Posts

ಬೆಂಕಿಗಾಹುತಿ

Image
ಒಳಗೊಳಗೇ ಕುದಿಯುತಿದೆ ಬೆಂಕಿಯ ಒಡಲು  ಆ ಮುಗಿಲು ಕಪ್ಪಿಟು ಉಗಿಯುತಿದೆ ಕಾರ್ಮೋಡಕೆ ಹೊಗೆಯ ಬುಗಿಲು ಉರೊಂದು ಮಸಣದ ಕೇರಿ ಸುಟ್ಟ. ಕಪ್ಪಿಟ್ಟ. ರಕ್ತ ಹೆಪ್ಪು ಗಟ್ಟಿ ನೋಡತ ಕಣ್ಣೀರ ಹನಿಗಳ ಕಡಲು ಆಸೆಗಳು ಹೂತಿಟ್ಟ ಸ್ಮಶಾನ ರೋಧಿಸಿದೆ ಮರ ಗಿಡ ಬಳ್ಳಿ ಚಿಟ ಪಟ, ಕೊತ ಕೊತ ಕುದಿದು ಕಾಡಲ್ಲಿ ಹರೆ ಬರೆ ಬೆಂದ ಪ್ರಾಣಿಗಳ ಕಣ್ಣೀರು. ನೆತ್ತರು ಸುರಿದು ರಕ್ಷಸನಂತೆ ನಗುವ ಕೆಂಪು ಬೆಂಕಿ ನಂದಿಸಲು ತಿಣು ಕಾಡಿದ ಫೈರ್ ಇಂಜಿನ್ ಚಿಮ್ಮತಿದೆ ನೀರು ಆಕಾಶಕೆ ನುಂಗುತಿದೆ ನೀರ ಕೆಂಪು ಕೆನ್ನಾಲಗೆ ಮನದಿ ಬೆಂದ ದೇಹದ ವಾಸನೆ ಕಪ್ಪಾನೆಯ ಹೊದಿಕೆಯ ಹುಟ್ಟು ಕೆಂಪನೆಯ ಸೀರೆಯ ಹುಟ್ಟ ರೀತಿ ಕೇಳುವರು ಯಾರು ಗೋಳು ಸುಡಿತಿದೆ ಜೀವ ರಾಶಿಗಳು ಕೆಂಡಾಡೋಕುಳಿಯಲ್ಲಿ ಮಿಂದು ರಕ್ತವು ಜಿನುಗಿ ಬೆಂದು, ನೊಂದು ನೀರಿಗಾಗಿ ಬೇಡಿದೆ ಪ್ರಾಣಿ ಕಾಣದ ಕಾಡಲ್ಲಿ ಹಸಿದು ಬಸಿದ ಬಯಕೆಗಳು ಕೊಂದು ಬಾಡಿದೆ ದೇಹ  *********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್

