Posts

ಕೊರೊನ

Image
  ಯಾರು ಎತ್ತರು ನಿನ್ನ ಕಾಡುತಿರುವೆ ಇನ್ನ ದೇಹ ಹೋಕ್ಕು ಮಾಡುತ್ತಿರುವೆ ನರ್ತನ ಯುವರ್ ನೋಟೋರಿಯಸ್ ಕೊರೊನ ವಯಸ್ಸ ಎಲ್ಲೇ ಮೀರಿ ನಡಿದಿದೆ ನಿನ್ನ ನಗಾರಿ ಜೀವದ ಮೇಲೆ ಸವಾರಿ ರುದ್ರ ನರ್ತನ ತೋರಿ ನೀನು ಅದೇ ಮಾರಿ  ಯುವರ್ ನೊಟೋರಿಯಸ್ ಕೊರೊನ  ಸಾವು ನೋವು ಸೂರೆ ಮಾಡಿ ಹೆಣದ ದೇಹ ಹೋತ್ತು ಒಯ್ಯುವಾರಿಲ್ಲ ಮನುಷ್ಯನ ಜೀವಕೆ ಬೆಲೆಯೇ ಇಲ್ಲ ಕಷ್ಟವೆಕೋ ಕಾಡಿದೆಯೇಲ್ಲಾ ಯುವರ್ ನೊಟೋರಿಯಸ್ ಕೊರೊನ ಪ್ರೀತಿ ಮನವ ಕಿತ್ತು ಹೋದೆ ಬೆಂಕಿಯಲ್ಲಿ ಸುಟ್ಟು ಹೋದೆ ಮಣ್ಣಿನಲ್ಲಿ ಅವಿತು ಹೋದೆ ಗಾಳಿಯಲ್ಲಿ ತೇಲಿ ಹೋದೆ ಐ ಹೇಟ್ ಯು ಕೊರೊನ  ಕಟ್ಟಿದ ಬದುಕು ಚೂರಾಯ್ತು ಮನಸ್ಸು ಏಕೋ ಮಸಣವಾಯ್ತು ವೈದ್ಯರೆ ನಿಜ ದೇವರಾಯ್ತು ಜೀವನವೇ ಬೇಸರವಾಯ್ತು ಯು ಕಿಲ್ಲಡ್ ಲೈಫ್ ಕೊರೊನ..,..... ಕೊರೊನ ******ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಕನ್ನಡಿ

Image
ನಿನ್ನ ರೂಪ ನನ್ನಲ್ಲಿ ಸೆರೆಯಾಯ್ತು ನನ್ನ ಕಣ್ಣಲಿ ಕೆನ್ನೆಯೇಕೋ ಕೆಂಪು ಮುತ್ತು ಇಟ್ಟರೆ ತಂಪು ನೋಡಲು ನಿನ್ನ ಅಂದ ಕಣ್ಣಸಾಲದು ಪ್ರೀತಿ ಬಂದ ನೋಡುತ ನಿನ್ನನೇ ಮರೆತೇ ನಾ ನನ್ನನ್ನೇ ನೋಡಬೇಕು ನೀನು ನನ್ನ ಕ್ಷಣ ಮರೆತು ಹಾಗೆ ನಿನ್ನ ಮಧುರ ಮಾತು ಎಷ್ಟು ಚೆನ್ನಾ  ನೀನು ನಿನಗೆ ಅಪ್ಪಟ ಚಿನ್ನ  ಮುಚ್ಚು ಮರೆಯಿಲ್ಲ ನನಗೆ ನಾನೆ ಬೇಕು ನಿನಗೆ ಮಧುರ ಕ್ಷಣದ ಬೆಸುಗೆ ನೀನೇ ಒಲವು ಕೊನೆಗೆ  ಬೆತ್ತಲೆಯಾಗೋ ದೇಹ ಉಸಿರ ಏರಿಳಿತಾದ ಮೋಹ  ಯಾಕೋ ಕನಸಿನ ದಾಹ ಮತ್ತೆ ನೋಡಬೇಕು ನಿನ್ನನೇ ಎದರುಬಂದು ನಿಲ್ಲು ಸುಮ್ಮನ್ನೆ ನನ್ನ ನಾ ಪ್ರೀತಿ ಮಾಡಿ ಮನಸ್ಸು ಎತ್ತಿನ ಗಾಡಿ ಪ್ರತಿ ಬಿಂಬ ನನ್ನನೇ ಬೇಡಿ ಮಾಡಿದೆ ಏಕೋ ಮೊಡಿ ನಿನ್ನ ಪೀತಿಸುವ ನನ್ನಯ ಹೆಸರೇ ಕನ್ನಡಿ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಒಲವಿನ ಗಿಣಿ

Image
  ನನ್ನ ಬದುಕು ಬರಿದಾಯ್ತು ನಿನ್ನ ನಗುವಿಗೆ ಮನಸು ಸೋತೋಯ್ತು ನಿನ್ನ ಕನಸಿಗೆ  ಪ್ರೀತಿ ಪಂಜರದಿ ನಾನು ಬಂದಿ ಗಿಣಿ  ನೀನೇ ನನ್ನ ಹೃದಯದ ಯುವರಾಣಿ  ರೆಕ್ಕೆ ಬಿಚ್ಚಿ ಹೇಗೆ ಹಾರಲಿ ನಿನ್ನ ಒಲವ ದೋಚಿ ಬಿಡಿಸು ನನ್ನ ಪಂಜರದಿ ನಿನ್ನ ಒಲವ ಚಾಚಿ  ನಿಂತಲ್ಲೇ ಸೆಳೆವ ನಿನ್ನ ಚೆಲುವು ಸುಮ್ಮನೆ ನನ್ನ ಕಾಡಿದೆ  ಸೆರೆ ಹಿಡಿಯುವ ಬಯಕೆ ಮನದಲ್ಲಿ ಮನೆ ಮಾಡಿದೆ  ಬಾರೆ ಬಳಿ ಚೆಲುವೆ ನನ್ನ ಪ್ರೀತಿ ನಗುವೇ ಮನದಾಸೆಗೆ ಏಕೋ ಬರವೇ ನೋಡಿ ನಿನ್ನ ಮಿಡಿದಿದೆ ನೂರೆಂಟು ಬಯಕೆ ನಿನ್ನ ಹೊತ್ತು ಜಿಗಿಯುವ ಅಸೆ ನಭಕೆ  ಜೀವನದಿ ಸಕಿಯಾಗು ನನ ಬಾಳ ಬೆಳಕಾಗು ಮನ ತುಂಬಿ ಬಂದ ಕನಸಿಗೆ ಜೊತೆಯಾಗು ಜೀವನದಿ ಮುದ್ದು ಗಿಣಿಯಾಗು  ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ನನ್ನವಳು

Image
ಬೆಳದಿಂಗಳ ಬೆಳಕಿನಲಿ ಚೆಲುವೊಂದ ಕಂಡೆ ನಸುನಗುವ ಮುದ್ದಾದ ನಕ್ಷತ್ರದ ಗೂಡಲ್ಲಿ ಹೊಳೆಯುವ ಚಂದ್ರನ ಕಂಡೆ ಬಿಳಿ ಹಾಲನಂತೆ ಮೋಡದ ಮರೆಯಲಿ ಚಲಿಸುವ ಚಂದ್ರನ ಬಿಂಬದಿ ನನ್ನಯ ಹುಡುಗಿಯ ಚೆಲುವ ಕಂಡೆ ಮರೆಯೋಗೋ ಮುನ್ನ ಸೆರೆ ಹಿಡಿದು ಬೆಳಕು ಕೊನೆಯಾಗೋ ಒಲವ ಪಡೆದು  ನಕ್ಷತ್ರದ ಊರಲ್ಲಿ ಅವಳ ತೇರು ಸೀರಿಯಲ್ ಸೆಟ್ ಬೆಳಕಲಿ ನನ್ನವಳ ಮುದ್ದು ನಗುವು ಜೋರು ಬಾಳುಕಾಡೊ ಬಳ್ಳಿ ನನ್ನವಳು ನುಲಿಯುತಿರುವ  ಅವಳ ನೋಡಿರಲು  ಕಣ್ಣ ಹೊಡೆದು ಉಲ್ಕೆ ಬಿದ್ದಂತೆ ಹುಣ್ಣಿಮೆಯ ಚಂದ್ರ ನಾಚಿ ನಕ್ಕಂತೆ ಮರೆಯಾದ ಬದುಕಿಗೆ ಬೆಳಕು ತಂದವಳು ಬೆರಗಾಗೋ ಚೆಂದದ ಸೊಬಗು ನನ್ನವಳು ಹುಣಿಮ್ಮೆಯ ಬೆಳದಿಂಗಳು  ****-*ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ನಗುವ ಬಾಲ್ಯ

