ರೈತ ಮಹಿಳೆ



ಹೊಲದ ತುಂಬಾ ಆಡಿಕೆ ಗಿಡ

ಗೊಬ್ಬರ ಬೇಕು ಬಿಡಲು ಬುಡ

ಬುಡದಲ್ಲಿ ಬೆಳೆದಿದೆ ಹಸಿರು ಕಳೆ

ಕಿತ್ತರೇನೇ ತೊಲಗುವವುದು ಕೊಳೆ


ತೆನೆ ಹೊತ್ತ ರೈತ ಮನೆ ಮಹಿಳೆ

ಊದಿಹಳು ಸಸಿ ಬೆಳೆವ ಕಹಳೆ

ಕಳೆಯ ತೆಗೆದು ಹೊಲಸು ತೊಳೆದು

ಅಡಿಕೆಯಾಗಿದೆ ಹಸಿರು ಬಂಗಾರ



ರೈತ ಮಹಿಳೆ ಈಗ ಸ್ವಾವಲಂಬಿ

ದುಡಿಯುವ ದೋಣಿ ಅಂಬಿ

ಮನೆ ಮಂದಿ ತಿನ್ನುತಿಹರು ಅನ್ನ

ಕಷ್ಟದಿಂದ ಮಾಡಿದ ಸಾಲ ಮನ್ನಾ


ಬದುಕಿನಲ್ಲಿ ಕೈಯ ತುಂಬಾ ಕೆಸರು

ಜೀವನವಿಂದು ಕುಡಿದಂಗೆ ಮೊಸರು

ಊರಿನಲ್ಲಿ ತೋಟ ಬಲು ಚೆಂದ 

ಭೂಮಿತಾಯಿ ನಗುವೇ ಅಂದ



*********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