ಬೆಂಗಳೂರು ಹುಡುಗಿರ ಸೂಪರ್ ಕಾಣಣ್ಣ

Image
ಪೆಗ್ ಮೇಲೆ ಪೆಗ್ ಕುಡಿದು ಒಮ್ಮೆ ಹಾಗೆ ಗಾಂಜಾ ಹೊಡೆದು ತೂರಾಡೋ ಹುಡುಗೀರ್ ನೋಡಣ್ಣ ಬ್ರಿಗೇಡ್ ರೋಡ್ ರಾತ್ರಿಯಲ್ಲಿ ಚೆಂದ ಕಾಣಣ್ಣ ರೋಡ್ ತುಂಬಾ ಲೈಟ್ ನೋಡು ಹುಡುಗೀರ್ ಬಣ್ಣ ವೈಟ್ ನೋಡು ಸೀರೆ ಎಲ್ಲಿ ಕಾಣೆ ನೋಡಣ್ಣ ಬ್ರಿಗೇಡ್ ರೋಡ್ ರಾತ್ರಿಯಲ್ಲಿ ಚೆಂದ ಕಾಣಣ್ಣ ಹುಡುಗೀರ ಏಕೊ ತುಂಬಾ ಸ್ವೀಟ್  ಲುಕ್  ಹಾಗೆ ಕ್ಯೂಟ್  ಕಿಕ್ಕು ಹಾಗೆ ಲೈಟ್ ನೋಡು ಒಮ್ಮೆ ಬಂದು ತಮಣ್ಣ  ಬ್ರಿಗೇಡ್ ರೋಡ್ ರಾತ್ರಿಯಲ್ಲಿ ಚೆಂದ ಕಾಣಣ್ಣ ಮಾತಿನಲ್ಲಿ ನಶೆ ಪ್ರೀತಿಯಲ್ಲಿ ಉಷೆ ಕಣ್ಣಿನಲ್ಲಿ ಚೂರಿ  ಇವಳು ತುಂಬಾ ಪ್ಯಾರಿ ಜೀನ್ಸ್ ಚಡ್ಡಿ  ನಾರಿ ನೋಡಣ್ಣ ಬ್ರಿಗೇಡ್ ರೋಡ್ ರಾತ್ರಿಯಲ್ಲಿ ಚೆಂದ ಕಾಣಣ್ಣ ಸೈಟ್ ಮೇಲೆ ಸೈಟ್ ಕೊಟ್ಟು ಹುಡುಗರ ಹೃದಯ ಅರಿದು ಬಿಟ್ಟು ನಕ್ಕು ನಡೆವ ಸುಂದರಿ ನೋಡಣ್ಣ ಬ್ರಿಗೇಡ್ ರೋಡ್ ರಾತ್ರಿಯಲ್ಲಿ ಚೆಂದ ಕಾಣಣ್ಣ ನೋಡಕೆನೆ ತುಂಬಾ ಹಾಟ್ Perfume ಏಕೊ ತುಂಬಾ ಗಾಟು ಟಚ್ ಮಾಡಿದ್ರೆ ಸ್ಟಾರ್ಟ್ ಕಾಣಣ್ಣ ಬ್ರಿಗೇಡ್ ರೋಡ್ ರಾತ್ರಿಯಲ್ಲಿ ಚೆಂದ ಕಾಣಣ್ಣ ಪೆಗ್ ಮೇಲೆ ಪೆಗ್ ಕುಡಿದು ಒಮ್ಮೆ ಹಾಗೆ ಗಾಂಜಾ ಹೊಡೆದು ತೂರಾಡೋ ಹುಡುಗೀರ್ ನೋಡಣ್ಣ ಬೆಂಗಳೂರು ಹುಡುಗಿರ ಸೂಪರ್ ಕಾಣಣ್ಣ *********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್

ಮಳೆ ಹನಿ

Image
ಹನಿ ಹನಿ ಹನಿ ಹನಿ ಚಿಟ ಪಟ ಮಳೆ ಹನಿ ಕಣ್ಣಲೇ ಸುಡುತಿದೆ ವಿರಹದ ಪ್ರತಿ ಧ್ವನಿ ನೋಟ ನೋಟ ಕಲೆತು ನನ್ನೇ ನಾನು ಮರೆತು ಬೀಳುವ ಮಳೆಗೆ ಕಣ್ಣು ಕಣ್ಣು ಬೆರೆತು ಪ್ರೀತಿ ಬಂತು ಹಾಗೆ ಮಳೆ ಹನಿ ನಿಂತ ಮೇಗೆ ಹೃದಯದಲ್ಲಿ ನಡುಕ ಕೈ ಒಮ್ಮೆ ಇಡುಕ ಒಲವು ನಿನ್ನ ಕರೆದು ನುಡಿಯಿತು ಇಂದು ಬಾರೆ ನನ್ನ ಚೆಲುವೆ ಒಲವ ಮಳೆಯಲೇಕೆ ನೆನೆವೆ ಕೈ ಇಡಿದು ನಡೆವೆ ಮನದ ಆಸೆ ಇಂದು ಮಿಂಚಿನಂತೆ ಬಂದು ಕೂಗಿ ಕೂಗಿ ಕರೆಯಿತು ಲವ್ ಯು ಎಂದು ಹೇಳಿತು ತಾರೆಗಳ ತೋಟ ತಾಗಿತ್ತು  ನೋಟ ನನ್ನ ಎದೆಯ ಮೇಲೆ ಪ್ರೀತಿಯ ಆಟ  ಕೈಲಿ ಇಡಿದ ಕೊಡೆ ಮಳೆ ನೀಲ್ತು ನಡೆ ಪ್ರೀತಿ ಏಕೊ ಮೌನ ನಮ್ಮ ನೋಟ ಕವನ  ಹನಿ ಹನಿ ಹನಿ ಹನಿ ಚಿಟ ಪಟ ಮಳೆ ಹನಿ ಕಣ್ಣಲೇ ಸುಡುತಿದೆ ವಿರಹದ ಪ್ರತಿ ಧ್ವನಿ ***********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

2. ಹಾರ್ಮೋನುಗಳು ನಮ್ಮ ಭವಿಷ್ಯ ರೂಪಿಸುವವೇ

Image
ಹಾರ್ಮೋನಗಳು ರಾಸಾಯನಿಕ ಸಂದೇಶವಾಹಕಗಳು ಅವುಗಳು ನೇರವಾಗಿ ರಕ್ತದಲ್ಲಿ ಸ್ರವಿಸಿ. ರಕ್ತದ       ಮೂಲಕ    ಹಾರ್ಮೋನ್ಗಳು ನಮ್ಮ ದೇಹದ ಅಂಗಗಳು ಮತ್ತು ಅಂಗಾಂಶಗಳಲ್ಲಿ ತಮ್ಮ ಕೆಲಸವನ್ನು ಮಾಡುತ್ತವೆ. ಈ ಹಾರ್ಮೋನಗಳು ಮನುಷ್ಯನ ದೇಹದಲ್ಲಿ ಹಲವಾರು ಪರಿಣಾಮಗಳನ್ನು ಉಂಟು ಮಾಡುತ್ತವೆ. 1) ಪ್ರಚೋದನೆ ಮತ್ತು ಬೆಳವಣಿಗೆಯ ಪ್ರತಿಬಂದ 2) ಎಚ್ಚರ ನಿದ್ದೆ ಚಕ್ರದ ನಿರ್ವಹಣೆ 3) ಮನಸ್ಥಿತಿಯ ಏರುಪೇರು 4) ರೋಗನಿರೋಧಕ  ವ್ಯವಸ್ಥೆಯ ಸಕ್ರಿಯ ಅಥವಾ ಪ್ರತಿಬಂದ 5) ಚಯಾಪಚಯ ಕ್ರಿಯೆಯ ನಿಯಂತ್ರಣ 6) ಮಿಲನ, ಹೋರಾಟ, ಪಲಾಯನ ಕ್ರಿಯೆಗೆ ಸಜ್ಜುಗೊಳಿಸುವುದು 7) ದೇಹವನ್ನು ನಮ್ಮ ಜೀವನದ ಹೊಸ ಹಂತಗಳಾದ ಪ್ರೌಢವಸ್ಥೆ, ಪೋಷಕ್ತವ, ಋತುಬಂದ 8) ಸಂತಾನೋತ್ಪತ್ತಿ  ಚಕ್ರದ ನಿಯಂತ್ರಣ 9) ಹಸಿವಿನ ಕಡುಬಯಕೆಗಳು ಹಾರ್ಮೋನಗಳನ್ನು ಆರ್ನಲ್ಡ್ ಆಡೋಲ್ಫ್ ಬೆರ್ಥಡ್ (1849), ಚಾರ್ಲ್ಸ್ ಫ್ರಾನ್ಸಿಸ್ ಢಾರ್ವಿನ (1880), ಬೇಲಿಸ್ ಮತ್ತು ಸ್ಟಾರ್ಲಿಂಗ್ (1902) ಅನ್ವೇಷಣೆ ಮಾಡಿದ್ದಾರೆ. ನಮ್ಮ ದೇಹದಲ್ಲಿ ಹಾರ್ಮೋನಗಳ ಪಾತ್ರ ದೊಡ್ಡದು ಏಕೆಂದರೆ ಅವುಗಳ ಸ್ರವಿಸುವಿಕೆ ನಮ್ಮ ದೇಹದಲ್ಲಿ ಸಾಕೋಷ್ಟ್ಟು ಪರಿಣಾಮಗಳನ್ನು ಉಂಟು ಮಾಡುತ್ತವೆ. ಹೀಗೆ ಹಾರ್ಮೋನಗಳು ಬಾಲ್ಯದಿಂದ ಪ್ರೌಢವಸ್ಥೆಯ ತನಕ ಅವುಗಳು ನಮ್ಮ ದೇಹದಲ್ಲಿ ವಿಧವಿದ ಕಾರ್ಯಗಳನ್ನು ನಿರ್ವಹಿಸುತ್ತವೆ. ಮನುಷ್ಯನ ದೇಹದಲ್ಲಿ ವಿವಿಧ ಹಾರ್ಮೋನ್ಗಗಳು  ಮತ್ತು ಲೈಂಗಿಕಹಾರ...

