ಮಕ್ಕಳ ಗೀತೆ -30

 




🌹 *ಬನ್ನಿ ಎಲ್ಲರೂ ಆಡೋಣ* 🌹


ಅಕ್ಕ ಬಾರೆ ಕೈ ಕೈ ಹಿಡಿದು 

ನಡೆದುಕೊಂಡು 

ಶಾಲೆಗೆ ಹೋಗೋಣ 


ಶಾಲೆಯಲ್ಲಿ ಮೇಷ್ಟ್ರು 

ಕಾಯ್ತಾ ಅವರೇ ಎಲ್ಲರೂ ಬನ್ನಿ 

ನಾವು ಅಕ್ಷರ ಕಲಿಯೋಣ 


ಚಾಟಿ ಹಿಡಿದು 

ಬುಗುರಿ ಸುತ್ತಿ 

ಬುಗುರಿ ಆಡಿಸೋಣ 


ಬಾರೆ ಅಮ್ಮ ಬುತ್ತಿ ತುಂಬಿ 

ಎತ್ತಿನ ಗಾಡಿ ಹತ್ತಿ 

ತೋಟಕೆ ಹೋಗೋಣ 


ಅಪ್ಪ ಬಿದಿರು ಗಣವ ಹಿಡಿದು 

ಕುಡಿಲು ಬಿಗಿದು ಮೇಲಕ್ಕೆತ್ತಿ 

ತೆಂಗಿನಕಾಯಿ ಕೆಡುವೋಣ


ಅಣ್ಣ ಮಂಕ್ರಿಲ್ಲಿ ಸಗಣಿ ತುಂಬಿ 

ಗಂಜಲು ಮೊಗೆದು 

ನಮ್ಮ ತಿಪ್ಪೆಗೆ ಹಾಕೋಣ 


ಬಾರೆ ಗೆಳತಿ ಬೆಟ್ಟಗುಡ್ಡ ಹತ್ತಿ 

ಗಿಡಮರ ಸುತ್ತಿ 

ಮೇಲೆ ಆಕಾಶ ನೋಡೋಣ 


ಅಕ್ಕ ಬಾರೆ ಹೂವ ಕಿತ್ತು 

ಹಾರ ಮಾಡೋಣ 

ನಮ್ಮ ಜಡೆಗೆ ಮುಡಿದುಕೊಳ್ಳೋಣ 


ದೇವರು ಊರಲ್ಲಿ ಬೀದಿಗೆ 

ಹಬ್ಬಕ್ಕೆ ಬಂದಿದೆ 

ಮಂಗಳಾರತಿ ಮಾಡೋಣ 


ಮುಂಜಾನೆದ್ದು ಹಲ್ಲು ಉಜ್ಜಿ 

ಶುಭ್ರವಾಗಿ ದೇಹ ತೊಳೆದು

ಕಾಫಿ ಕುಡಿಯೋಣ 


ಬನ್ನಿ ಗೆಳೆಯರೇ ತೋಟವ 

ಕಾಲಲ್ಲಿ ಸುತ್ತಿ 

ಮಾವಿನಕಾಯಿ ತಿನ್ನೋಣ 


ಬನ್ನಿರಿ ಎಲ್ಲರೂ ಹಾಸಿಗೆ ಅತ್ತಿ 

ರಗ್ಗನು ಒದ್ದು 

ಕಣ್ತುಂಬ ನಿದ್ದೆ ಮಾಡೋಣ 


***********ರಚನೆ*********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಹೆತ್ತು ಹೊತ್ತ ತಾಯಿ

ಸಂತೋಷವಾಗಿರಲು ಪ್ರಯತ್ನಿಸೋಣ