1. .ಮೆದುಳಿನ ರಾಸಾಯನಿಕಗಳು ನಮ್ಮಲ್ಲಿ ಸಂತೋಷ ಹಾಗೂ ದುಃಖವನ್ನು ಉಂಟು ಮಾಡುತ್ತವೆಯೇ???
ದಿನನಿತ್ಯವು ಕೆಲವು ಭಾವನೆಗಳನ್ನು ನಾವು ಅನುಭವಿಸುತ್ತೇವೆ. ಆ ಭಾವನೆಗಳು ನಮ್ಮನ್ನು ಚಿಂತಿತರನ್ನಾಗಿ ಮಾಡುತ್ತವೆ. ಆ ಭಾವನೆಗಳಂತೆ ನಾವು ವರ್ತಿಸುತ್ತೇವೆ, ನಮ್ಮ ಮೆದುಳಿನಲ್ಲಿ ಉತ್ಪತ್ತಿಯಾಗುವ ಸಣ್ಣ ಸಣ್ಣ ರಾಸಾಯನಿಕಗಳನ್ನು ನರ ಪ್ರೇಕ್ಷಕ ಎಂದು ಹೇಳುತ್ತೇವೆ. ನರಪ್ರೇಕ್ಷಕಗಳು ನಮ್ಮ ಮನಸ್ಥಿತಿಯನ್ನು ನಿಯಂತ್ರಿಸುತ್ತವೆ.
ನಮ್ಮ ದೇಹವು ಜೀವಕೋಶಗಳಿಂದ ಮಾಡಲ್ಪಟ್ಟಿದೆ. ಈ ಜೀವಕೋಶಗಳು ಒಂದಕ್ಕೊಂದು ಸಂಪರ್ಕದಲ್ಲಿ ಇರುತ್ತವೆ.. ಅವುಗಳು ಮಾಹಿತಿಯನ್ನು ಸಂಜ್ಞೆಗಳ ಮೂಲಕ ಮೆದುಳಿಗೆ ಅಲ್ಲಿಂದ ನಮ್ಮ ದೇಹಕ್ಕೆ ರವಾನಿಸುತ್ತವೆ. ಇದರಿಂದ ನಮ್ಮ ಭಾವನೆಗಳು ಬದಲಾಗುತ್ತವೆ. ಜೀವಕೋಶಗಳು ಜನರ ಮಾನಸಿಕ ಆರೋಗ್ಯವನ್ನು ತಿಳಿಯಲು ಸಹಕರಿಸುತ್ತವೆ. ನಮ್ಮ ದೇಹವು ನರ ಕೋಶಗಳಿಂದ ತಯಾರಾಗಿದೆ . ನರಕೋಶಗಳನ್ನು ನ್ಯೂರಾನ್ ಎಂದು ಕರೆಯುತ್ತೇವೆ. ಈ ನರ ಕೋಶಗಳು ನಮ್ಮ ಹೊರ ಜಗತ್ತನ್ನು ಹಾಗೂ ನಮ್ಮ ದೇಹದ ಚಲನವಲನಗಳನ್ನು ನಿಯಂತ್ರಿಸುತ್ತವೆ. ಈ ನರ ಕೋಶಗಳು ರಾಸಾಯನಿಕ ವಸ್ತುಗಳಿಂದ ಮಾಡಲಾಗಿರುತ್ತದೆ. ಇವುಗಳನ್ನು ನಾವು ನರ ಪ್ರೇಕ್ಷಕ ಅಂದರೆ ಇಂಗ್ಲೀಷ್ ನಲ್ಲಿ ನ್ಯೂರೋ ಟ್ರಾನ್ಸ್ಮಿಟರ್ ಎಂದು ಹೇಳಲಾಗುತ್ತದೆ.
ಈ ನರಪ್ರೇಕ್ಷಕಗಳು ನಮ್ಮಲ್ಲಿನ ಭಾವನೆಗಳಾದ ನಕಾರಾತ್ಮಕ ಮತ್ತು ಸಕಾರಾತ್ಮಕ ಭಾವನೆಗಳನ್ನು ನರಪ್ರೇಕ್ಷಕಗಳಾದ ಡೋಪಮೈನ್, ಸೆರಾಟೋನಿನ್ ಮತ್ತು. ನಾರ್ ಎಪಿನೆಫ್ರೀನ್. ಗಾಬೆಾಅಮೈನೋಬ್ಯೂಟಿರಿಕ್ಆ್ಯಸಿಡ್, ಗ್ಲುಟಮೇಟ್ ಇವುಗಳು ನಮ್ಮ ಭಾವನೆಗಳನ್ನು ಮತ್ತು ಮನಸ್ಥಿತಿಯನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗುತ್ತವೆ. ಇವುಗಳ ಸಮತೋಲನ ದೇಹದಲ್ಲಿ ಇರಲು ಸಾಧ್ಯವಾಗದೇ ಇದ್ದಲ್ಲಿ ನಮ್ಮ ಭಾವನೆಗಳು ಬದಲಾಗುತ್ತವೆ.ಅವು ಯಾವುವೆಂದರೆ ಸಂತೋಷ, ದುಃಖ, ಸಿಟ್ಟು , ಕೋಪ, ಅಕ್ರಮಣಕಾರಿ ನಡವಳಿಕೆ ಹಾಗೂ ಹಠತಾ-ವರ್ತನೆ ಮುಂತಾದವುಗಳಿಗೆ ಕಾರಣವಾಗುತ್ತದೆ. ಈ ರಾಸಾಯನಿಕಗಳ ಸಮತೋಲನ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.
ಡೋಪಮೈನ್ (Dopamine)
ಡೋಪಮೈನ್ ಎಂಬುದು ನ್ಯೂರೊ ಟ್ರಾನ್ಸ್ಮಿಟರ್ ಇದು ನಮ್ಮ ಭಾವನೆಗಳು ಯಾವವೆಂದರೆ ಆಸಕ್ತಿ, ಸಂತೋಷ, ಹೆದರಿಕೆ ಮತ್ತು ಸಿಟ್ಟು ಮುಂತಾದ ಭಾವನೆಗಳನ್ನು ನಮ್ಮ ಮೆದುಳು ಮತ್ತು ದೇಹದಲ್ಲಿ ಬರುವಂತೆ ಮಾಡುತ್ತದೆ. ನಮ್ಮ ಮೆದುಳಿನಲ್ಲಿ ತಯಾರಾಗುವ ಡೋಪೋಮೈನ ರಾಸಾಯನಿಕ ಕಡಿಮೆ ಮತ್ತು ಜಾಸ್ತಿ ಇದ್ದಲ್ಲಿ ಮಾನಸಿಕ ಹಾಗು ದೈಹಿಕ ಆರೋಗ್ಯದ ಮೇಲೆ ಪರಿಣಾಮವನ್ನು ಉಂಟುಮಾಡುತ್ತವೆ. ಡೋಪಮೈನ್ ಒಂದರಿಂದಲೇ ನಮ್ಮ ಭಾವನೆಗಳು ಉತ್ಪತ್ತಿಯಾಗುವುದಿಲ್ಲ ,ಇದರ ಜೊತೆ ಸೆರಟೋನಿನ್ , ನಾರ್ರಾಎಪೈನ್ಫ್ರೀನ್ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ.
ಡೋಪಮೈನ್. ಮೆದುಳಿನಲ್ಲಿ ತಯಾರಾಗುತ್ತದೆ ಇದನ್ನು ರಾಸಾಯನಿಕ ಸಂದೇಶವಾಹಕ ಎನ್ನುತ್ತಾರೆ. ಇದು ಸಂದೇಶವನ್ನು ನರ ಕೋಶಗಳಿಂದ ನಮ್ಮ ಮೆದುಳಿಗೆ ಕಳುಹಿಸಿ ಅಲ್ಲಿಂದ ನಮ್ಮ ದೇಹಕ್ಕೆ ರವಾನಿಸುತ್ತದೆ. ಈ ಡೋಪಮೈನ್ ನಮ್ಮ ದೇಹದಲ್ಲಿ ಚಲನೆ, ಜ್ಞಾಪಕ, ಉತ್ಸಾಹ ನಿದ್ದೆ, ಮನಸ್ಥಿತಿ, ಅಧ್ಯಯನ, ಜಾಗೃತಿ ಮತ್ತು ಸಂತೋಷ ಮುಂತಾದ ದೇಹದ ಸ್ಥಿತಿಗಳಿಗೆ ಕಾರಣವಾಗುತ್ತದೆ.
ಡೋಪಮೈನ್ ನಮ್ಮ ದೇಹದಲ್ಲಿ ಸಮ ಸ್ಥಿತಿಯಲ್ಲಿದ್ದರೆ ನಮಗೆ ಸಂತೋಷ, ಉತ್ಸಾಹ, ಜಾಗೃತಿ, ಗಮನ ಸರಿಯಾಗಿರುತ್ತದೆ.
ಡೋಪಮೈನ್ ರಸಾಯನಿಕ ಕಡಿಮೆ ಇದ್ದರೆ ಸುಸ್ತು , ಅಸಂತೋಷ, ಜ್ಞಾಪಕದ ತೊಂದರೆ, ಮನಸ್ಥಿತಿಯ ಏರುಪೇರು , ನಿದ್ದೆಯ ಕೊರತೆ, ಏಕಾಗ್ರತೆ, ಕಡಿಮೆ ಲೈಂಗಿಕ ಅವಧಿ, ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.
ಡೋಪಮೈನ್ ಜಾಸ್ತಿ ಇದ್ದರೆ ಸಂಭ್ರಮ, ಉಲ್ಲಾಸ, ಶಕ್ತಿಯುತ ಜಾಸ್ತಿ ಲೈಂಗಿಕ ಅವಧಿ ಹಾಗೂ ನಿದ್ರೆ ಕೊರತೆ, ಉದ್ವೇಗ ನಿಯಂತ್ರಣ, ಅತಿಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಾರೆ.
ಜಾಸ್ತಿ ಡೋಪಮೈನ್ ಮೆದುಳಿನಲ್ಲಿ ಉತ್ಪತ್ತಿಯಾದರೆ ಉನ್ಮಾದ, ಬೊಜ್ಜು, ಚಟ ಹಾಗೂ ಕಡಿಮೆ ಮತ್ತು ಜಾಸ್ತಿ ಇದ್ದರೆ .ಸ್ಕಿಜೋಪ್ರೆನಿಯ ಎಂಬ ಮಾನಸಿಕ ಕಾಯಿಲೆಗೆ ಕಾರಣವಾಗುತ್ತದೆ ಹಾಗೂ ವಾಕರಿಕೆ ಮತ್ತು ವಾಮಿಟಿಂಗ್ ಮುಂತಾದ ಕಾಯಿಲೆಗೆ ತುತ್ತಾಗಿರುತ್ತಾರೆ. ಇಂತಹ ಕಾಯಿಲೆಗಳಿಗೆ ಅರಿಪೈಪ್ರೆಜೋಲ್ (aripiperazole) ರಿಸ್ಪೀರಿದೋನ್ (risperidone,) ಜಿಪ್ರಸಿಡೋನ್ (ziprasidone) ಒಳನ್ಜಪಿನೆ (olazapine) ಮಾತ್ರೆಗಳನ್ನು ವೈದ್ಯರು ಸ್ಕಿಜೋಪ್ರೆನಿಯ ಎಂಬ ಮಾನಸಿಕ ಕಾಯಿಲೆಗೆ ಅಥವಾ ಡಿಪ್ರೆಶನ್, ಆಂಜೈಟಿ ಕಾಯಿಲೆಗಳಿಗೆ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ.
ಸೆರೊಟೋನಿನ್ (Serotonin)
ಇದು ರಾಸಾಯನಿಕ ನ್ಯೂರೋಟ್ರಾನ್ಸ್ಮಿಟರ್ ನಮ್ಮ ದೇಹದಲ್ಲಿ ಮನಸ್ಥಿತಿಯ ಏರುಪೇರು ಭಾವನೆಗಳ ಸಮತೋಲನ, ಖಿನ್ನತೆ, ಜೀರ್ಣಕ್ರಿಯೆ, ವಾಕರಿಕೆ, ನಿದ್ದೆ ಏರುಪೇರು, ಗಾಯ ಮಾಯುವುದು, ಮೂಳೆಗಳ ಆರೋಗ್ಯ, ಲೈಂಗಿಕ ಕ್ರಿಯೆ ಸಮತೋಲನ, ಮತ್ತು ಆತ್ಮಹತ್ಯೆ ನಿರ್ಧಾರ ಇಂತಹವುಗಳಿಗೆ ಕಾರಣವಾಗುತ್ತದೆ. ಇದರಿಂದ ಖಾಯಿಲೆಗಳು ಉಂಟಾಗುತ್ತವೆ ಇವುಗಳಿಗೆ ಅಮಿಟ್ರಿಪ್ಟೈಲೀನ್ (amitriptylene), ಫೇನೆಲ್ಜೈನ್. (phenelzine) ಪ್ಯಾರಾಆಕ್ಸೀಟೀನ್ (paraoxetine) ವ್ಯಾನ್ಲಫ್ಯಾಕ್ಸಿನ್ ಎಂದು (vanlafaxine), ಮಾತ್ರೆಗಳನ್ನು ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ.
ನಾರೇಪಿಇನಪ್ರೈನ್ (norepinephrine)
ಇದು ಕೂಡ ರಾಸಾಯನಿಕ ನರಪೇಕ್ಷಕ, ಇದನ್ನು ಡೋಪಮೈನ್ ಎಂಬ ರಾಸಾಯನಿಕದಿಂದ ತಯಾರಿಸಲಾಗಿದೆ. ಇದರ ಕೊರತೆಯಿಂದ ನಮ್ಮ ದೇಹದಲ್ಲಿ ಜಾಗೃತಿ, ರಕ್ತದ ಒತ್ತಡ ಹಾಗೂ ಸಮತೋಲನ, ನಿದ್ರಾಚಕ್ರ, ಮನಸ್ಥಿತಿ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.
ಕಡಿಮೆ ನಾರೇಪಿಇನಪ್ರೈನ್ ಇದ್ದರೆ ಆತಂಕ, ಖಿನ್ನತೆ, ತಲೆನೋವು, ಜ್ಞಾಪಕದ ಕೊರತೆ, ಕಡಿಮೆ ರಕ್ತ ಒತ್ತಡ, ಸಕ್ಕರೆ ಅಂಶ ದೇಹದಲ್ಲಿ ಕಡಿಮೆ ಇರುವುದು. ಇಂತಹ ಎಲ್ಲ ರಾಸಾಯನಿಕ ನರಪ್ರೇಕ್ಷಕಗಳು ದೇಹದಲ್ಲಿ ಸಮತೋಲನದಲ್ಲಿ ಇದ್ದಲ್ಲಿ ನಮ್ಮ ಭಾವನೆಗಳು ಹಾಗೂ ನಾವು ಸಂತೋಷದಿಂದ ಇರಲು ಸಹಾಯವಾಗುತ್ತದೆ. ಇವುಗಳ ಏರುಪೇರು ನಮ್ಮ ದೇಹದ ಹಾಗೂ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ.
ಗಾಬೆಾಅಮೈನೋ ಬ್ಯೂಟಿರಿಕ್ ಆ್ಯಸಿಡ್ (GABA) Gama amino butyric acid )
ಗಾಬ(GABA) ಇದು ಒಂದು ನರ ಪ್ರೇಕ್ಷಕ ಹಾಗೂ ರಾಸಾಯನಿಕ ಸಂದೇಶವಾಹಕ, ನಮ್ಮ ಮೆದುಳಿನಲ್ಲಿ ಕೆಲವೊಂದು ಸಂಘ್ನೆಗಳನ್ನು ಕೇಂದ್ರ ನರಮಂಡಲದಲ್ಲಿ ಮೆದುಳನ್ನು ನಿಷ್ಕ್ರಿಯಗೊಳಿಸುವದನ್ನು ನಿರ್ಬಂಧಿಸುತ್ತದೆ.
ಗಾಬದಿಂದ ನಮ್ಮ ಮಾನಸಿಕ ಖಿನ್ನತೆ ಆತಂಕಗಳು ದೂರವಾಗುತ್ತವೆ. ನಿದ್ರೆ ಚೆನ್ನಾಗಿ ಬರುತ್ತದೆ. ಗಾಬ ನಮ್ಮ ಮೆದುಳಿನಲ್ಲಿ ಸಮತೋಲನದಿಂದ ಇರದಿದ್ದಲ್ಲಿ ಆತಂಕ, ಮನಸ್ಥಿತಿಯ ಏರುಪೇರು, ಸ್ಕೈಜೋಫ್ರೇನಿಯ, ಖಿನ್ನತೆ ಹಾಗೂ ಹಗಲಿನಲ್ಲಿ ಜಾಸ್ತಿ ನಿದ್ರೆ, ಪ್ರಮಾಣ ಉಂಟಾಗುತ್ತದೆ.
ಗಾಬ ಏರುಪೇರಿಗೆ ಬೆಂಜೋ ಡೈಜೆಪನ್ಸ್ (Benzodiazapines (ಡೈಜಪ್ಪಂ diazapam) ಬಾರ್ಬಿ ರೇಟ್(Barbitarates) ಫ್ಲಾಮೆಜಾನಿಲ್ (flamazanil )ಮುಂತಾದ ಔಷಧಿಗಳನ್ನು ವೈದ್ಯರು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ
ಗ್ಲುಟಮೇಟ್ (glutamate)
ಗ್ಲುಟಮೇಟ್ ಒಂದು ರಾಸಾಯನಿಕ ಸಂದೇಶವಾಹಕ ಮೆದುಳಿನಲ್ಲಿ ಉತ್ಪತ್ತಿಯಾಗುತ್ತದೆ. ಇದು ಕಲಿಕೆ ಮತ್ತು ಜ್ಞಾಪಕ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಒಂದು ಪ್ರಚೋದಕ ನರಪ್ರೇಕ್ಷಕ ಹಾಗೂ ನರಜೀವಕೋಶಗಳನ್ನು ಉತ್ತೇಜಿಸುತ್ತದೆ.
ಗ್ಲುಟಮೇಟ್ ನಮ್ಮ ದೇಹದಲ್ಲಿ ಕಲಿಕೆ, ಜ್ಞಾಪಕ, ನರಜೀವಕೋಶಗಳಿಗೆ ಶಕ್ತಿಯ ಕೇಂದ್ರ ರಾಸಾಯನಿಕ ಸಂದೇಶವಾಹಕಗಳಾಗಿ ಕೆಲಸ ಮಾಡುತ್ತವೆ.
ನಮ್ಮ ಮೆದುಳಿನಲ್ಲಿ ಜಾಸ್ತಿ ಗ್ಲುಟಮೇಟ್ ಉತ್ಪಾದನೆ ಆದಲ್ಲಿ Alzheimer's disease(ಅಲ್ಝಮಿರಾ ಕಾಯಿಲೆ) Parkinson disease(ಪಾರ್ಕಿನ್ ಸನ್ ಕಾಯಿಲೆ) stroke(ಪಾರ್ಶ್ವವಾಯು) ಮನಸ್ಥಿತಿ ಏರುಪೇರು ಮತ್ತು ಆತಂಕ, ಖಿನ್ನತೆ, schizophernia(ಸ್ಕೈಜೋ ಫ್ಟ್ರೇನಿಯಾ) ಕಾಯಿಲೆಗಳು ಉಂಟಾಗುತ್ತವೆ.
ನಮ್ಮ ಮೆದುಳಿನಲ್ಲಿ ಕಡಿಮೆ ಗ್ಲುಟಮೇಟ್ ಉತ್ಪಾದನೆ ಆದಲ್ಲಿ ಏಕಾಗ್ರತೆಯ ಕೊರತೆ, ಮಾನಸಿಕ ಬಳಕೆ, ಶಕ್ತಿ ಹೀನತೆ, ನಿದ್ರಾಹೀನತೆ, ಮುಂತಾದ ಕಾಯಿಲೆಗೆ ಕಾರಣವಾಗುತ್ತದೆ.
ನಮ್ಮ ದೇಹದಲ್ಲಿ ಗ್ಲುಟಮೇಟ್ಕ ಕೊರತೆ ಆದಲ್ಲಿ riluzole(ರಿಲೈಜೋಲ್) ಏನೇಸಿಟಿಲ್ಸೈಸ್ಟಿನ್ (N-acetylcysteine) (ತೋಪೈರಮತೆ) topiramate nodafinil (ನೊಡಾಫಿನಿಲ್) ಮುಂತಾದ ಔಷಧಿಗಳನ್ನು ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ.
ಇಲ್ಲಿ ನಾನು ಒಬ್ಬ ಸಾಮಾನ್ಯ ಪ್ರೇಕ್ಷಕ
ನಮ್ಮನ್ನು ಆಡಿಸುವವು ನರಪೇಕ್ಷಕ
ಎಲ್ಲವೂ ಸಮತೋಲನದಲ್ಲಿ ಇದ್ದರೆ ಸಂತೋಷ
ಇಲ್ಲ ಅಂದರೆ ಆಗುವುದು ಮಾನಸಿಕ ದುಃಖ
ತಿಳಿದುಕೋ ಮನುಷ್ಯ ನೀನು ಬಿಟ್ಟು ಸೊಕ್ಕ
ಇಲ್ಲ ಅಂದರೆ ನಿನಗೆ ಮಾನಸಿಕ ಕಾಯಿಲೆ ಪಕ್ಕ
ಕೊಡು ನೀನು ವೈದ್ಯರಿಗೆ ಪ್ರತಿಸಲವೂ ರೊಕ್ಕ
ಇಲ್ಲ ಅಂದಲ್ಲಿ ಜೀವ, ಜೀವನ ಸವೆಸಿ ಮಣ್ಣು ಮುಕ್ಕಾ
ಖಂಡಿತವಾಗಿಯೂ ಈ ನ್ಯೂರೋಟ್ರಾನ್ಸ್ಮಿಟರ್ (ನರಪೇಕ್ಷಕಗಳು,) ನಮ್ಮ ಮೆದುಳಿನಲ್ಲಿ ಉತ್ಪಾದನೆಯಾಗಿ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ. ಇವುಗಳ ಉತ್ಪಾದನೆ ನಮ್ಮ ಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ ಹಾಗೂ ಈ ನರ ಪ್ರೇಕ್ಷಕಗಳಿಂದ ಭಾವನೆಗಳ ಏರುಪೇರಾಗಿ ನಮ್ಮಲ್ಲಿ ಸಂತೋಷ ಮತ್ತು ದುಃಖವಾಗಲು ಕಾರಣವಾಗುತ್ತವೆ.
*********ಲೇಖಕರು******
ಡಾ.ಚಂದ್ರಶೇಖರ್, ಚನ್ನಾಪುರ ಹಾಲಪ್ಪ
Super
ReplyDelete