ವಚನಗಳು -30

Image
ಕಾಯಕವು ನನ್ನ ಪ್ರಾಣ. ಕಾಯಕವೇ ನನ್ನ ಉಸಿರು  ಕಾಯಕವೇ ನನ್ನ ಖುಷಿ, ಕಾಯಕವೇ ನನ್ನ ದೇವರು  ಕಾಯಕವೇ ನನ್ನ ಗೆಲುವು, ಕಾಯಕವೇ ನನ್ನ ಬದುಕು ಕಾಯಕವೇ ನನ್ನ ಫಲ, ಕಾಯಕವೇ ನನ್ನ ಬಲ ಕಾಯಕದಿ ನಾನು ಸರ್ವಸ್ವ ಕಂಡೆನು ನನ್ನೊಡೇಯಾ ನಮ್ಮ ಬಸವಣ್ಣ ನುಡಿವ ಮಾತಿನಲ್ಲಿ ಬಸವಣ್ಣನ ಕಾಣಿರೋ ನೋಡುವ ನೋಟದಲ್ಲಿ ಬಸವಣ್ಣನ ಕಾಣಿರೋ ಉಣ್ಣುವ ಊಟದಲ್ಲಿ ಬಸವಣ್ಣನ ಕಾಣಿರೋ ಪೂಜುವ ಲಿಂಗದಲಿ ಬಸವಣ್ಣನ ಕಾಣಿರೋ  ಮಾಡುವ ಕೆಲಸದಲಿ ಬಸವಣ್ಣನ ಕಾಣಿರೋ ಕಾಯುವನು ನಮ್ಮ ಬಸವಣ್ಣ ನೋಡಿರೋ ತಂದೆ ತಾಯಿಗಳಿರ ಜಂಗಮ  ಲಿಂಗಾಯಿತರಿಗೂ ಲಿಂಗವೆ ದೇವರು ಮಾದರ ಲಿಂಗಯಿತರಿಗೂ ಲಿಂಗವೆ ದೇವರು ಕುರುಬ ಲಿಂಗಾಯಿತರಿಗೂ ಲಿಂಗವೆ ದೇವರು ವೀರಶೈವ ಲಿಂಗಾಯಿತರಿಗೂ ಲಿಂಗವೆ ದೇವರು ಸಕಲ ಜಾತಿ ಲಿಂಗಾಯಿತರಿಗೂ ಲಿಂಗವ ಹಿಡಿದ   ಕಾಯಕವೇ ಕೈಲಾಸದ  ಯೋಗಿ ನಮ್ಮ ಬಸವಣ್ಣನೆ ದೇವರು  ****************ರಚನೆ **************          ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -29

Image
ಕಾಯವು ಭಕ್ತಿಯೇಂದೊಡೆ, ಜೀವವು ಭಕ್ತಿಯೆಂದೊಡೆ ಪ್ರಾಣವೂ ಭಕ್ತಿಯೆಂದೊಡೆ, ಧನವು ಭಕ್ತಿಯೆಂದೊಡೆ ಭಾವವು ಭಕ್ತಿಯೆಂದೊಡೆ, ದೇಹವು ಭಕ್ತಿಯೆಂದೊಡೆ ಕಾಯಕವ ಕೈ ಮುಗಿದು ಮಾಡು ಭಕ್ತಿಯ ಪರಮಾನಂದ ನೋಡೆಂದ ನಮ್ಮ ಬಸವಣ್ಣ ನಮ್ಮಯ ಹೊಟ್ಟೆ ಕಿಚ್ಚು ನಮ್ಮನೆ ಸುಟ್ಟಿತು  ಮಾಡಿಕೊಂಡ ಗಾಯ ಮನವ ಹುಣ್ಣಗಿಸಿತು ಸುಖವು ಎಲ್ಲಾ ಕೇಡು ದುಃಖಗಳ ನುಂಗಿತ್ತು ಕಾಯಕವು ಎನ್ನ ಜೀವನವ ಪಾವನ ಮಾಡಿತು ನಮ್ಮ ಬಸವಣ್ಣ ಕೋಲು ಮುರಿದ ಕಡ್ಡಿಯಂತೆ,ನೇಣು ಬಿಗಿದ ಗೊಂಬೆಯಂತೆ ಈ ಜೀವ ನೀ ಆಡಿಸಿದ ಬುಗುರಿಯಂತೆ ನೀ ನುಡಿಸಿದಂತೆ ನುಡಿವೆನು, ಕುಣಿಸಿದಂತೆ ಕುಣಿವೆನು ನಡೆಸಿದಂತೆ ನಡೆವೆನು, ನೀ ಇರಿಸಿದಂತೆ ಇರುವೆನು ಕಾಯಕವ ಕೈ ಮುಗಿದು ಮಾಡುವೆನು ನಮ್ಮ ಬಸವಣ್ಣ ****************ರಚನೆ *****************            ಡಾ. ಚಂದ್ರಶೇಖರ. ಸಿ. ಹೆಚ್ 