Image
  ನಾನು ಸೇರಿದ ಶಿಶು ವಿಹಾರ ಆಟದ ನವಿರ ಬುದ್ದಿ ಕೇಂದ್ರ ಅಡಿದೆ ಆಟ ಅಂಗನವಾಡಿಲಿ ಕುದೆರೆ ಹೇರಿ ಕುಣಿದು  ಟೀಚರಮ್ಮಾ  ಹೇಳಿ ಕೊಟ್ರು ಅ, ಆ. ಈ ಇ.......... 1,2,3,4 ಹನ್ನೆರಡು ಆದ್ರೆ ಊಟ ಅಜ್ಜಿ ಕೊಟ್ಟ ಸಿಹಿ ಪಾಯಿಸ.. ಸವಿದು ಸವಿದು ತಿಂದು ಹಿಟ್ಟಿನುಂಡೆ ಕರೆಯಿತು ಕೈ ಬಿಸಿ  ಹೊರೆಟೆವು ನಾವು ಮನೆಗೆ..... ಕಾಲ ಕಳೆದು..... ದಿನಗಳದ ಮೇಲೆ ಅಪ್ಪ ಸೇರಿಸಿದರು ಶಾಲೆಗೆ ಕಿವಿಯ ಮುಟ್ಟಿ ನೋಡಿ ನನ್ನ ವಯಸ್ಸು ತಿಳಿದು ಕೂರಲು ಹೇಳಿದರು ಒಂದನೇ ತರಗತಿಗೆ ಶುರುವಾಯ್ತು ಶಿಕ್ಷಣ ಹೇಳಿ ಕೊಟ್ರು ಕನ್ನಡ ಮೇಸ್ಟ್ರು ಕವನ ಧರಣಿ ಮಂಡಲ ಮಧ್ಯದೊಳಗೆ ಕಲಿತು ಕುಣಿದು ನಾವೂ ಹಾರಿಸಿದೆವು ಗಾಳಿಪಟ, ಕುಂಟೆ ಪಿಲ್ಲೆ ಹಾಡಿ ಅಡಿಗೆ ಗುಡಿಗೆ ಆಟವಾಡಿ  ಮನೆಗೆ ಬಂದು ಪಾಠ ಓದಿ ಅವ್ವ ಸುಟ್ಟ ಬೆಣ್ಣೆ ರೊಟ್ಟಿ ಕೆಂಪು ಚಟ್ನಿ ಎಷ್ಟು ರುಚಿಯು ಆದಿನ  ಎಲ್ಲಿ ಹೋಯ್ತು ಆದಿನ ಬೂಸ್ಟ್ ಕುಡಿದು ಅ ಕ್ಷಣ ಕಾಲ ಕಳೆದು ನೆನೆಪ ಸವಿದು ಶುರುವಾದ ಶಿಕ್ಷಣ *******ರಚನೆ ******** ಡಾ. ಚಂದ್ರಶೇಖರ್. ಸಿ. ಹೆಚ್

ಮನಸ್ಸೆಲ್ಲ ಚೂರಾಗಿದೆ

Image
  ಮನಸೆಲ್ಲ ನೋವೆಲ್ಲಾ                       ಯಾಕಾಗಿದೆ ಒಲವೇಕೋ ಬರುತ್ತಿಲ್ಲ                        ಏನಾಗಿದೆ ನೋವಿಂದಲೇ ಕಥೆಯೊಂದು.... ಶುರುವಾಗಿದೆ ಕಂಡ ಕನಸುಗಳ ಸಾವಗಿದೆ,,ಮನಸೆಲ್ಲ ಚೂರಾಗಿದೆ, ಕಂಡ ಕನಸುಗಳ ಸಾವಗಿದೆ,  ಮನಸೆಲ್ಲ ಚೂರಾಗಿದೆ ಪ್ರೀತಿ ಬೆಸುಗೆಯೂ ಹೃದಯ ಕಡಿದಿದೆ......... ಏಕೇನೋ ರಕ್ತ ಸುರಿದಿದೆ ಮನಸ್ಸು ಮುರಿದಿದೆ  ದೂರವಾಗಲೂ ...... ಬೇಕೇನೋ ನೂರು ಮಾತುಗಳ ಮುರಿದು ಎಲ್ಲೇ ದಾಟಿದೆ... ಒಲವೇಕೋ ನೋವಿಂದಲೇ ಕಥೆಯೊಂದು ಶುರುವಾಗಿದೆ ಕಂಡ ಕನಸುಗಳ ಸಾವಗಿದೆ,,ಮನಸೆಲ್ಲ ಚೂರಾಗಿದೆ, ಕಂಡ ಕನಸುಗಳ ಸಾವಗಿದೆ, ಮನಸೆಲ್ಲ ಚೂರಾಗಿದೆ ನಾಲ್ಕು ಋತುಗಳು ಸೋತು ನಿಂತಿವೆ ಒಲವ ಸೇರಿಸಲು....... ಮುಂದೇನೋ 💐 ತುಳಿದ ಸಪ್ತಾಪದಿ ಗಟ್ಟಿಮೇಳುವು ಮೂರು ಗಂಟು ಕೀಳುತಿದೆ...,.... ಯಾಕೇನೋ ಒಲವ ಜಾತ್ರೆಗೆ ಬಂದ ದೇವರು ಸುಮ್ಮನಾಗಿಹನು......... ಇನ್ನೇನೋ ನೋವಿಂದಲೇ ಕಥೆಯೊಂದು ಶುರುವಾಗಿದ ಕಂಡ ಕನಸುಗಳ ಸಾವಗಿದೆ,,ಮನಸೆಲ್ಲ ಚೂರಾಗಿದೆ, ಕಂಡ ಕನಸುಗಳ ಸಾವಗಿದೆ,  ಮನಸೆಲ್ಲ ಚೂರಾಗಿದೆ ಮನಸೆಲ್ಲ ನೋವೆಲ್ಲಾ                       ಯಾಕಾಗಿದೆ ಒಲವೇಕೋ ಬರುತ್ತಿಲ್ಲ     ...

