ಮಕ್ಕಳ ಗೀತೆ -31

 



🌹 *ಬನ್ನಿ ಶಾಲೆಗೆ ಹೋಗೋಣ* 🌹

ಬನ್ನಿ ಗೆಳೆಯರೇ ನಾವು 

ಶಾಲೆಗೆ ಹೋಗೋಣ 

ಕಣ್ಣಾ ಮುಚ್ಚೆ ಗಾಡೆ 

ಗೂಡೆ ಆಡೋಣ 


ಮೇಷ್ಟ್ರು ಬರುವ ಒಳಗೆ 

ಶಾಲೆ ಸ್ವಚ್ಛ ಮಾಡೋಣ 

ಹತ್ತು  ಗಂಟೆಗೆ ಕನ್ನಡ 

ಗೀತೆ ಹಾಡೋಣ 


ಗುರುಗಳು ಹೇಳಿಕೊಟ್ಟ 

ಪಾಠವ ಕಲಿಯೋಣ 

ಕಲಿಯದೆ ಹೋದರೆ ಮೇಷ್ಟ್ರು 

ಕೈಯಲ್ಲಿ ಒದೆ ತಿನ್ನೋಣ


ನಮ್ಮ ಶಾಲೆಯಲ್ಲಿ ಶಾರದ 

ಪೂಜೆ ಮಾಡ್ತಾರೆ

ಬೋರ್ಡಿಗೆ ಹಸಿರು ಕರಿಮಸಿ 

ಬಳಿದು ಅಕ್ಷರ ಬರಿತಾರೆ 


ಕನ್ನಡದ ಶಾಲೆಯೆಂದು 

ತಿರಸ್ಕರಿಸ ಬೇಡಿರಿ 

ಇಂಗ್ಲಿಷ್ ಮೀಡಿಯಂ ಇದೆ 

ಬಂದು ಶಾಲೆಗೆ ಸೇರಿರಿ 


ಸುಂದರ ಪ್ರಕೃತಿಯ ಪರಿಸರ 

ಶಾಲೆ ಮಾಡೋಣ 

ಶಾಲೆಯ ಸುತ್ತಮುತ್ತ ಗಿಡ 

ಮರಗಳ ವನ ಬೆಳೆಸೋಣ 


ಹಳ್ಳಿಯ ಮಕ್ಕಳು ಎಲ್ಲಾ 

ಖಾಸಗಿ ಶಾಲೆಯ ಸೇರಿಹರು

ನಮ್ಮ ಶಾಲೆಯ ಸೂರನು

ಸೋರುವಂತೆ ಮಾಡಿಹರು 


ವಿದ್ಯೆಯನು ದುಡ್ಡು ಕೊಟ್ಟು 

ಕಷ್ಟಪಟ್ಟು ಕಲಿಯುತ್ತಿಹರು

ಉಚಿತ ಶಿಕ್ಷಣವನ್ನು ತೊರೆದು 

ಬಿಟ್ಟು ದೂರ ನಿಂತಿಹರು 


ಶ್ರೀಮಂತರ ಎಲ್ಲರೂ ಸೇರಿ 

ಹಳ್ಳಿಯ ಶಾಲೆ ಮುಚ್ಚಿಹರು

ಬಡವರ ತಂದೆ ತಾಯಿಗೆ 

ನೋವನ್ನು ತಂದಿಹರು 


ಮುಚ್ಚಬೇಡಿರಿ ನಮ್ಮ ಊರಿನ 

ಕನ್ನಡ ಶಾಲೆಯನ್ನು

ಮುಚ್ಚಿ ನಡೆದರೆ ನೀವು 

ಮುಂದೆ ತಿನ್ನಬೇಕು ಮಣ್ಣನು


***********ರಚನೆ********* 

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa