Posts

Showing posts from June, 2025

ಸಂತೋಷವಾಗಿರಲು ಪ್ರಯತ್ನಿಸೋಣ

Image
ಸಂತೋಷ ಎಂದರೇನು??? ನಾವು ಗೆಳೆಯರು , ಮನೆಯವರು ಮತ್ತು ಸಂಬಂಧಿಕರ ಬಳಿ ಯೋಗ ಕ್ಷೇಮವನ್ನು ವಿಚಾರಿಸುತ್ತೇವೆ ಅವರು ನಾವು ಎಲ್ಲರೂ ಸಂತೋಷದಿಂದಿದ್ದೇವೆ ಅಥವಾ ಸಮಸ್ಯೆ ಇದ್ದಲ್ಲಿ ನಾವು ದುಃಖದಿಂದ ಇದ್ದೇವೆ ಎಂದು ಹೇಳಬಹುದು. ಹಾಗಿದ್ದರೆ ಸಂತೋಷ ಎಂದರೆ ನಮ್ಮ ಮನಸ್ಸು ಉಲ್ಲಾಸದಿಂದ ಉತ್ಸಾಹದಿಂದ ದೇಹವು ಯಾವುದೇ ಅನಾರೋಗ್ಯವಿಲ್ಲದೆ ಶಕ್ತಿಯುತವಾಗಿ ಕೂಡಿರುವುದು ಎಂದು ತಿಳಿಯಬಹುದು ಮತ್ತು ನಾವು ಅಂದುಕೊಂಡ ಎಲ್ಲಾ ಕೆಲಸಗಳು ಕೈಗೂಡಿ ಎಲ್ಲವೂ ಗೆಲುವಿನಿಂದ ಕೂಡಿದ್ದರೆ ಅದನ್ನು ಸಂತೋಷ ಅನ್ನಬಹುದು. ಅದೇ ದುಃಖ ಎಂದರೆ ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ರೋಗರುಜಿನಗಳಿಂದ  ಬಳಲುತ್ತಿರುವುದು ಎಂದು ತಿಳಿಯಬಹುದು ಮತ್ತು ನಾವು ಮಾಡುವ ಕೆಲಸಗಳಲ್ಲಿ ಸರಿಯಾದ ರೀತಿ ಗೆಲುವು ಸಿಗದಿದ್ದಲ್ಲಿ ನಮ್ಮ ಮಾನಸಿಕ ಭಾವನೆಗಳು ಸಿಟ್ಟು, ಕೋಪ, ನಿರುತ್ಸಾಹ ಮತ್ತು ದುಃಖದಿಂದ ಕೂಡಿರುವುದು ಎಂದು ತಿಳಿಯಬಹುದು. ಇದೇ ರೀತಿ ನಮ್ಮ ದೈನಂದಿನ ಸಂತೋಷಗಳು ನಮ್ಮ ಭಾವನೆಗಳ ಮೇಲೆ ನಿಂತಿರುತ್ತವೆ. ನಮ್ಮ ಭಾವನೆಗಳು ಎರಡು ವಿಧದಲ್ಲಿ ನಾವು ತಿಳಿಯಬಹುದು.  1. ಸಕಾರಾತ್ಮಕ ಅಥವಾ ಧನಾತ್ಮಕ ಭಾವನೆಗಳು.  2. ನಕಾರಾತ್ಮಕ ಭಾವನೆಗಳು.  ಈ ಭಾವನೆಗಳು ಮನುಷ್ಯನಲ್ಲಿ ಬಂದಾಗ ಮನುಷ್ಯನ ಮನಸ್ಸು ತನ್ನಷ್ಟಕ್ಕೆ ತಕ್ಕಂತೆ ಮಾತನಾಡಲು ಶುರುಮಾಡುತ್ತದೆ. ಅಂದರೆ ಮನಸ್ಸು ಚಂಚಲವಾಗುತ್ತದೆ ಹಾಗೂ ಭಾವನೆಗಳು ನಮ್ಮ ಮೆದುಳಿನ ಮೇಲೆ ಮತ್ತು ದೇಹದ ಮೇಲೆ ಪರಿಣಾಮ ಬೀರ...