ನೋವಾಗಿದೆ ಮನಸ್ಸೊಳಗೆ

Image
ತನ ನನ್ನ ನ್ನನರೇ.... ತನ ನನ್ನ ನ್ನನರೇ..... ತನ ನನ್ನ ನ್ನನರೇ...ತನ ನನ್ನ ನ್ನನರೇ ನೋವಾಗಿದೆ ಮನಸ್ಸೊಳಗೆ ......... ದುಮ್ಮಿಕ್ಕಿದೆ (ಕಣ್ಣೀರ್ ಒಳಗೊಳಗೇ )  ನೀ ಆಡೋ ತುಂಟಾಟವೆಲ್ಲಾ  ನನ್ನ ನೆನಪಿಗೆ ಬಂದ ಹಾಗೆ  ನೀ ಹೊಡಿ ಹೋಗುವಾಗ  ನನ್ನ ಎದೆ ಬಡಿತ ನಿಂತ ಹಾಗೆ  ನಿನಿಯಂಥ  ಮೋಸಗಾತಿಯೇ..... ಹೇ  ನೋವಾಗಿದೆ ಮನಸ್ಸೊಳಗೆ  ದುಮ್ಮಿಕ್ಕಿದೆ (ಕಣ್ಣೀರ್ ಒಳಗೊಳಗೇ )  ಹಾ... ಹಾ.... ಹಾ...... ಹಾ. ಹಾ  ಈಗ ಈಗ ಏಕೋ ಏನೋ  ನನ್ನನ್ನು ನೀ ಕೊಂಧ ಹಾಗೆ  ದೇವದಾಸ ಹಾಗೂದೆ ನಾನು...... ನಶೆಯಲ್ಲಿ ತೆಲೋದೆ     ನೀ ನಗುವಾಗ...  ನೀ ಬಂದು ಕರೆದಾಗ  ಕಳೆದೋದೆ ನನಹಾಗ್  ನೀ ಕಣ್ಣ ಒಡೆದಾಗ   ..... ಹಾ..... ಹಾ..... ಮರೆತೋದೆ ನನ್ನಹಾಗ  ನೋವಾಗಿದೆ ಮನಸ್ಸೊಳಗೆ   ದುಮ್ಮಿಕ್ಕಿದೆ (ಕಣ್ಣೀರ್ ಒಳಗೊಳಗೇ ನೀ ಆಡೋ ತುಂಟಾಟವೆಲ್ಲಾ  ನನ್ನ ನೆನಪಿಗೆ ಬಂದ ಹಾಗೆ  ನೀ ಹೊಡಿ ಹೋಗುವಾಗ  ನನ್ನ ಎದೆ ಬಡಿತ ನಿಂತ ಹಾಗೆ  ನಿನಿಯಂಥ  ಮೋಸಗಾತಿಯೇ..... ಹೇ  ನೋವಾಗಿದೆ ಮನಸ್ಸೊಳಗೆ  ದುಮ್ಮಿಕ್ಕಿದೆ (ಕಣ್ಣೀರ್ ಒಳಗೊಳಗೇ ) ತನ ನನ್ನ ನ್ನನರೇ.... ತನ ನನ್ನ ನ್ನನರೇ..... ತನ ನನ್ನ ನ್ನನರೇ...ತನ ನನ್ನ ನ್ನನರೇ... ಹೇ...... ಹೇ......