1. ಹಣವೇ ಜೀವನವೇ

Image
ಜೀವನ ಸಾಗಿಸಲು ಹಣ ತುಂಬಾ ಮುಖ್ಯ ನಮ್ಮ ಸಕಲ ಆಸೆ ಆಕಾಂಕ್ಷೆಗಳನು ಈಡೇರಿಸಿಕೊಳ್ಳಲು ಹಣ ಆಗತ್ಯ. ಹಣವನ್ನು ದುಡಿಯುವುದಕ್ಕಾಗಿ ಜೀವನ ಮಡುಪಿಟ್ಟರೆನಮ್ಮ ಅತ್ಯ ಅಮೂಲ್ಯ ಸಂತೋಷದ ಕ್ಷಣಗಳನ್ನು ನಾವು ಕಳೆದು ಕೊಳ್ಳಬೇಕಾಗುತ್ತದೆ. ನಾವು ಸಂಪಾದಿಸುವ ಹಣ  ಸರಿಯಾದ ಕಾಲದಲ್ಲಿ ನಮ್ಮ ಸಂತೋಷಕ್ಕೆ ವಿನಿಯೋಗವಾದರೆ ಎಷ್ಟು ಚೆಂದ ಅಲ್ಲವೆ. ಇಂದಿನ ಪೀಳಿಗೆಯ ಜನಗಳಾದ ನಾವು ಶ್ರಮಪಟ್ಟು ಹಣವನ್ನು ದುಡಿದು ಸಮಯವಿಲ್ಲದೆ ಚಿಂತೆಯಲಿ ಮುಳುಗಿ ನೋವಿನಿಂದ ಜೀವನವನ್ನು ಸಾಗಿಸುತ್ತಿದ್ದೇವೆ. ಈಗ ಒಬ್ಬ ಕೋಟ್ಯಧಿಪತಿಯ ಕಥೆ ಹೇಳಲು ಹೊರಟಿದ್ದೇನೆ ಈತನೆ ಕೆಂಟುಕಿ ಚಿಕನ್ ಫ್ರೈ ಮಾಲೀಕ ಕಲನೆಲ್ ಹೊರಲ್ಯಾಂಡ್ ಡೇವಿಡ್ ಸ್ಯಾಂಡರ್ಸ್ ಹುಟ್ಟಿದ್ದು ಸೆಪ್ಟೆಂಬರ್ 9-1890, ಇಂಡಿಯಾನ ಹೆನ್ರಿವಿಲ್ಲೆ ಅಮೇರಿಕಾ, ಇವರಿಗೆ ಇಬ್ಬರು ಹೆಂಡತಿಯರು ಮೂರು ಜನ ಮಕ್ಕಳು. ಸ್ಯಾಂಡರ್ಸ್ನ ಜೀವನ ಅಷ್ಟು ಸಮಾಧಾನಕರದ ಸ್ಥಿತಿಯಲ್ಲಿ ಇರಲಿಲ್ಲ. ತನ್ನ ಜೀವನ ಸಾಗಿಸಲು ಹಲವಾರು ಹುದ್ದೆಗಳನ್ನು ಮಾಡಿದ್ದಾನೆ, ಸ್ಟೀಮ್ ಇಂಜಿನ್ ಸ್ಟಾಕರ್, ಇನ್ಸೇಶುರೆನ್ಸ್ ಸೇಲ್ಸ್    ಮ್ಯಾನ್ ಮತ್ತು ಫಿಲ್ಲಿಂಗ್ ಸ್ಟೇಷನ್ ಆಪರೇಟರ     ಹೀಗೆ     ಸಾಲು    ಸಾಲು      ಉದ್ಯೋಗ ಮಾಡಿದ್ದರು ಯಾವುದು ಆತನಿಗೆ ನೇರವಾಗಲಿಲ್ಲ ಸ್ಯಾಂಡರ್ಸ್ 40 ವರ್ಷ ವಯಸ್ಸಿನಲ್ಲಿ ಉತ್ತರ ಕಾರೋಲಿನ ಕೆಂಟುಕಿ ನಗರದ ರಸ್ತೆ ಬದಿಯಲ್ಲಿ ಚಿಕನ್ ಫ್...