Posts

Showing posts from December, 2022

ಹೊಸವರ್ಷ -2023

Image
  ಹೊಸ ವರುಷ ಜೊತೆಯಾಗಿ ಬಂತು ಹೊಸದಾಗಿ ನಮಗೇನು ತಂತು ನವ ಹರುಷ ಮನೆಗೆ ಬಂತು ಹೊಸ ಹಾಡು ಹಾಡಬೇಕು ನಿಂತು ಹಾಡಿ ಕುಣಿವುದು ಮೈಮನ ನಕ್ಕು ನಲಿಯುವುದೇ ಜೀವನ ಆಗುವುದೇ ಮನಸೆಲ್ಲಾ ಸಿಂಗಾರ ದೇಹ ಕುಣಿವುದೇ ಒಡೆದು ಡಂಗುರ ಬದುಕಿನ ಸಾರ್ಥಕ ಕ್ಷಣ ನೆನೆದು ಕಷ್ಟಗಳ ಗಂಟು ಮೂಟೆ ಹೊಗೆದು ನೋವುಗಳ ನೀರು ಕುಡಿದು ಹೃದಯದ ತಾಳಕೆ ಕುಣಿದು ಜೀವನದ ಗಾಡಿ ಮುಂದೆ ತಳ್ಳಿ ಮನೆ ಮಂದಿ ಪ್ರೀತಿ ಎಲೆ ಬಳ್ಳಿ ನಗುತಾ ಸಾಗುವ ಬದುಕಲಿ ಬೆರೆತು ಹೊಸತನ ಕಲಿಯೋಣ ಕಲೆತು ನೆನ್ನೆಯ ನೆನೆಪುಗಳು ನೂರು ಕಾಡುವ ಕನಸುಗಳು ಚೂರು ನಾಳೆಯ ಸವಿಗನಸು ಮುನ್ನೂರು ಬದುಕೋಣ ನಾವು ನಾಳೇಗಾಗಿ   ವಂಚೂರು ಹೊಸ ವರುಷ ಜೊತೆಯಾಗಿ ಬಂತು ಹೊಸದಾಗಿ ನಮಗೇನು ತಂತು ನವ ಹರುಷ ಮನೆಗೆ ಬಂತು ಹೊಸ ಹಾಡು ಹಾಡಬೇಕು ನಿಂತು ಸರ್ವರಿಗೂ ಹೊಸವರ್ಷದ ಶುಭಾಶಯಗಳು  *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್E

ಏನೋ ಚೆಂದ

Image
ಅಕ್ಕರೆ ಇಲ್ಲದ ನಗುವೇನ ಚೆಂದಾ  ಸಕ್ಕರೆ ಇಲ್ಲದ ಸಿಹಿಯೇನ ಚೆಂದಾ  ಮಾತಲಿ ಕಟ್ಟಿದ ಮನೆಯೇನ ಚೆಂದಾ  ಕತ್ತಲಲಿ ಕಳೆದೋದ ಚಿತ್ರವೇನ ಚೆಂದಾ  ಮುದ್ದು ನಗುವ ಹುಡುಗಿನೇ ಚೆಂದಾ  ಮನದ ಆಸೆಗೆ ಬಿದ್ದ ಕನಸೇ ಚೆಂದಾ  ನೆಲವ ಸೋಕಿದ ಪಾದವೇ ಚೆಂದಾ  ಕಣ್ಣ ರೆಪ್ಪೆಗೆ ಕಪ್ಪು ಕಾಡಿಗೆ ಚೆಂದಾ  ಬದುಕು ಸಾಗಿಸುವ ಬಂಡಿ ಚೆಂದಾ  ಬಂಡಿ ಎಳೆವ ಗಂಡ ಗುಂಡಿ ಚೆಂದಾ  ಭಾವನೆಗೆ ಬಣ್ಣ ಹಚ್ಚುವ ಜೀವನ ಚೆಂದಾ  ಸುಖ ದುಃಖದಿ ನಡೆವ ದಾರಿಯೇ ಚೆಂದಾ  ಪ್ರೀತಿಲಿ ಕರಗದ ಸಿಟ್ಟೆನ ಚೆಂದಾ ಮುಟ್ಟದೆ ಮುನಿಯುವ ನಂಟೇನ ಚೆಂದಾ ಸುಟ್ಟರೆ ಬೇಯದ ಬಯಕೆಯೇನ ಚೆಂದಾ ಊಟಕೆ ಇಲ್ಲದ ಉಪ್ಪಿನಕಾಯೇನ ಚೆಂದಾ  ಸಾಗುವ ನದಿಗೆ ತೇಲುವ ಅಲೆಯೇನ ಚೆಂದಾ  ಬಾಳಲಿ ಬಿಡಿಸಲು ಬಾರದ ಒಗಟೆನ ಚೆಂದಾ  ಬಿದ್ದರು ಏಳಲು ಬಾರದ ಬದುಕೇನ ಚೆಂದಾ  ಏಕೊ ಏನೋ ಇದು ನನ್ನ ನಿನ್ನ ಬಿಡಿಸದ ಬಂದ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ರೈತ ಮಹಿಳೆ

Image
ಹೊಲದ ತುಂಬಾ ಆಡಿಕೆ ಗಿಡ ಗೊಬ್ಬರ ಬೇಕು ಬಿಡಲು ಬುಡ ಬುಡದಲ್ಲಿ ಬೆಳೆದಿದೆ ಹಸಿರು ಕಳೆ ಕಿತ್ತರೇನೇ ತೊಲಗುವವುದು ಕೊಳೆ ತೆನೆ ಹೊತ್ತ ರೈತ ಮನೆ ಮಹಿಳೆ ಊದಿಹಳು ಸಸಿ ಬೆಳೆವ ಕಹಳೆ ಕಳೆಯ ತೆಗೆದು ಹೊಲಸು ತೊಳೆದು ಅಡಿಕೆಯಾಗಿದೆ ಹಸಿರು ಬಂಗಾರ ರೈತ ಮಹಿಳೆ ಈಗ ಸ್ವಾವಲಂಬಿ ದುಡಿಯುವ ದೋಣಿ ಅಂಬಿ ಮನೆ ಮಂದಿ ತಿನ್ನುತಿಹರು ಅನ್ನ ಕಷ್ಟದಿಂದ ಮಾಡಿದ ಸಾಲ ಮನ್ನಾ ಬದುಕಿನಲ್ಲಿ ಕೈಯ ತುಂಬಾ ಕೆಸರು ಜೀವನವಿಂದು ಕುಡಿದಂಗೆ ಮೊಸರು ಊರಿನಲ್ಲಿ ತೋಟ ಬಲು ಚೆಂದ  ಭೂಮಿತಾಯಿ ನಗುವೇ ಅಂದ *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ದೇವರು

Image
ಎಣ್ಣೆಯ ಬಿಟ್ಟು ಬತ್ತಿಯ ಹದ್ದಿ ದೀಪವ ಹಚ್ಚಲು ಬೆಳಕಾಯಿತು ವಿಭೂತಿ ಬಳಿದು ಅರಿಶಿನ ಇಟ್ಟು ಕುಂಕುಮ ಮೆತ್ತಿ ಹೂವು ಇಡಲು ದೇವರಿಗೆ ಪೂಜೆಯಾಯಿತು ಕರ್ಪೂರ ಬೆಳಗಿ ನೈವೇದ್ಯ ಇಡಲು ಮನವು ಭಕ್ತಿಯಲಿ ಪರವಷವಾಯಿತು ಬೇಡಲು ನೂರಾರು ಆಸೆಗಳು ಸಾವಿರ ಮನದ ಆಲೋಚನೆಗಳು ಕೈಮುಗಿದು ಅಡ್ಡ ಬಿದ್ದು ಅಪ್ಪಣೆ ಕೇಳಿದರೆ ಮುಗಿಯಿತೇ ಕಷ್ಟಗಳು ಕಂಬನಿ ಕಣ್ಣು ಒದ್ದೆಯಾಯಿತೇ ಬೇಡಿದ ಫಲ ದೊರಕಿತೆ ಬಾಳಲಿ ಬೇಸರ ಬಂದು ಬದುಕಲಿ ನೊಂದು ನಿನ್ನ ನೆಲೆಯಲಿ ಭಕ್ತಿಯಲಿ ಮಿಂದು ಕಾಣದ ಬಯಕೆಗಳು ನನ್ನಲಿ ಬಂದು ಭಾವನೆಗಳು ನನ್ನನು ಕೊಂದು ಊರ ದೇವರಿಗೆ ಜೋಡಿ ಕಾಯಿ ಒಡೆದೆ ನನ್ನ ಕಾಯೋ ಹರನೇ ಹರಿ ನೀ ಎಂದೇ ಬಣ್ಣದ ಬದುಕಲಿ ಹೆಜ್ಜೆಯ ಇಡುತ ನೆಡೆದೆ ************ರಚನೆ ******** ಡಾ.ಚಂದ್ರಶೇಖರ. ಸಿ. ಹೆಚ್

