Posts

ವಿಘ್ನ ವಿನಾಯಕ

Image
ಬಾಳುವ ಬದುಕಿನಲಿ ಜೀವನ ಪಾವನ  ಕೈಮುಗಿದು ಬೇಡು ಸೊಂಡಿಲ ಗಣೇಶನ ಮೊಗದಲ್ಲಿ ಮಂದಹಾಸ ಮೂಡಿ ನಗುವಿನಲಿ ಹರಿವ ನದಿ ಓಡಿ ಕೆನ್ನೆಯಲಿ ಕೆಂಪು ನೆಲದ ಕಂಪು ಮೂಗಿನಲಿ ಆನೆ ಸೊಂಡಿಲ ತಂಪು ಇಲಿ ಏಕೆ ನಿನ್ನ  ಹೊರುವ ವಾಹನ ಕೂರಲು ನಿನಗೆ ಬೇಕು ಸೋಪಾನ ವಿದ್ಯೆಗೆ ನೀನೆ ಅಧಿಪತಿ ಗಣಪ ಹಿಡಿದು ಬೇಡಬೇಕು ಸ್ಲೆಟು ಬಳಪ ಶಿವ ಪರ್ವಾತಿಯ ಪುತ್ರ ನೀನು ಬೇಡಿದನ್ನು ನೀಡುವ ಪಾಪ ನಾಶಕ ನೀನು ನಮ್ಮ ಊರಿಗೆ ಗಣಪ ಬಂದ ವಿಘ್ನ ವಿನಾಶಕ ವಿನಾಯಕ ಬಂದ ,ಅಂಬಾರಿ ಏರಿ ಮೋದಕ ಬಂದ ಆಸೆ ಇಡೆರಿಸುವ ಗಜಾನನ ಬಂದ  ಮಣ್ಣಿನಲಿ ನಿನ್ನ ಆಕಾರ ಮಾಡಿ ಹೊನ್ನಿಗಾಗಿ ನಿನ್ನ ಮಾರಾಟ ಮಾಡಿ ಗಂಧ ಕರ್ಪೂರದ ಆರತಿ ಮಾಡಿ  ಭಕ್ಷ ಭೋಜನ  ನೈವೇದ್ಯ ಮಾಡಿ  ನೀರಿನಲ್ಲಿ ಮುಳಿಗಿಸುವರು ನೋಡಿ ಜೀವವಿರದ ಗೊಂಬೆ ನಿನ್ನ ಪಾಡು ಭಕ್ತಿಯಲಿ ಬೇಡುವರು ನಿನ್ನ ನೋಡು ನಿನ್ನ ಹಬ್ಬ ಮುಗಿದ ಮೇಲೆ  ಕೇಳುವವರು ಇಲ್ಲ ನಿನ್ನ ಪಾಡು ನೀರಿನಲ್ಲಿ ಕರಗಿದ ಮಣ್ಣು ನೀನು ನೋಡು ಗಣೇಶನ ಹಬ್ಬದ ಶುಭಾಶಯಗಳು ಎಲ್ಲರಿಗೂ  ************ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಕಾಮನ ಬಿಲ್ಲು ನೀನು

Image
 ಬರವಣಿಗೆ ಸಿಗದ ಪದ ಪುಂಜ ನೀನು ಪದಗಳಿಗೆ ನಿಲುಕದ ಚೆಂದದ ಕವನ ನೀನು ಕನಸ್ಸಿನ ಸಂತೆಯಲಿ ಅರಳಿದ ಹೂವು ನೀನು ಬಿಸಿಲ ಮಳೆಯಲಿ ಮೂಡಿದ ಕಾಮನಬಿಲ್ಲು ನೀನು ಹೇಗೆ ವರ್ಣಿಸಲಿ ನಿನ್ನ ಹೊಳೆವ ಆ ಬಣ್ಣ ಕದಡಿದ ನೀರಲ್ಲಿ ಕಾಣುವ ಪ್ರತಿಬಿಂಬ ಬಣ್ಣ ಮರೆತರು ನೆನಪಾಗೋ ನಿನ್ನ ಕೆಂಪು ವರ್ಣ ಹಾರಿ ಹೂವು ಹುಡುಕುವ ಬಯಕೆಯ ಚಿಟ್ಟೆ ಬಣ್ಣ ಹರಿವ ನೀರಲ್ಲಿ ಮನಸ್ಸು ಹರಿದು ಬಂದು ಕಾಣದ ಕಡಲಲಿ ಮುಳುಗಿ ಮುಳುಗಿ ಮಿಂದು ಕಡಲ ತಡಿಗೆ ಅಪ್ಪಳಿಸಿ ದಡಕೆ ಬಂದು ಸೋಕಿದ ನಿನ್ನಯ ಪಾದಕೆ ತನ್ನ ತಾನೇ ಕೊಂದು ಸಂಜೆ ಸೂರ್ಯ ಮುಳುಗುತಾ ನಕ್ಕಂತೆ ಉದಯಿಸುವ ಚಂದ್ರ ಬಾ ಎಂದು ಕರೆದಂತೆ ನಕ್ಷತ್ರಗಳ ಗೂಡಿನಲಿ ಬಾಳು ಬೆಳಕಂತೆ ನೀಲಿ ಆಕಾಶದಲಿ ನಾ ತೇಲಿ ನನ್ನೆ ನಾ ಮರೆತಂತೆ *************ರಚನೆ ******    ಡಾ. ಚಂದ್ರಶೇಖರ. ಸಿ. ಹೆಚ್