ಮಕ್ಕಳ ಗೀತೆ -32

Image
  🌹ಓ ಗಡಿಯಾರವೇ 🌹 ಓ ಗಡಿಯಾರವೇ ಓ ಗಡಿಯಾರವೇ  ನಿಂತಲ್ಲೇ ಒಮ್ಮೆ ನಿಂತು ಬಿಡು  ಸಾಧ್ಯವಾದರೆ ಸೂರ್ಯ ಚಂದ್ರರನ್ನು  ಒಮ್ಮೆ ಮುಚ್ಚಿ ಬಿಡು  ಏಕೆ ಓಡುತ್ತಿರುವೆ ಇಪ್ಪತ್ನಾಲ್ಕು ಗಂಟೆ  ಯಾರು ತಿಳಿಯರು ನಮಗೆ ಏಕೆ ಅಷ್ಟೇ ಗಂಟೆ   ಓಡುತ್ತಿರುವ ಜಗದಲ್ಲಿ ತಡೆಯುವವರಾರು  ಗಡಿಯಾರದ ಗಂಟೆಯನ್ನ  ಸಮಯ ಮುಗಿದ ಮೇಲೆ ಮತ್ತೆ ಬರುವ ನಿನ್ನ  ಬೆಳಕು ಕತ್ತಲೆ ಎಲ್ಲವೂ ಸರಿ ಸಮವೆ ನಿನಗೆ  ಸಮಯದಿ ದುಡಿಯದಿದ್ದರೆ ಕೂಳು ಸಿಗದು ನನಗೆ  ಹಗಲು ಸರಿದು ಇರುಳು ಬಂದು ಹೊರಡುವೆ ನೀನು ಕೊನೆಗೆ  ನಿನ್ನನೆ ನಂಬಿ ನಡೆಯುತ್ತಿಹುದು ಈ ಜಗವು  ನೀ ಇರದೇ ಇದ್ದರೆ ಸುಮ್ಮನೆ ಕುಣಿಯದು ಮನವು  ಪ್ರತಿ ಗಂಟೆಯೂ ನಿನ್ನಯ ಲೆಕ್ಕ ಅದುವೇ ಸಮಯ ಪಕ್ಕ  ರಾತ್ರಿ ಮುಳುಗಿ ಹಗಲು ಸರಿದು ಮಾಡಿತು ಲೆಕ್ಕ ಚುಕ್ಕ  **********ರಚನೆ********* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ 

ಮಕ್ಕಳ ಗೀತೆ -29

Image
  🌹ಪುಟಾಣಿ ಮಕ್ಕಳು 🌹 ಪುಟಾಣಿ ಮಕ್ಕಳು ಹೊರಟರು  ಆಕಾಶದಿ  ಕತ್ತಲ ರಾತ್ರಿಯಲಿ  ನೀಲಿಯ ಚಪ್ಪರ ಮೋಡದ  ಬಾನಿನ ಮನೆಯಲ್ಲಿ ಚಂದ್ರನ ಬೆಳಕಲ್ಲಿ ಆಗಸವು ನಗುತಾ ಮಿನುಗುತಿದೆ  ಗುಡಗಜ್ಜ ಬಂದ ಗುಡುಗುಡು  ಶಬ್ದವ ತಂದ ಮೋಡದ ಡಿಕ್ಕಿ ಮಿಂಚು  ಸಿಡಿಯಿತು ಹೊಕ್ಕಿ  ಬಾನಿನ ಮನೆಯು ಚದುರಿ  ಹೋಯಿತು ಕುಕ್ಕಿ  ಮಳೆಯು ಬಂತು, ನೀರನ್ನು ತಂತು  ಆಗಸವೆಂಬ ಬಾನಿಂದ ಮಕ್ಕಳು ಬೆದರಿ ನೀರಿಗೆ ಹೆದರಿ  ಹೊರಟವು ಅಲ್ಲಿಂದ  ನೀಲಿಯ ಚಪ್ಪರ ಸೋರಿ  ಮಕ್ಕಳು ಒದ್ದೆ  ಹಿಡಿಯುವರು ಇಲ್ಲ ಮಕ್ಕಳಿಗೆ  ಛತ್ರಿಯನ್ನು  ಚಂದ್ರನು ಸರಿದನು ನಕ್ಷತ್ರ  ಮುಳುಗಿದವು ಇರುಳಿನಲ್ಲಿ  ಜಡಿ ಜಡಿ ಮಳೆ ಸುರಿಯುತ್ತಿದೆ  ಬಿಡದೆ ಮೋಡದಲಿ  ಮಕ್ಕಳ ಮುಳುಗಿಸಿ ಚಪ್ಪರದ   ತೆಪ್ಪವು ತೇಲಿತು ನೀರಿಂದ  ಪುಟಾಣಿ ಮಕ್ಕಳು ಉಳಿಯಲಿಲ್ಲ  ನೀರಿನ ಸಾವಿಂದ ಅತ್ತು ಕರೆದರೂ ಕೇಳಲು  ಇಲ್ಲಿ ಯಾರಿಲ್ಲ  ಆಕಾಶದ ನೀಲಿಯ ಚಪ್ಪರಕೆ  ಏಕೋ ಸಾವಿಲ್ಲ  ***********ರಚನೆ*********  ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ 