ನನ್ನವಳು

Image
ಮರೆಯದ ನೆನಪು ನನ್ನವಳ ಮಾತು ತುಟಿಯಂಚಿನಲ್ಲಿ ಕಾದಿತ್ತು ಪ್ರೀತಿ ಮುತ್ತು ಕಣ್ಣ ಕುಡಿ ನೋಟ ನನ್ನ್ನನೆ ತಿಂತು  ಕಳೆದೋಯ್ತು ಹಾಗೆ ಕಾಣದ ಹೊತ್ತು ಓ ಶಿವನೇ ಹೇಳು ಇವಳ ನನ ಸ್ವತ್ತು  ಒಣಗಿದ ಕೆನ್ನೆ ಚಿಗುರಿ ನಿಂತಿತ್ತು ಮುಂಗುರಳ ಕೂದಲು ಹಾರಾಡುತಿತ್ತು ಬಯಸದ ಭಾಗ್ಯ ಬಂದು ಬುಟ್ಟಿಗೆ ಬಿತ್ತು ಉಟ್ಟ ಆ ಸೀರೆ ಕಾಮನಬಿಲ್ಲಿನ್ನ ಬಣ್ಣ ನಡೆವಾಗ ಕಂಡ ನಡು ಸ್ವಲ್ಪ ಸಣ್ಣ ಹೆಜ್ಜೆ ಹೆಜ್ಜೆಗೆ ಅವಳ ಗೆಜ್ಜೆಯ ನಾದ ಕುಣಿದಂತೆ ನವಿಲು ನೋಡು ಹಳ್ಳಿ ಹೈದ ಬಳುಕುವ ಬಳ್ಳಿ ನಡೆವಾಗ ಅವಳು ಕುಣಿದಂತೆ ನನ್ನವಳು ಜೋಡಿ ನವಿಲು ಕಂಪಿಸಿದೆ ಭೂಮಿ ನೋಡಿ ಅವಳ ಮುಂಗಾರು ದಿನದಲ್ಲಿ ಬಿದ್ದಂತೆ ಕವಳ ಮಿಂಚಂತೆ ಹೊಳಪು ನನ್ನವಳ ಅಂದ ಸೂರ್ಯನೇ ಸುಟ್ಟೋದ ಕಂಡು ಚೆಂದ ರಾತ್ರಿಯಲಿ ತಣ್ಣಗೆ ಚಂದ್ರನೇ ಬೆಂದ ನಕ್ಷತ್ರಗಳ ರಾಜ ದ್ರುವ ತಾರೆ ನೊಂದ ಮತ್ತೆಗೆ ಬಣ್ಣಿಸಲಿ ವರ್ಣಿಸಲಿ ಪೋಣಿಸಲಿ  ಸಿಗದೇ ಪದಗಳ ಸುಂದರ ಅನುಬಂಧ ಬಿಡಿಸಲು ಸಿಗದ ಪ್ರೇಮವೇ ಬಂಧ ನಾನು ಒಬ್ಬ  ಪ್ರೀತಿ ಹುಡುಕುವ ಕಂದ  *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ನಮ್ಮಲ್ಲಿನ ಫ್ಯಾಶನ್ ಹುಡುಕುವುದು ಹೇಗೆ

