ಮಕ್ಕಳ ಗೀತೆ -33
🌹ಅಳಿಲೇ ಅಳಿಲೇ 🌹
ಅಳಿಲೆ ಅಳಿಲೆ
ಮುದ್ದಿನ ಅಳಿಲೆ
ಮರವನ್ನು ಏರುವ
ನೆಗೆದು ಬಾ ಅಳಿಲೆ
ಮರದ ಮೇಲೆ
ಎಳನೀರು ಆಯಿತೆ
ಕುಡಿದು ಬುರುಡೆ
ಬಿಟ್ಟು ಬಾ ಮರದಿ
ಮಾವಿನ ಮರದಿ
ಗಿಣಿ ಮಾವು ಆಯಿತೆ
ಅರ್ಧ ತಿಂದು ಎಂಜಲು
ಮಾಡಿ ಬಾ ಅಳಿಲೆ
ದಾರಿಯಲ್ಲಿ ನಾನು
ಸೈಕಲ್ ಏರಿ ಬಂದೆ
ದಾರಿಗೆ ಅಡ್ಡ ಬಂದು
ನೀ ನೋವನು ತಿಂದೆ
ಬೇಲಿಯ ಸಾಲಲಿ
ನೀ ಇರುವುದ ನೋಡಿ
ಬಲೆಯ ಬೀಸಿಹರು
ನಿನ್ನನು ಹಿಡಿದು ಕೊಂದಿಹರು
ಅಳಿಲೆ ಅಳಿಲೆ
ಮುದ್ದಿನ ಅಳಿಲೇ
ಬಾರೆ ಬಳಿಗೆ ಬೇಗ
ಚಿವ್ ಚಿವ ತಾನೇ ನಿನ್ನ ರಾಗ
***********ರಚನೆ********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment