ಮಕ್ಕಳ ಗೀತೆ -32
🌹ಓ ಗಡಿಯಾರವೇ 🌹
ಓ ಗಡಿಯಾರವೇ ಓ ಗಡಿಯಾರವೇ
ನಿಂತಲ್ಲೇ ಒಮ್ಮೆ ನಿಂತು ಬಿಡು
ಸಾಧ್ಯವಾದರೆ ಸೂರ್ಯ ಚಂದ್ರರನ್ನು
ಒಮ್ಮೆ ಮುಚ್ಚಿ ಬಿಡು
ಏಕೆ ಓಡುತ್ತಿರುವೆ ಇಪ್ಪತ್ನಾಲ್ಕು ಗಂಟೆ
ಯಾರು ತಿಳಿಯರು ನಮಗೆ ಏಕೆ ಅಷ್ಟೇ ಗಂಟೆ
ಓಡುತ್ತಿರುವ ಜಗದಲ್ಲಿ ತಡೆಯುವವರಾರು
ಗಡಿಯಾರದ ಗಂಟೆಯನ್ನ
ಸಮಯ ಮುಗಿದ ಮೇಲೆ ಮತ್ತೆ ಬರುವ ನಿನ್ನ
ಬೆಳಕು ಕತ್ತಲೆ ಎಲ್ಲವೂ ಸರಿ ಸಮವೆ ನಿನಗೆ
ಸಮಯದಿ ದುಡಿಯದಿದ್ದರೆ ಕೂಳು ಸಿಗದು ನನಗೆ
ಹಗಲು ಸರಿದು ಇರುಳು ಬಂದು ಹೊರಡುವೆ ನೀನು ಕೊನೆಗೆ
ನಿನ್ನನೆ ನಂಬಿ ನಡೆಯುತ್ತಿಹುದು ಈ ಜಗವು
ನೀ ಇರದೇ ಇದ್ದರೆ ಸುಮ್ಮನೆ ಕುಣಿಯದು ಮನವು
ಪ್ರತಿ ಗಂಟೆಯೂ ನಿನ್ನಯ ಲೆಕ್ಕ ಅದುವೇ ಸಮಯ ಪಕ್ಕ
ರಾತ್ರಿ ಮುಳುಗಿ ಹಗಲು ಸರಿದು ಮಾಡಿತು ಲೆಕ್ಕ ಚುಕ್ಕ
**********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment