ಮಕ್ಕಳ ಗೀತೆ -29

 




🌹ಪುಟಾಣಿ ಮಕ್ಕಳು 🌹

ಪುಟಾಣಿ ಮಕ್ಕಳು ಹೊರಟರು 

ಆಕಾಶದಿ  ಕತ್ತಲ ರಾತ್ರಿಯಲಿ 

ನೀಲಿಯ ಚಪ್ಪರ ಮೋಡದ 

ಬಾನಿನ ಮನೆಯಲ್ಲಿ


ಚಂದ್ರನ ಬೆಳಕಲ್ಲಿ ಆಗಸವು

ನಗುತಾ ಮಿನುಗುತಿದೆ 

ಗುಡಗಜ್ಜ ಬಂದ ಗುಡುಗುಡು

 ಶಬ್ದವ ತಂದ


ಮೋಡದ ಡಿಕ್ಕಿ ಮಿಂಚು 

ಸಿಡಿಯಿತು ಹೊಕ್ಕಿ 

ಬಾನಿನ ಮನೆಯು ಚದುರಿ 

ಹೋಯಿತು ಕುಕ್ಕಿ 


ಮಳೆಯು ಬಂತು, ನೀರನ್ನು ತಂತು 

ಆಗಸವೆಂಬ ಬಾನಿಂದ

ಮಕ್ಕಳು ಬೆದರಿ ನೀರಿಗೆ ಹೆದರಿ 

ಹೊರಟವು ಅಲ್ಲಿಂದ 


ನೀಲಿಯ ಚಪ್ಪರ ಸೋರಿ 

ಮಕ್ಕಳು ಒದ್ದೆ 

ಹಿಡಿಯುವರು ಇಲ್ಲ ಮಕ್ಕಳಿಗೆ 

ಛತ್ರಿಯನ್ನು 


ಚಂದ್ರನು ಸರಿದನು ನಕ್ಷತ್ರ 

ಮುಳುಗಿದವು ಇರುಳಿನಲ್ಲಿ 

ಜಡಿ ಜಡಿ ಮಳೆ ಸುರಿಯುತ್ತಿದೆ 

ಬಿಡದೆ ಮೋಡದಲಿ 


ಮಕ್ಕಳ ಮುಳುಗಿಸಿ ಚಪ್ಪರದ 

 ತೆಪ್ಪವು ತೇಲಿತು ನೀರಿಂದ 

ಪುಟಾಣಿ ಮಕ್ಕಳು ಉಳಿಯಲಿಲ್ಲ 

ನೀರಿನ ಸಾವಿಂದ


ಅತ್ತು ಕರೆದರೂ ಕೇಳಲು

 ಇಲ್ಲಿ ಯಾರಿಲ್ಲ 

ಆಕಾಶದ ನೀಲಿಯ ಚಪ್ಪರಕೆ

 ಏಕೋ ಸಾವಿಲ್ಲ 


***********ರಚನೆ********* 

ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ 

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಚುಟುಕು ಕವನ-35