ವಚನಗಳು -35

Image
ಲಿಂಗವನು ದಿನ ಪೂಜಿ ಲಿಂಗವನು ದಿನ ನೆನೆದು ಲಿಂಗವನು ದಿನ ನೋಡಿ ಕಾಯಕವೆಂಬ ಲಿಂಗವ ಶ್ರದ್ದೆಯಲಿ ಮಾಡು ಒಲಿವನು ನೋಡು ನಮ್ಮ ಬಸವಣ್ಣ ಇಟ್ಟ ವಿಭೂತಿ ಆಣೆಯಲಿ ಹುಟ್ಟು ಭೇದದ ಜ್ಯಾತಿ ನೆಲೆಯಲಿ ನಾಸ್ತಿಕನಾದೊಡೆ ಮನದ ಮನೆಯಲಿ ಕಾಯಕದಿ ಪಾಪವ ತೊಳೆ ನಮ್ಮ ಬಸವಣ್ಣ ಐಶ್ವರ್ಯ ಬಂದಾಗ ಅಹಂಕಾರ ಬೇಡ ಮನದಿ ಲಿಂಗವ ಜರಿವ ನಡೆಬೇಡ ಪಾಪದಿ ಮನವ ದಿನ ಸುಡಬೇಡ  ಕಾಯಕವೇ ಕೈಲಾಸ ಇದು ಮರೀಬೇಡ ನಮ್ಮ ಬಸವಣ್ಣ ***********

ವಚನಗಳು -34

Image
ಹೂವು ಮಲ್ಲಿಗೆಯಾದರೇನು ಹೂವು ಸಂಪಿಗೆಯಾದರೇನು ಹೂವು ಗುಲಾಬಿಯಾದರೇನು ಸುವಾಸನೆಯು ಜಾತಿ ಕೇಳುವುದೇ ಜಾತಿಯ ಮೀರಿ ನಿಂತಿಹುದು ಕಾಯಕದ ನೆಲೆಗಟ್ಟು ನಮ್ಮ ಬಸವಣ್ಣ ಮೋಡದಿ ಮಳೆ ಸುರಿದು ಊರ ಎಲ್ಲಾ ನೆರೆಯಾಗಿ ಹುಲ್ಲು ಬಾಯತೆರೆದಿರಲು ಶಿವನ ಬೇಡುವುದೇ ಕಾಯಕವ ನೋಡ ನಮ್ಮ ಬಸವಣ್ಣ ಓದಿ ವಾದವ ಮಾಡುತಾ ಅಂಗಿನ ಗಾದೆಯ ಹೇಳುತಾ ವೇದ ಪುರಾಣಗಳ ಸಾರುತ ಇಂಗು ತಿಂದ ಮಂಗನಂತೆ ಕಾಯಕವ ಮಾಡಿದರೆ ಫಲವೇನು ನಮ್ಮ ಬಸವಣ್ಣ **********************ರಚನೆ ************             ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -32

Image
ಸುಳ್ಳು ನುಡಿವವರಿಗೆ ಕಾಲ, ಮೋಸಕೆ ಕಾಲ ಕೆಡುಕು ಮಾಡುವವರಿಗೆ ಕಾಲ, ಅನ್ಯಾಯಕೆ ಕಾಲ ಧರ್ಮದಿ ನಡೆವವರಿಗೆ ಅಧರ್ಮವು ಕಾಡಿಹುದು ಶ್ರದ್ದೆಯಲಿ ಮಾಡುವ ಕಾಯಕವು ಧರ್ಮ ನೋಡ ನಮ್ಮ ಬಸವಣ್ಣ ಪೂಜೆ ಮಾಡುವವನ ಮನದಿ ಕಡು ಮೋಸ ಹೇಳುವ ಮಂತ್ರದಿ ನೂರೆಂಟು ಮಾಟ ಪಾಪದ ಮನದ ಮನೆಯಲಿ ಪೂಜಿಸುವನು ಹೊಲೆಯ ಕಾಯಕದಿ ಶ್ರದ್ದೆ ಪಾಪಿಗೂ ಕೈಲಾಸ ಕಾಣ ನಮ್ಮ ಬಸವಣ್ಣ ಮೌನದಿ ಮಾಡುವ ಕೆಲಸ ಜ್ಞಾನದಿ ತಿಳಿದ ವಿದ್ಯೆ ಸ್ವಾಭಿಮಾನದಿ ಬೆಳಗುವ ಜ್ಯೋತಿ ಕಾಯಕದಿ ನೀಡುವ ಸುಖವು ಸ್ವರ್ಗ ನಮ್ಮ ಬಸವಣ್ಣ *************ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -33

Image
ಆಕಾಶದಿ ಮನೆಯ ಮಾಡಿ ನಕ್ಷತ್ರಗಳ ಸಾಲು ಹಾಕಿ ಚಂದ್ರನ ಬೆಳಕು ಚೆಲ್ಲಿ ಪಾಪಿಗೆ ಕಾಯಕವುಮಸಣ ನೋಡ ನಮ್ಮ ಬಸವಣ್ಣ  ಪರ್ವತವ ಏರಿದೊಡೆ ಶಿವ ಕಾಣುವನೇ ಗಂಗೆಯನು ಪೂಜಿದೊಡೆ ಶಿವ ಕಾಣುವನೇ   ಸರ್ವಂತಯಾರ್ಮಿ ಶಿವನು ನೆಲೆ ನಿನ್ನೊಳಗೆ ಕಾಯಕದಿ ಪೂಜು ಶಿವನ ನಮ್ಮ ಬಸವಣ್ಣ ಉಪ್ಪಿನಕಾಯಿ ಇಲ್ಲದ ಊಟ ಭಕ್ತಿಯೇ ಇಲ್ಲದ ಪೂಜೆ ಮಡಿ ಇಲ್ಲದವಳ ಮನೆವಾರ್ತೆ ಕಾಯಕವ ಮಾಡದ ಕರ್ಮಿಯ ಲಿಂಗ ಮೆಚ್ಚ ನಮ್ಮ ಬಸವಣ್ಣ **************ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್ 

ನಲ್ಲ ನಾನಾಗಲೇ

Image
ಹುಡುಗಿಯ ನೋಡಿದ ಮನ ಕುಣಿಯಿತು ಹೀಗೆ ಪ್ರತಿ ದಿನ ಸೊಗಸಿನ ಸೌಂದರ್ಯಕೆ ಜನ್ಮ ಜನ್ಮದ ನಲ್ಲ ನಾನಾಗಲೇ  ಓ ಗೆಳತಿ ಆ ನಿನ್ನ ಶ್ವಾಸದಿ ಉಸಿರು ನಾನಾಗಲೇ ಆ ನಿನ್ನ ಹೃದಯದಿ ಹರಿವ ರಕ್ತ ನಾನಾಗಲೇ ಆ ನಿನ್ನ ಕೆಂಪು ತುಟಿಗೆ ಲಿಪ್ಸ್ಟಿಕ್ ನಾನಾಗಲೇ ನಿನ್ನ ಹೊಳೆವ ಕಣ್ಣ ರೆಪ್ಪೆಗೆ ಕಾಡಿಗೆ ನಾನಾಗಲೇ ನಿನ್ನ ಸುಂದರ ಕೆನ್ನೆಗೆ ಪೌಡರ್ ನಾನಾಗಲೇ ನಿನ್ನ ಆ ಕುಂಚದ ಜಡೆಗೆ ಮಲ್ಲಿಗೆ ಹೂವು ನಾನಾಗಲೇ ನಿನ್ನ ಮೈಮಾಟಕೆ ಸೆಳೆವ  ಹಸಿರು ಸೀರೆ ನಾನಾಗಲೇ ನಿನ್ನ ಕೈಗಳಲಿ ಮಿನುಗುವ ಬಳೆ ನಾನಾಗಲೇ ಕಾಲ ಬೆರಳಿಗೆ ಪೋಣಿಸಿದ ಕಾಲುಂಗುರ ನಾನಾಗಲೇ ನಿನ್ನ ಕಾಲಲಿ ಘಲ್ಲ ಎನ್ನುವ  ಗೆಜ್ಜೆ ನಾನಾಗಲೇ ಗೆಳತಿ ಕುಣಿವ ಮನದಿ ನಿನ್ನ ಬಯಸಿ ನಿನ್ನ ಒಲವ ಚೆಲುವಿಗೆ ಸುಂದರ ಸೊಬಗಿನಾ ಗುಣಕೆ ಸವಿ ನೋಟದ ಮಾತಿಗೆ  ಸೋತು ನಲ್ಲ ನಾನಾಗಲೇ **********ರಚನೆ **********      ಚಂದ್ರಶೇಖರ. ಸಿ. ಹೆಚ್