ಮಕ್ಕಳ ಗೀತೆ -31

Image
  🌹 *ಬನ್ನಿ ಶಾಲೆಗೆ ಹೋಗೋಣ* 🌹 ಬನ್ನಿ ಗೆಳೆಯರೇ ನಾವು  ಶಾಲೆಗೆ ಹೋಗೋಣ  ಕಣ್ಣಾ ಮುಚ್ಚೆ ಗಾಡೆ  ಗೂಡೆ ಆಡೋಣ  ಮೇಷ್ಟ್ರು ಬರುವ ಒಳಗೆ  ಶಾಲೆ ಸ್ವಚ್ಛ ಮಾಡೋಣ  ಹತ್ತು  ಗಂಟೆಗೆ ಕನ್ನಡ  ಗೀತೆ ಹಾಡೋಣ  ಗುರುಗಳು ಹೇಳಿಕೊಟ್ಟ  ಪಾಠವ ಕಲಿಯೋಣ  ಕಲಿಯದೆ ಹೋದರೆ ಮೇಷ್ಟ್ರು  ಕೈಯಲ್ಲಿ ಒದೆ ತಿನ್ನೋಣ ನಮ್ಮ ಶಾಲೆಯಲ್ಲಿ ಶಾರದ  ಪೂಜೆ ಮಾಡ್ತಾರೆ ಬೋರ್ಡಿಗೆ ಹಸಿರು ಕರಿಮಸಿ  ಬಳಿದು ಅಕ್ಷರ ಬರಿತಾರೆ  ಕನ್ನಡದ ಶಾಲೆಯೆಂದು  ತಿರಸ್ಕರಿಸ ಬೇಡಿರಿ  ಇಂಗ್ಲಿಷ್ ಮೀಡಿಯಂ ಇದೆ  ಬಂದು ಶಾಲೆಗೆ ಸೇರಿರಿ  ಸುಂದರ ಪ್ರಕೃತಿಯ ಪರಿಸರ  ಶಾಲೆ ಮಾಡೋಣ  ಶಾಲೆಯ ಸುತ್ತಮುತ್ತ ಗಿಡ  ಮರಗಳ ವನ ಬೆಳೆಸೋಣ  ಹಳ್ಳಿಯ ಮಕ್ಕಳು ಎಲ್ಲಾ  ಖಾಸಗಿ ಶಾಲೆಯ ಸೇರಿಹರು ನಮ್ಮ ಶಾಲೆಯ ಸೂರನು ಸೋರುವಂತೆ ಮಾಡಿಹರು  ವಿದ್ಯೆಯನು ದುಡ್ಡು ಕೊಟ್ಟು  ಕಷ್ಟಪಟ್ಟು ಕಲಿಯುತ್ತಿಹರು ಉಚಿತ ಶಿಕ್ಷಣವನ್ನು ತೊರೆದು  ಬಿಟ್ಟು ದೂರ ನಿಂತಿಹರು  ಶ್ರೀಮಂತರ ಎಲ್ಲರೂ ಸೇರಿ  ಹಳ್ಳಿಯ ಶಾಲೆ ಮುಚ್ಚಿಹರು ಬಡವರ ತಂದೆ ತಾಯಿಗೆ  ನೋವನ್ನು ತಂದಿಹರು  ಮುಚ್ಚಬೇಡಿರಿ ನಮ್ಮ ಊರಿನ  ಕನ್ನಡ ಶಾಲೆಯನ್ನು ಮುಚ್ಚಿ ನಡೆದರೆ ನೀವು  ಮುಂದೆ ತಿನ್ನಬೇಕು ಮಣ್ಣನು ***********ರಚನೆ*********  ...

