ಹೊಸವರ್ಷ -2023

 



ಹೊಸ ವರುಷ ಜೊತೆಯಾಗಿ ಬಂತು

ಹೊಸದಾಗಿ ನಮಗೇನು ತಂತು

ನವ ಹರುಷ ಮನೆಗೆ ಬಂತು

ಹೊಸ ಹಾಡು ಹಾಡಬೇಕು ನಿಂತು


ಹಾಡಿ ಕುಣಿವುದು ಮೈಮನ

ನಕ್ಕು ನಲಿಯುವುದೇ ಜೀವನ

ಆಗುವುದೇ ಮನಸೆಲ್ಲಾ ಸಿಂಗಾರ

ದೇಹ ಕುಣಿವುದೇ ಒಡೆದು ಡಂಗುರ


ಬದುಕಿನ ಸಾರ್ಥಕ ಕ್ಷಣ ನೆನೆದು

ಕಷ್ಟಗಳ ಗಂಟು ಮೂಟೆ ಹೊಗೆದು

ನೋವುಗಳ ನೀರು ಕುಡಿದು

ಹೃದಯದ ತಾಳಕೆ ಕುಣಿದು


ಜೀವನದ ಗಾಡಿ ಮುಂದೆ ತಳ್ಳಿ

ಮನೆ ಮಂದಿ ಪ್ರೀತಿ ಎಲೆ ಬಳ್ಳಿ

ನಗುತಾ ಸಾಗುವ ಬದುಕಲಿ ಬೆರೆತು

ಹೊಸತನ ಕಲಿಯೋಣ ಕಲೆತು


ನೆನ್ನೆಯ ನೆನೆಪುಗಳು ನೂರು

ಕಾಡುವ ಕನಸುಗಳು ಚೂರು

ನಾಳೆಯ ಸವಿಗನಸು ಮುನ್ನೂರು

ಬದುಕೋಣ ನಾವು ನಾಳೇಗಾಗಿ   ವಂಚೂರು


ಹೊಸ ವರುಷ ಜೊತೆಯಾಗಿ ಬಂತು

ಹೊಸದಾಗಿ ನಮಗೇನು ತಂತು

ನವ ಹರುಷ ಮನೆಗೆ ಬಂತು

ಹೊಸ ಹಾಡು ಹಾಡಬೇಕು ನಿಂತು


ಸರ್ವರಿಗೂ ಹೊಸವರ್ಷದ ಶುಭಾಶಯಗಳು 

*********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್E

Comments

Popular posts from this blog

ಪ್ರೇಮೋತ್ಸವ- ಭಾವಗೀತೆ ಸಂಕಲನ

ಸಂತೋಷವಾಗಿರಲು ಪ್ರಯತ್ನಿಸೋಣವೇ- ವ್ಯಕ್ತಿತ್ವ ವಿಕಸನ

Author biography of Chandrashekhar Channapura Halappa