Image
ಹಾಯ್ ಗೆಳೆಯರೇ ದೇವರು ನಮ್ಮ ಜನ್ಮ ಸೃಷ್ಟಿ ಮಾಡುವಾಗಲೇ ತನ್ನದೇ ಆದ ಒಂದು ಕಲೆ, ಬುದ್ಧಿವಂತಿಕೆಯನ್ನು ಕೊಟ್ಟಿರುತ್ತಾನೆ. ಆದರೆ ತುಂಬಾ ಜನರು ಅದನ್ನು ಗುರುತಿಸಿ ಉಪಯೋಗ ಪಡೆಯಲು ಆಸಕ್ತಿ ಇಲ್ಲದವರಾಗಿರುತ್ತಾರೆ. ಬುದ್ಧಿವಂತಿಕೆ  ಎಂಬುದು ದೇವರು ನಮಗೆ ಕೊಟ್ಟ ಒಂದು ಅಮೂಲ್ಯವಾದ  ಉಡುಗೊರೆ, ಆ ಉಡುಗೊರೆ ನಮಗೆ ಉಪಯೋಗವಾದಲ್ಲಿ ಅದ್ಭುತಗಳೇ ಸೃಷ್ಟಿಯಾಗುತ್ತವೆ.ಅವುಗಳನ್ನು ನಾವು ಪ್ಯಾಶನ್ಎಂದು ಹೇಳುತ್ತೇವೆ. ಫ್ಯಾಶನ್ ಎನ್ನುವುದು ನಾವು ಮಾಡುವ ಕೆಲಸದಿಂದ ಶುರುವಾಗಿ ನಮ್ಮ ಆಟ, ತಿಂಡಿ ಮುಂತಾದ ಕಡೆಯಲ್ಲೂ ಇರುತ್ತದೆ.  ನಾವು ಯಾವ ಕೆಲಸವನ್ನೇ ಮಾಡಲಿ ಕೆಲಸದಲ್ಲಿ ಉತ್ಸಾಹ ಹಾಗೂ ಬುದ್ಧಿವಂತಿಕೆ ಬಹು ಮುಖ್ಯ ಕೆಲವೊಮ್ಮೆ ಅದನ್ನು ಬ್ರಹ್ಮ ಬರೆದ ಹಣೆಬರಹ ಎನ್ನುತ್ತೇವೆ. ಇಲ್ಲವೆಂದಲ್ಲಿ ಶ್ರಮಕ್ಕೆ ಸಿಕ್ಕ ಪಲ ಎಂದು ತಿಳಿಯುವುದು ಉಂಟು, ಒಬ್ಬ ವ್ಯಕ್ತಿ ಯಾವುದೇ ಕೆಲಸವನ್ನು ಎಷ್ಟು ಸಮಯವಾಗಲಿ ಮಾಡುವಾಗ ಉತ್ಸಾಹ ಹಾಗೂ ಬುದ್ಧಿವಂತಿಕೆ ಕಡಿಮೆಯಾಗದೆ ನಿರಂತರವಾಗಿ ಕೆಲಸವನ್ನು ಖುಷಿಯಿಂದ ಮಾಡುತ್ತಾನೋ ಅವನ  ಅಂತ ಕೆಲಸವನ್ನು ತನ್ನ ಫ್ಯಾಷನ್ ಎಂದು ತಿಳಿಯಬಹುದು.  ಈ ಪ್ಯಾಶನ್ ಕೆಲವೊಮ್ಮೆ ಜೀವನದಿ ಕಷ್ಟಗಳಿಂದ ಕೆಲಸ ಮಾಡುತ್ತಾ ಅದು ಅವನ ಜೀವನ ಬದಲಾಯಿಸಿ ಫ್ಯಾಶನ್ ಆಗಿರಬಹುದು ಅಥವಾ ಅವನು ಶ್ರಮದಿಂದ ದುಡಿದು ಆ ಉದ್ಯೋಗವನ್ನು ಫ್ಯಾಶನ್ ಮಾಡಿಕೊಂಡಿರಬಹುದು.  ನಾವುಗಳು ಚಿಕ್ಕವರಿದ್ದಾಗ ನಮ್ಮ ಶಾಲೆಯಲ್ಲಿ ಅಥವಾ  ಶಿಕ್ಷಕರು ಹಾಗೂ ಮನೆಯವರು ಹುಡುಗ ತುಂ

ಬಣ್ಣವ ತುಂಬಿ

Image
ಬರೆವ ಅಕ್ಷರದಿ ಭಾವನೆಗಳ ಕುಣಿತ ಗೀಚಿದ ಶಾಯಿಯಲಿ ಬಣ್ಣದ ಮಿಳಿತ ಒಲವಿನ ಬದುಕಲಿ ನಿನ್ನ ಬಿಂಬದ ಸೆಳೆತ ಮೌನದ ಬದುಕಲಿ ಆಸೆಯ ಮೊಳೆತ ನೋವು ನಲಿವು ಗೆಲುವು ಭಾವನೆ ಆಸೆ ಕನಸು ನನಸು ಸುಖ ಕಾಮನೆ ಕಣ್ಣೀರು ದುಃಖ ಅಳಲು ವೇಧನೆ ಭಾವನೆ ಕಾಮನೆ ವೇಧನೆ ರೋಧನೆ ನೂಕಿದೆ ಬಾಳ ಬಂಡಿಯನೇ ಬಣ್ಣವ ನಿನ್ನ ಸವಿ ಬದುಕಿಗೆ ತುಂಬಿ ಬಂದ ಹೊಸಬಯಕೆಯ ನಂಬಿ ಭಾವನೆಗಳು ಕಾಮನ ಬಿಲ್ಲಿಗೆ ಕಂಬಿ ನಗುವ ಹೂವ ಮೊಗವ ಹೀರಿದಂತೆ ದುಂಬಿ  ಕುಂಚದಲ್ಲಿ ಅರಳಿದ ಛಾಯೆಯೇ ಅಕ್ಷರದಿ ಮರೆಯಾದ ಮಾಯೆಯೇ ಬಣ್ಣದಿ ಅರಳಿದ ಕೆಂಪು ಗುಲಾಬಿಯೇ ಮರೆಯದ ಮನದ ನೆನಪುಗಳ ದಾರಿಯೇ **********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್