ಮಕ್ಕಳ ಗೀತೆ -30

Image
  🌹 *ಬನ್ನಿ ಎಲ್ಲರೂ ಆಡೋಣ* 🌹 ಅಕ್ಕ ಬಾರೆ ಕೈ ಕೈ ಹಿಡಿದು  ನಡೆದುಕೊಂಡು  ಶಾಲೆಗೆ ಹೋಗೋಣ  ಶಾಲೆಯಲ್ಲಿ ಮೇಷ್ಟ್ರು  ಕಾಯ್ತಾ ಅವರೇ ಎಲ್ಲರೂ ಬನ್ನಿ  ನಾವು ಅಕ್ಷರ ಕಲಿಯೋಣ  ಚಾಟಿ ಹಿಡಿದು  ಬುಗುರಿ ಸುತ್ತಿ  ಬುಗುರಿ ಆಡಿಸೋಣ  ಬಾರೆ ಅಮ್ಮ ಬುತ್ತಿ ತುಂಬಿ  ಎತ್ತಿನ ಗಾಡಿ ಹತ್ತಿ  ತೋಟಕೆ ಹೋಗೋಣ  ಅಪ್ಪ ಬಿದಿರು ಗಣವ ಹಿಡಿದು  ಕುಡಿಲು ಬಿಗಿದು ಮೇಲಕ್ಕೆತ್ತಿ  ತೆಂಗಿನಕಾಯಿ ಕೆಡುವೋಣ ಅಣ್ಣ ಮಂಕ್ರಿಲ್ಲಿ ಸಗಣಿ ತುಂಬಿ  ಗಂಜಲು ಮೊಗೆದು  ನಮ್ಮ ತಿಪ್ಪೆಗೆ ಹಾಕೋಣ  ಬಾರೆ ಗೆಳತಿ ಬೆಟ್ಟಗುಡ್ಡ ಹತ್ತಿ  ಗಿಡಮರ ಸುತ್ತಿ  ಮೇಲೆ ಆಕಾಶ ನೋಡೋಣ  ಅಕ್ಕ ಬಾರೆ ಹೂವ ಕಿತ್ತು  ಹಾರ ಮಾಡೋಣ  ನಮ್ಮ ಜಡೆಗೆ ಮುಡಿದುಕೊಳ್ಳೋಣ  ದೇವರು ಊರಲ್ಲಿ ಬೀದಿಗೆ  ಹಬ್ಬಕ್ಕೆ ಬಂದಿದೆ  ಮಂಗಳಾರತಿ ಮಾಡೋಣ  ಮುಂಜಾನೆದ್ದು ಹಲ್ಲು ಉಜ್ಜಿ  ಶುಭ್ರವಾಗಿ ದೇಹ ತೊಳೆದು ಕಾಫಿ ಕುಡಿಯೋಣ  ಬನ್ನಿ ಗೆಳೆಯರೇ ತೋಟವ  ಕಾಲಲ್ಲಿ ಸುತ್ತಿ  ಮಾವಿನಕಾಯಿ ತಿನ್ನೋಣ  ಬನ್ನಿರಿ ಎಲ್ಲರೂ ಹಾಸಿಗೆ ಅತ್ತಿ  ರಗ್ಗನು ಒದ್ದು  ಕಣ್ತುಂಬ ನಿದ್ದೆ ಮಾಡೋಣ  ***********ರಚನೆ********* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