ನನ್ನವಳು




ಮರೆಯದ ನೆನಪು ನನ್ನವಳ ಮಾತು

ತುಟಿಯಂಚಿನಲ್ಲಿ ಕಾದಿತ್ತು ಪ್ರೀತಿ ಮುತ್ತು

ಕಣ್ಣ ಕುಡಿ ನೋಟ ನನ್ನ್ನನೆ ತಿಂತು 

ಕಳೆದೋಯ್ತು ಹಾಗೆ ಕಾಣದ ಹೊತ್ತು


ಓ ಶಿವನೇ ಹೇಳು ಇವಳ ನನ ಸ್ವತ್ತು 

ಒಣಗಿದ ಕೆನ್ನೆ ಚಿಗುರಿ ನಿಂತಿತ್ತು

ಮುಂಗುರಳ ಕೂದಲು ಹಾರಾಡುತಿತ್ತು

ಬಯಸದ ಭಾಗ್ಯ ಬಂದು ಬುಟ್ಟಿಗೆ ಬಿತ್ತು


ಉಟ್ಟ ಆ ಸೀರೆ ಕಾಮನಬಿಲ್ಲಿನ್ನ ಬಣ್ಣ

ನಡೆವಾಗ ಕಂಡ ನಡು ಸ್ವಲ್ಪ ಸಣ್ಣ

ಹೆಜ್ಜೆ ಹೆಜ್ಜೆಗೆ ಅವಳ ಗೆಜ್ಜೆಯ ನಾದ

ಕುಣಿದಂತೆ ನವಿಲು ನೋಡು ಹಳ್ಳಿ ಹೈದ


ಬಳುಕುವ ಬಳ್ಳಿ ನಡೆವಾಗ ಅವಳು

ಕುಣಿದಂತೆ ನನ್ನವಳು ಜೋಡಿ ನವಿಲು

ಕಂಪಿಸಿದೆ ಭೂಮಿ ನೋಡಿ ಅವಳ

ಮುಂಗಾರು ದಿನದಲ್ಲಿ ಬಿದ್ದಂತೆ ಕವಳ


ಮಿಂಚಂತೆ ಹೊಳಪು ನನ್ನವಳ ಅಂದ

ಸೂರ್ಯನೇ ಸುಟ್ಟೋದ ಕಂಡು ಚೆಂದ

ರಾತ್ರಿಯಲಿ ತಣ್ಣಗೆ ಚಂದ್ರನೇ ಬೆಂದ

ನಕ್ಷತ್ರಗಳ ರಾಜ ದ್ರುವ ತಾರೆ ನೊಂದ


ಮತ್ತೆಗೆ ಬಣ್ಣಿಸಲಿ ವರ್ಣಿಸಲಿ ಪೋಣಿಸಲಿ 

ಸಿಗದೇ ಪದಗಳ ಸುಂದರ ಅನುಬಂಧ

ಬಿಡಿಸಲು ಸಿಗದ ಪ್ರೇಮವೇ ಬಂಧ

ನಾನು ಒಬ್ಬ  ಪ್ರೀತಿ ಹುಡುಕುವ ಕಂದ 


*********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20