Posts

ಭರವಸೆಯ ಬೆಳಕು

Image
ಬದುಕು ಭರವಸೆಯ ಬೆಳಕು ಜೀವನ ಸುಖ ದುಃಖದ ಸರಕು ಬಾಳು ನೋವು ನಲಿವಿನ ಮೆಲುಕು ಆಸೆ ವಿಧಿ ಆಡಿಸೋ ತುಣುಕು ಪ್ರೀತಿ ಪ್ರೇಮದಿ ಮನಸ್ಸು ಖುಷಿ ಕಾಮ ಕ್ರೋದ ದಹಿಸಿದವ ಋಷಿ ಕನಸ್ಸು ಮನಕೆ ನೀಡುವ ಸಿಹಿ ಜೀವ ಮಸಣದಿ ಖಾಲಿ ಹಾಳೆ ಸಹಿ ಮನದ ಆಸೆಗೆ ಹಾಕಿದರೆ ಬೇಲಿ ನೋವ ಸಂತೆ ಹೃದಯದಿ ಖಾಲಿ ದೇವರು ಕೊಟ್ಟು ಪಡೆವ ಮಾಲಿ ಆಡಿಸಿದಂತೆ ಆಡುವ ನಾವೇ ಕೂಲಿ ಬೆಳುಕು ಕಂಡ ಮೇಲೆ ಇರುಳು ನೋವು ಉಂಡ ಮನಕೇ ನೆರಳು ಮನುಷ್ಯ ನೀ ಆಗುವೆ ಮರುಳು ಪ್ರೀತಿಲಿ ಮಿಡಿದಿದೆ ಹೆತ್ತ ಕರುಳು ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಓ ಹೃದಯ

Image
ಓ ಹೃದಯ ಓ ಹೃದಯ ನೆನಪುಗಳು ಏಕೊ ಕಾಡಿದೆ ಮನವೆಕೋ ಬಳಲಿ ಬೇಡಿದೆ ನನ್ನಾಸೆ ಕೊಳದಲ್ಲಿ ತೇಲಿದೆ ಕಣ್ಣಸನ್ನೆ ಕರೆದಂತೆ ನನ್ನ ಪ್ರತಿಬಿಂಬ ಮರೆಯಾಗೋ ಮುನ್ನ ಮಾತು ಮಾತು ಇತವಾಯ್ತು ಎರಡು ಮನಸು ಜೊತೆಯಾಯ್ತು ಜೋಡಿ ಹಕ್ಕಿ ಕುಣಿದಂತೆ ನಮ್ಮ ಪ್ರೀತಿ ನಗುವ ಈ ಸಂತೆ ಬಯಕೆಗಳು ಚಿಗುರಿ ಕನಸ್ಸುಗಳು ಕುಣಿದಂಗೆ ನಲಿದ್ಯತೆ ವಯಸ್ಸು ಆದಂತೆ ನನಸ್ಸು ಕುಣಿವ ಕಾಲುಗಳಲಿ ಗೆಜ್ಜೆಯ ನಾದ ನನ್ನೆದೆಯು ಕೇಳಿ ನುಡಿದಂತೆ ರಾಗ ಮಿಡಿವ ಪ್ರೀತಿಗೆ ಕಣ್ಣೀರ ಮಳೆ ನಾನು ನೀನು ಸೇರಿ ನಡೆವಾಗ ಬೆಳೆದಂತೆ ಬೆಳೆ ಮನದ ಆಸೆ ಏಕೊ ಮುಗಿಲು ನಕ್ಷತ್ರಗಳ ಊರಲಿ ಏಕೊ ದಿಗಿಲು ಚಂದ್ರನ ಬೆಳಕಲಿ ಕಾರ್ಮೋಡಗಳ ಬುಗಿಲು ನನ್ನವಳ ಒಲವು ನನಗಿಂತ ಮಿಗಿಲು  ********ರಚನೆ *********

