Posts

♦️♣️ಸಮನ್ವಯ ಬಣ್ಣ♣️♦️

  ನಿನ್ನಯ ಚೆಲುವು                        ಒಲವಿನ ಬಣ್ಣ  ನಿನ್ನಯ ನಡಿಗೆ                       ನವಿಲಿನ ಬಣ್ಣ  ನಿನ್ನಯ ನುಡಿಯು                       ಪ್ರೀತಿಯ ಬಣ್ಣ  ನಿನ್ನಯ ಸ್ನೇಹ                       ಆಕಾಶದ ಬಣ್ಣ  ನಿನ್ನಯ ನಗುವು                        ಮಿಂಚಿನ ಬಣ್ಣ  ನಿನ್ನಯ ಹಾಡು                        ಕೋಗಿಲೆ ಬಣ್ಣ  ಈ ನಿನ್ನ ಸಮನ್ವಯ ಬಣ್ಣಕೆ ನಾ ಸೋತೆನಣ್ಣ  ********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್ 

💃❤ನಾ ಸೋತೆ 💃❤

  ನಿನಗಾಗಿ ನಾ ಸೋತೆ  ಪ್ರೀತಿಯಲಿ ಮೈಮರೆತೆ  ಸೆರೆಯಾದೆ ನೋಟದ  ಆ ನಿನ್ನ ಕಣ್ಣ ಸನ್ನೆಗೆ  ಹೃದಯದ ಅಂಗಳದಿ  ಬಿಂದಿಗೆಯ ನೀ ತಂದೆ  ತುಂಬಿರಲು ಒಲವಿನ ಬಿಂದಿಗೆ  ನಸು ನಕ್ಕು ನೀ ನಡೆದೇ  ನನ ಮನವನು ನೀ ಸೆಳೆದೆ  ನಿನ್ನ ನೋಡಿದ ನನಗೆ  ಒಲವಾಯಿತು ಹಾಗೆ  ನಿನ ಮೇಲೆ ಕನಸಿಯಿತು  ಪಿಸು ಮಾತು ಬಳಿ ಬಂತು  ನಿನ್ನನು ಕೂಗಿ  ಎದೆ ಬಡಿತ ಹೆಚ್ಚಾಯಿತು  ಕೇಳಿಸದೇ ನಿನಗೆ  ವಯಸ್ಸಿನ ಬೇಗೆ  ತಣಿಸುವೆಯ ನನ್ನ  ಪ್ರೀತಿಯ ಬಯಕೆ  ಸೋತಿರುವೆ ನಾನು  ನಿನ್ನಯ ಚೆಲುವಿಗೆ  ಚಂದಾದಾರ ನಾನೆ  ನಿನ್ನ ಪ್ರೀತಿಗೆ  ಓ ನನ್ನ ರೂಪಸಿ ಬಳಿ ಬಂದೆ ನಿನ್ನ ಅರಸಿ  ಹೇಳುವೆಯ ಕನಸ  ಮಾಡುವೆನು ನನಸಾ  ಕೈ ಇಡಿದು ನಡೆಯುವೆ  ಕೊನೆವರೆಗೂ ಜೊತೆಗಿರುವೆ  ಬಾಳಿನ ಪಯಣದಿ  ನಡೆ ನೀನು ಮುಂದೆ  ಬರುವೆನು ಇಂದೆ  ಸಾಗುತಾ ಹೇಳುವ ನಾವಿಬ್ಬರೂ ಒಂದೇ  ನಿನಗಾಗಿ ನಾ ಸೋತೆ ಪ್ರೀತಿಯಲಿ ಮೈಮರೆತೆ  ******ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

🙏🙏ಸಣ್ಣ ಕವನಗಳು -9🙏🙏

    🌼🌼    ಕನಸು 🌼🌼 ಅರಿಯಲಾರೆ ನೀನು ನನ್ನ ಮನಸ್ಸು  ಕಾಣುವೆಯೇನು ದಿನ ಕನಸು  ಮುಸ್ಸಂಜೆಯ ಬಾನು ಬಲು ಸೊಗಸು  ನನಗೆ ನಿನ್ನನು ನೋಡಿ ಆಯಿತು  ಮನಸ್ಸು  ಪ್ರೀತಿಸುವೆಯೇನು ನೀ ನನ್ನನು ತಿಳಿಸು  🌻🌻 ಮರೆಯಲಾರೆ 🌻🌻 ಕಣ್ಣನು ನೋಡಿ                     ನೀ ಕಾಡಲಾರೆ  ತಲೆಯನು ನೋಡಿ                      ನೀ ತಿಳಿಯಲಾರೆ  ಮನವನು ನೋಡಿ                        ನೀ ಮರೆಯಲಾರೆ  ಹೃದಯವ ನೋಡಿ                         ನೀ ಅರಿಯಲಾರೆ  ನನ್ನನು ಕಂಡು                          ನೀ ಮರುಗಲಾರೆ  ******ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

🌷🥀ಓ ನನ್ನಯ ಒಲವೇ🌷🥀

ಪ್ರೀತಿಯ ಹೆಸರಲಿ  ನೀ ಬಳಿ ಬಂದೆ  ನನ್ನಲಿ ನೀನು  ನೂರಾಸೆಯ ತಂದೆ  ನೀ ನನ್ನವಳೆಂದು  ಜೀವ ನಂಬಿತು  ನೀ ಮಾಡಿದ ಸಂಚಿಗೆ  ಮನಸ್ಸು ನೊಂದಿತು  ಓ ಮೋಸಗಾತಿಯೇ ನೀನೇಕೆ ಓಡುವೇ ಸನಿಹಕೆ ಬಂದು ಮತ್ತೆ ಕಾಡುವೆ  ಜೊತೆಯಲ್ಲಿ ಕಳೆದ ನಿನ್ನಯ  ನೆನಪು ನನ್ನ ಕಾಡಿದೆ  ನಿನ್ನ ಒಲವಿಗಾಗಿ  ಹೃದಯ ಬೇಡಿದೆ  ಯಾಕಿ ಮೌನ ಮಾತಾಡು  ನನ್ನ ಒಲವೇ  ನೀ ಜೊತೆಗಿದ್ದರೆ  ನನ ಪ್ರೀತಿ ನಿನದಲ್ಲವೇ  ಓ ಮೋಸಗಾತಿಯೇ ನೀನೇಕೆ ಓಡುವೇ  ಸನಿಹಕೆ ಬಂದು ಮತ್ತೆ ಕಾಡುವೆ  ಮೋಹಕ ಮಾತಿಗೆ  ಮನಸ್ಸು ಕರಗಿತು  ಈ ಪ್ರೀತಿಯು ಸುಳ್ಳೆಂದು  ಅರಿಯದೆ ಹೋಯಿತು  ನಿನ್ನಯ ಚೆಲುವು  ನನ್ನ ಕಾಡಿದೆ  ಪ್ರೀತಿಯ ಒಲವಿಗೆ  ಮತ್ತೆ ಬೇಡಿದೆ ನೀನಾಗಾಗಿ ಹೃದಯದಿ  ಮನೆಯ ಮಾಡಿದೆ  ನಿನ ಕಣ್ಣಾಮುಚ್ಚಾಲೆ  ಆಟಕೆ ಹೃದಯ ಹೊಡೆದಿದೆ  ಓ ಮೋಸಗಾತಿಯೇ ನೀನೇಕೆ ಓಡುವೇ ಸನಿಹಕೆ ಬಂದು ಮತ್ತೆ ಕಾಡುವೆ  *******ರಚನೆ***** ಡಾ. ಚಂದ್ರಶೇಖರ. ಸಿ. ಹೆಚ್

🙏🙏ಸಣ್ಣ ಕವನಗಳು -8🙏🙏

❤ ಪ್ರೀತಿಯ ಕಥೆ ❤ ಬರೆಯಲೇ ನಾನು                       ಒಲವಿನ ಕಥೆಯ  ಹೇಳುವೆಯೇನು ನಿನ್ನ                    ಪ್ರೀತಿಯ ವ್ಯಥೆಯ  ಓದಲೇ ನಾನು                    ಮರೆಯದ ಪುಟವ  ನೀ ನನಗಾಗಿ ಬಂದ                     ದೇವರ ಕೃಪೆಯ  ಇದುವೇ ನಿನ್ನ ಈ                     ಪ್ರೀತಿಯ ಹೃದಯ 😂 ಹೃದಯದ ನಡುಕ 😪 ಪ್ರೇಮದ ಅಲೆಯಲಿ                     ಹೃದಯದ ನಡುಕ  ಪ್ರಣಯದ ಸೆಲೆಯಲಿ                     ಮೈಯಲಿ ಪುಳಕ  ಕಡಲಿನ ತಡಿಯಲಿ            ಭೋರ್ಗರೆಯುವ ಜಳಕ  ಈ ನಿನ್ನಯ ಪ್ರೀತಿಯ ನೋಡಿ                      ನಾನಾದೆ ಭಾವುಕ 🚣‍♀️ ದೋಣಿಯ ಕಥೆ 🚣🏻‍♂️  ಇದುವೇ ನಿನ್ನ ಮಿಂಚಿ...

🌙☀️ಸೂರ್ಯ -ಚಂದ್ರ ☀️🌙

  ಬದುಕನ್ನು ಬೆಳಗಲು                     ಸೂರ್ಯ ಬಂದ  ಕತ್ತಲೆ ಕಳೆಯಲು                     ಚಂದ್ರನು ಬೆಳಕು ತಂದ  ಮನದಿ ಮೂಡಿದೆ                          ಒಂದು ಕಥೆಯು  ಬದುಕಲು ಕಲಿಸಿದ                           ಒಂದು ವ್ಯಥೆಯು  ಪ್ರೀತಿಯ ಸಾರ                     ಹೇಳಲು ಹೊರಟೆ  ಮುದುಡಿದ ಮನಸ್ಸಿಗೆ                              ನೀರನ್ನು ಕೊಟ್ಟೆ  ಬಾಳಿನ ಪಯಣದಿ                          ನೋವು ನಲಿವು   ಸಾಗುವ ಸವೆಸಿ                    ನೆನಪಿನ ಒಲವು  ಬದುಕಿನ ಪಯಣದಿ             ...

🙏🙏ಸಣ್ಣ ಕವನಗಳು -7🙏🙏

👩‍❤️‍👨 ಓಲವಿನ ನೆನಪು 👩‍❤️‍👨 ಮರೆತೆಯಾ ನೀನು  ಓಲವಿನ ನೆನಪ   ಅರಿಯದೆ ಬರೆದ  ಪ್ರೀತಿಯ ಒಳಪ  ನಿನ್ನಯ ನಗುವು   ತುಂಬಿತು ಹುರುಪು  ತಿಳಿಯದೆ ಬಂತು   ನಿನ್ನಯ ನೆನಪು  ನನ್ನಯ ಮನಕೆ   ನೀಡಿತು ತಂಪು  👬👭 ಗೆಳೆತನ 👭👬 ಬಾನೊಂದು ಸೂರು  ನಿನ ಅದರ ತೇರು  ಜೊತೆಯಾಗಿ ಸೇರು  ಶ್ರಮಿಸೋಣ ದೂರ  ಗೆಳೆತನವು ಜೋರು    🎗️🏵️    ಉಡುಗೊರೆ 🏵️🎗️ ನೀ ನನ್ನನು ನೋಡಲು   ಓಲವಿನ ಉಡುಗೊರೆ  ನೀ ನನ್ನನು ಕಾಡಲು  ಪ್ರೀತಿಯ ಮಳೆ ದರೆ  ನೀ ನನ್ನನು ಸೇರಲು   ತುಂಬಿತು ಜೀವನದ ಹೊಸಕೆರೆ  ******ರಚನೆ ***** ಡಾ. ಚಂದ್ರಶೇಖರ. ಸಿ. ಹೆಚ್