ಟು  ಹೊಳೆವ ಹಲ್ಲಿನಂತೆ ನೀ ನಗಬೇಕು ನಗಬೇಕು ಗೆಳೆತಿ ನೀ ನಗಬೇಕು ಇರುಳ ಕತ್ತಲೆಯಲಿ ಆಕಾಶದ ಊರಿನಲ್ಲಿ ನಕ್ಷತ್ರಗಳ ಮನೆಯಲಿ ಚಂದ್ರ ನಕ್ಕಂತೆ ನೀ ನಗಬೇಕು ನಗಬೇಕು ಗೆಳೆತಿ ನೀ ನಗಬೇಕು ಇರುಳ ಕತ್ತಲೆ ಮನೆಯಲಿ ಮನಸ್ಸುಗಳು ಕುಣಿವ ಖುಷಿಲಿ  ಬೆಳಕು ಹುಡುಕುವ ಬರದಿ ಊರಿವ ದೀಪದ ಹಣತೆಯಂತೆ ನೀ ನಗಬೇಕು ನಗಬೇಕು ಗೆಳೆತಿ ನೀ ನಗಬೇಕು ಭೂತಾಯಿಯ ಮಡಿಲಲ್ಲಿ ನದಿಗಳ ಒಡಲಲ್ಲಿ ಹಸಿರು ಕಾಣುವ ರೀತಿ ನೀ ನಗಬೇಕು ನಗಬೇಕು ಗೆಳೆತಿ ನೀ ನಗಬೇಕು ನಮ್ಮೂರ ಜಾತ್ರೆಯಲಿ ಬಸವಣ್ಣನಾ ಬೀದಿಯಲ್ಲಿ ದೇವರ ಗುಡಿಗೆ ಎಳೆದ ಸೀರಿಯಲ್ ಸೆಟ್ ಬೆಳಕಂತೆ ನೀ ನಗಬೇಕು ನಗಬೇಕು ಗೆಳತಿ ನೀ ನಗಬೇಕು ಹಸಿರು ಮೈಯ್ದು ಆಕಳು ಕರುವನ್ನು ಇಯ್ದು ಕರು ಕುಡಿವ ಬಿಳಿ ಕೆನೆ ಹಾಲಂತೆ ನೀ ನಗಬೇಕು ನಗಬೇಕು ಗೆಳತಿ ನೀ ನಗಬೇಕು ಮನವು ನೋವಿಂದ ಬೆಂದು ದುಃಖವ ಹೊತ್ತು ತಂದರು  ಹೊಳೆವ ಕಣ್ಣೀರ ಹನಿಯಂತೆ ನೀ ನಗಬೇಕು  ********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ನೆಮ್ಮದಿ ಹುಡುಕಿ

Image
ಬದುಕಿನ ಜಂಜಾಟಾದಲ್ಲಿ ಎತ್ತಾ ಸಾಗಿಹೇವು ನಾವು ಸುತ್ತಲೂ ಮಾನವರ ನೆರಳು ಕಾಣುವೆವು ಎಲ್ಲರಲು ಒಂದೇ ಹಣ ಗಳಿಸುವ ಗುರಿಯು ಮರೆತು ಬದುಕು ಬೇಕು ಇಲ್ಲಿ ಮಕ್ಕಳು ಮರಿಯು ನಿತ್ಯವೂ ಸಾಗುತಿದೆ ಎಳು ಬೀಳಿನ ಜೀವನ ನೆಮ್ಮದಿಯ ಹುಡುಕುತಿರು ಜನ ಕಣ್ಣು ಬಿಟ್ಟು ಎದ್ದು ಕೆಲಸಕೆ ಹೋಗುವ ಗೋಜು ಶನಿವಾರ ಬಂದರೆ ವಾರದ ಕೊನೆ ಮೋಜು ಹೊರಟಿಹರು ಹುಡುಕುತ ನೆಮ್ಮದಿ ಅರಸಿ ಬದುಕನು ಸವೆಸಿ  ಮಕ್ಕಳು ಶಾಲೆಗೆ ಅಪ್ಪ ಅಮ್ಮನು ಕೆಲಸಕೆ ಸಂಜೆ ಕವಿದ ಮೇಲೆ ಮಂಜು ಮುತ್ತಿದ ಹಾಗೆ ಎಲ್ಲರೂ ಉಂಡು ತಿಂದು ಮಲಗಿ ಕಾಯುತಿಹರು ಇಲ್ಲಿ  ಮುಂಜಾನೆ  ಸೂರ್ಯನ ಕಿರಣ ನಗುವ ಹುಡುಕಲು ಇಲ್ಲಿ ದುಡ್ಡು ಕೊಡಬೇಕಂತೆ ಅಪ್ಪ ಅಮ್ಮನಿಗೆ ವೃದ್ಧರ ಕೇಂದ್ರವಂತೆ ಅನಾಥ ಮಕ್ಕಳಿಗೂ ಆಶ್ರಮವಂತೆ ಮರೆತು ಬಾಳಬೇಕು ನೂರೆಂಟು ಚಿಂತೆ ನನ್ನವರು ಯಾರಿಲ್ಲ ಅಕ್ಕರೆಯ ತವರಿಲ್ಲ ಆಸೆಗಳಿಗೆ ರೆಕ್ಕೆ ಪುಕ್ಕ ಬಂದಿದ್ದೇಯೆಲ್ಲಾ ಕನಸುಗಳು ನನಸು ಮಾಡಲು  ದಿನವೂ ದುಡಿಯುವರು ಎಲ್ಲಾ ವೇಗದಲಿ ಹೊಡುತಿಹಾ ಜೀವನ ಮೆಟ್ರೋ ರೈಲಿನತೆಲ್ಲಾ ಸಾಕು ಎಂದರೆ ಬಿಡಲು ಹಾಗುವುದಿಲ್ಲ ಚಿಂತೆಗಳ ಸಂತೆಯಲಿ ನೆಮ್ಮದಿ ಅರಸುತ ಬದುಕು ದೂಡ ಬೇಕು ಮೂಕರಾಗಿ ವಾಹನದ ದಟ್ಟನಿಯ ಜಗದ ಒಳಗೆ ಜಾಗೂರುಕರಾಗಿ ಮಳೆ ಬಂದಾಗ ರಸ್ತೆಗಳು ಹಾಗಿಹವು ಗುಂಡಿಗೋಟರು ನಾನಿರುವ ಬೀದಿ ತುಂಬಾ ನೀರಿನ ತೊಡರು  ಮುಳುಗಿ ಹೇಳುಬೇಕು ಇಲ್ಲಿ ನೀರನು ಮೊಗೆದು  ಕಟ್ಟೀಹರು ಮನೆಯ ಇಲ್ಲಿ ಮಣ್ಣ ಬಗೆದು ಬೇಕು ಸಾಕುಗಳ ಬದಿಗಿಟ್ಟು...

ಜಾಲಿ ಮರ

Image
ಬರಡು ಭೂಮಿಯಲಿ ಹಸಿರು  ಅಂಬರ ನೀನು ನನ್ನ ಹೊಲವ ಕಾಯುವ ತಂತಿ  ಬೇಲಿಯೇ ನೀನು ಮೈತುಂಬಾ ಮುಳ್ಳು ಹೊದ್ದು  ನಗುತಿರುವ ನಲ್ಲೆ ನೀನು ಊರು ತುಂಬಾ ಸಾವಿರ  ಮರಗಳಲಿ ಗಟ್ಟಿಗಿತ್ತಿ ನೀನು ನನ್ನೆದಯ ಆಳದಲ್ಲಿ ಮುಳ್ಳು  ಚುಚ್ಚಿ ಸಕ್ಕರೆಯ ಕಾಯಿಲೆಗೆ ಓಷಧಿಗೆ ಗುರಿಯಾದೆ ನೀನು ಆಗ್ಗದ ಮರಗಳು ನೂರು  ಕೂಗ್ಗದ ಮರ ನೀನು ಜಗ್ಗಲು ಮುಳ್ಳಿನಿಂದ  ಮುತ್ತಿಕುವವಳು ನೀನು ಬೀಟೆ, ಸಾಗೂನಿ ಮರಕೆ ಸಡ್ದು  ಒಡೆದು ಮಂಚವಾದೆ ಕವಿ ಬರೆಯೋ ಕವನದ  ಪದಗಳಲಿ ಕುಂಚವಾದೆ ಬೆಂದು ಬೆಯ್ದು ಬೆಂಕಿಯಲಿ ಕೆಂಡದ ಕಪ್ಪು ಇದ್ದಿಲಾದೆ ಭಾವನೆಗಳ ಇಲ್ಲದ ಬದುಕಿಗೆ  ನೀ ಕುಕ್ಕಿ ಅಳುವಾದೆ ಯಾರು ಬೆಳೆಯದ ಬರಡಲಿ  ಸಾಮ್ರಾಜ್ಯ ನಿನದೆ ಇತಿಹಾಸ ಸೃಷ್ಟಿಸುವ ರಾಜನಂತೆ ಮೈಯೆಲ್ಲಾ ಮುಳ್ಳ ಕವಚವಾದೆ ನೀರು ಕಾಣದ  ನೆಲದಲ್ಲಿ  ಬೆಂಕಿಗೆ ಕಾಡಗಿಚ್ಚು ನೀನಾದೆ ಶ್ರೀಗಂಧದ ಸುಗಂಧದ  ಕಂಪಿನಲಿ ನೀನು ಮರೆಯಾದೆ ಕಾಣದೆ ಕಾಲಿಗೆ ನೀ ಕಚ್ಚಿ  ಕಂಬನಿಯಲಿ ಕಣ್ಣ ನೀರ ಹನಿಯಾದೆ ಮನುಷ್ಯನ ಕಾಲುತುಳೀತಕೆ ಸಿಗದೇ ಬಂಡಾಯದ ಜಾಲಿ ಮರವಾದೆ  ************ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಕೂಲಿ ನಾನು

Image
ಆಸೆಗಳಾ ಮೂಟೆ ಕಟ್ಟಿ ಕನಸ್ಸುಗಳ ಮರವ ಸುಟ್ಟಿ ಜೀವನವೆಂಬ ಕೆಂಡದಿ  ಒಪ್ಪೋತಿನ ಊಟಕೆ ದುಡಿವ ಕೂಲಿ ನಾನು ಎದ್ದರೆ ತಣ್ಣೀರು ಸ್ನಾನ ಅಲ್ಪ ಸ್ವಲ್ಪ ತಿಂಡಿ ಪಾನ ಬೆವರು ಹರಿಸಿ ರಕ್ತ ಸವೆಸಿ ಮಾಲೀಗಾಗಿ ದುಡಿವ ಕೂಲಿ ನಾನು ಬೇವರ ಹನಿಯೇ ಮಳೆಯೂ ಹರಿವ ರಕ್ತದ ಬಿಸಿಯು ಹರಿದ ಅರುಕು ಅಂಗಿ ತೊಟ್ಟು ಮುರುಕು ಲುಂಗಿ ಸೂಟು ಬೂಟಿನ ಕೆಳಗೆ ಕೂಲಿ ನಾನು ಸಂಸಾರ ಸಾಕಲು ಬೇಕು ಅನ್ನ ದಿನವೂ ಬಿಸಿಲಿನ  ಗುನ್ನ  ರಾತ್ರಿಯಲಿ ಒಂಚೂರು ಪಾನ ಮನೆಮಂದಿಗೆ ಉಸಿರೇ ಮಾನ  ಸ್ವಲ್ಪ ಹಿಟ್ಟಿಗಾಗಿ ಬರುವ ಕೂಲಿ ನಾನು ಯಾರು ಬಂದರೆ ಏನು ಯಾರು ಹೋದರೆ ಏನು ಬಣ್ಣ ಮಾಸುವಾ ಜಗದಿ ಬಣ್ಣ ಹಚ್ಚಿ ಕುಣಿವ ಜನದಿ ಬದುಕಿಗಾಗಿ ದುಡಿವ ಕೂಲಿ ನಾನು *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್