ನೀ ನಡೆವ ಹಾದಿ

Image
ನೀ ನಡೆವ ಹಾದಿಯಲ್ಲಿ ಮುಳ್ಳು ಹೂವಾಯಿತು ನಿನ ಕಂಡ ನನ್ನ ಮನಕೆ ಪ್ರೀತಿ ಹುಟ್ಟಾಯಿತು ಕನಸು ಕಂಡ ಮನಸ್ಸು ನಿನ್ನ ಹೆಸರ ಕೂಗಿದೆ ಒಲವ ಬೀಸಿ ಮಳೆಗೆ ನೆನೆದು ಮನ ತಂಪಾಗಿದೆ ಹೃದಯದಿ ಸದ್ದು ನಿನ್ನ ನೋಡಿ ಬಾ ಎಂದಿದೆ ಆಕಾಶದಿ ಹಾರುವ ಬಯಕೆ ಮನದಿ ಮನೆ ಮಾಡಿದೆ ಮುಗಿಲ ಬಿಳಿ ಮೋಡದಿ ಈಜುವಸೆ ಏಕೊ ನನಗೆ ನೀಲಿ ಬಾನಲಿ ಕುಣಿವೆ ಆಸೆ ನನ್ನೀ ಸವಿ ಮನಕೆ ಆಕಾಶದ ಮೋಡದಿ ನಕ್ಷತ್ರ ಬಿತ್ತಿ ಕುಳಿತು ನಗುತಿದೆ ಮೋಡಗಳ ಮರೆಯಲಿ ಚಂದ್ರನ ಬೆಳಕು ಮಾಸಿದೆ  ಕುಣಿದು ಕುಣಿದು ಮನವು ತಣಿದು ಮಾತು ಮೌನವಾಗಿದೆ ನಿನ್ನ ಕಂಡ ನನ್ನ ಒಳಗೆ ಹಸಿರು ಆಸೆ ಮೊಳೆತಿದೆ *******ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ತೀರದ ಅಲೆ

Image
ನಾನು ನೀನು ತೀರದ ಅಲೆ ನಗುವೇಕೋ ಮಾತಿನ ಸೆಲೆ ಆಸೆ ಒಂದು ಬದುಕಿನ ಬಲೆ ಹುಡುಕಲಿ ಹೇಗೆ ನಾನು ನೆಲೆ ಹೃದಯದಿ ಬಡಿವ ಬಡಿತ ಏಕೊ ಏನೋ ನಿನ್ನ ಸೆಳೆತ ಮನದಲಿ ಪ್ರೀತಿ ಮೊರೆತ ನನ್ನಲಿ ಇಂದು ನವಿಲ ಕುಣಿತ ಕಾಣದ ದಾರಿ ನೀನೆ ತೋರಿ ಮರೆತರೆ ಎಗೆ ಒಲವಲಿ ಜಾರಿ ಕನಸು ಕರೆದಿದೆ ಪ್ರತಿ ಬಾರಿ ನೀನೆ ನನ್ನ ಪ್ರೀತಿಯ ನಾರಿ  ಹೊಸತನ ಹುಡುಕಿದೆ ಇಂದು ನೆನಪುಗಳು ಮೌನದ ಬಿಂದು ಆಸೆಗಳ ಬಾನಡಿ ನಾ ಕೊಂದು ಜಾರಿದೆ ಮನವು ನನ್ನವಳೆಂದು *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಓ ಗೆಳತಿ

Image
ಮನವ ತಣಿಸೆಯ ಗೆಳತಿ ಮನವ ತಣಿಸೆಯ ನನ್ನ ಕುಣಿಸೆಯ ಗೆಳತಿ ನಿನ್ನ ಒಲವಲಿ ನನ್ನ ಕುಣಿಸೆಯ ಗೆಳತಿ ನಿನ್ನ ನಗುವು ನನ್ನ ಕಾಡಿದೆ ಮನದ ಒಳಗೆ ಆಸೆ ಮೊಳೆತಿದೆ ಒಲವು ಚಿಗುರು ಬಿರಿದು ಬಂದಿದೆ ಗೆಳತಿ ತಂಗಾಳಿಯಲಿ ತಾಗುವ  ಉಸಿರು ನೀನಾದೆ ಗೆಳತಿ   ಸುಡುವ ಮನಕೆ ತಂಪೆರೆವಾ    ನೀರು ನೀನಾದೆ ಗೆಳತಿ  ಬೋರ್ಗರೆವಾ ಮನಕೆ   ಕಡಲ ತಡಿ ನೀನಾದೆ ಗೆಳತಿ ನಿನ್ನಯ ಸವಿ ಒಲವಲಿ  ತೆಲುವಾಸೆ ನನಗೆ ಗೆಳತಿ ನಿನ್ನಯ ಮನದ ಕಡಲಲಿ  ಈಜುವಾಸೆ ನನ್ನ ಒಡತಿ ಇಬ್ಬನಿ ಸೋಕಿದಾಗೆ ನಿನ್ನ  ಪ್ರೀತಿ ಬಿಸಿಲಿಗೆ ಕರಗಿದ ರೀತಿ ಮುಂಜಾನೆ ಮುಸುಕಲ್ಲಿ  ನೀ ಹಸಿರಾಗಿ ಅವಿತು ನಸುನಗುವ ನಿನ ಪ್ರೀತಿಯಂತೆ  ಕನಸಲಿ ಬೆರೆತು ಸೂರ್ಯನ ನಗುವಿಗೆ  ನನ್ನವಳು ಬೇವತು ಕವಳ ಮರೆಯಾದಂತೆ  ಕಣ್ಣೀರು ಕಲೆತು ನೀ ನನ್ನವಳಾದಂತೆ  ಮುನಿಸು ಮರೆತು ಗೆಳತಿ  **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಅನುರಾಗ

Image
ಮನಸಿನ ಅನುರಾಗ ನನ್ನೆದೆಯ ತಾಕಿರಲು ಹಸಿ ಕನಸ್ಸೊಂದು ಮನವನು ಕೂಗಿರಲು ಒಲವು ಸಿಹಿ ಜೇನು ಸವಿಯ ನೀಡಿರಲು ಕಾಣದ ಬೆಳಕೊಂದು ಮನೆಯ ಬೆಳಗಿರಲು ಕಣ್ಣ ನೀರು ಏಕೊ ಕಂಬನಿ ಮಿಡಿದಿರಲು  ಮಿಡಿದಿದೆ ಹೃದಯ ಒಲವ ಸವಿ ತಾಗಿ ಕಣ್ಣಂಚಲಿ ಹನಿಯೊಂದು ನೋವಲಿ ಕೂಗಿ ಹರಿವ ನದಿಯಂತೆ ಹುಕ್ಕಿ ಹರಿಯುತಿದೆ ಸೇರಲು ಬಯಸಿ ಸಮುದ್ರ ಬತ್ತಿದೆ ನೀರು ಬಾನಅಂಚಲಿ ಬದುಕು ಕೀಳುತಿದೆ ಸೂರು ಬಿಡಿಸಿ ದೇವರಿಗೆ ತಿಳಿಸುವರು ಯಾರು ಯಾರದೋ ಗಾಳಕೆ ಮೀನು ಸಿಲುಕಿತು ನೋವಿನ ಬಲೆಯಲಿ ಕುಣಿದು ನಲಿಯಿತು ಜೀವವ ತೆತ್ತು ಹೊಟ್ಟೆ ತುಂಬಿಸಿ ಆಸರೆಯಾಯಿತು ಯಾರಿಗೆ ಹೇಳಬೇಕು ಮೀನು ನೋವಿನ ಕಥೆಯ ಕಾಣದ ಜೀವದ ಬಾವನೆ ಬರಡು ಕುಣಿವ ಮನಕೆ ನೋವಿನ ನೆರಳು ಕಣ್ಣಿರಲಿ ಮುಳುಗಿದೆ ಹೆತ್ತ ಕರುಳು ಕಳೆದ ನೋವಲಿ ಸರಿದ ರಾತ್ರಿ ಇರುಳು ಮುನಿಸು ನನ್ನೆದೆಯ ಒಲವ ಸವಿ ತೀರಿಳು  *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಮನ ಕುಣಿದು

Image
ಕನಸ್ಸುಗಳು ಮನದಿ ಕುಣಿದು ಒಲವಲ್ಲಿ ನನ್ನ ಬಳಿ ಕರೆದು ನೂರಸೆ ಮಿಡಿವ ಹೃದಯ ಮನತುಂಬಿದ ಮನಸ್ಸು ನಲಿದು ನನ್ನಾಸೆಯ ಬದುಕು ಕೇಳಿತು ಮನದಾಸ್ಸೇಗೆ ಕನಸ್ಸು ಕೆರಳಿತು ಕುಣಿದು ಅರಿವ ಬಯಕೆ ಮೂಡಿತು ಸ್ನೇಹದ ಬೆಳಕು ಮತ್ತೆ ಕರೆಯಿತು ಕಣ್ಣಾ ಅಂಚಲಿ ಕುಣಿಸಿದೆ ನನ್ನ ಉಸಿರು ಹೆಸರಾಗಿ ಸೇರುವ ಮುನ್ನ ಕಾಣದ ಆಸೆ ಕಾಡಿದೆ ಇನ್ನ ಏನು ಏಳಲಿ ಪ್ರೀತಿಯೇ ನಿನ್ನ ಯಾಕೆ ನನ್ನ ಕಾಡುತಿದೆ ಒಲವು ಕಾದ ಮನಸ್ಸು ಕಂಡ ನಲಿವು ಪ್ರೀತಿ ಸೊಗಡು ನನ್ನ ತುಂಬಿ ಸೇರಲು ಸ್ವರ್ಗ ಒಲವನು ನಂಬಿ ********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್