ದೇವರು
ಎಣ್ಣೆಯ ಬಿಟ್ಟು ಬತ್ತಿಯ ಹದ್ದಿ
ದೀಪವ ಹಚ್ಚಲು ಬೆಳಕಾಯಿತು
ವಿಭೂತಿ ಬಳಿದು ಅರಿಶಿನ ಇಟ್ಟು
ಕುಂಕುಮ ಮೆತ್ತಿ ಹೂವು ಇಡಲು
ದೇವರಿಗೆ ಪೂಜೆಯಾಯಿತು
ಕರ್ಪೂರ ಬೆಳಗಿ ನೈವೇದ್ಯ ಇಡಲು
ಮನವು ಭಕ್ತಿಯಲಿ ಪರವಷವಾಯಿತು
ಬೇಡಲು ನೂರಾರು ಆಸೆಗಳು
ಸಾವಿರ ಮನದ ಆಲೋಚನೆಗಳು
ಕೈಮುಗಿದು ಅಡ್ಡ ಬಿದ್ದು ಅಪ್ಪಣೆ
ಕೇಳಿದರೆ ಮುಗಿಯಿತೇ ಕಷ್ಟಗಳು
ಕಂಬನಿ ಕಣ್ಣು ಒದ್ದೆಯಾಯಿತೇ
ಬೇಡಿದ ಫಲ ದೊರಕಿತೆ ಬಾಳಲಿ
ಬೇಸರ ಬಂದು ಬದುಕಲಿ ನೊಂದು
ನಿನ್ನ ನೆಲೆಯಲಿ ಭಕ್ತಿಯಲಿ ಮಿಂದು
ಕಾಣದ ಬಯಕೆಗಳು ನನ್ನಲಿ ಬಂದು
ಭಾವನೆಗಳು ನನ್ನನು ಕೊಂದು
ಊರ ದೇವರಿಗೆ ಜೋಡಿ ಕಾಯಿ
ಒಡೆದೆ
ನನ್ನ ಕಾಯೋ ಹರನೇ ಹರಿ ನೀ ಎಂದೇ
ಬಣ್ಣದ ಬದುಕಲಿ ಹೆಜ್ಜೆಯ ಇಡುತ ನೆಡೆದೆ
************ರಚನೆ ********
ಡಾ.ಚಂದ್ರಶೇಖರ. ಸಿ. ಹೆಚ್
Comments
Post a Comment