ಬಣ್ಣವ ತುಂಬಿ
ಬರೆವ ಅಕ್ಷರದಿ ಭಾವನೆಗಳ ಕುಣಿತ
ಗೀಚಿದ ಶಾಯಿಯಲಿ ಬಣ್ಣದ ಮಿಳಿತ
ಒಲವಿನ ಬದುಕಲಿ ನಿನ್ನ ಬಿಂಬದ ಸೆಳೆತ
ಮೌನದ ಬದುಕಲಿ ಆಸೆಯ ಮೊಳೆತ
ನೋವು ನಲಿವು ಗೆಲುವು ಭಾವನೆ
ಆಸೆ ಕನಸು ನನಸು ಸುಖ ಕಾಮನೆ
ಕಣ್ಣೀರು ದುಃಖ ಅಳಲು ವೇಧನೆ
ಭಾವನೆ ಕಾಮನೆ ವೇಧನೆ ರೋಧನೆ
ನೂಕಿದೆ ಬಾಳ ಬಂಡಿಯನೇ
ಬಣ್ಣವ ನಿನ್ನ ಸವಿ ಬದುಕಿಗೆ ತುಂಬಿ
ಬಂದ ಹೊಸಬಯಕೆಯ ನಂಬಿ
ಭಾವನೆಗಳು ಕಾಮನ ಬಿಲ್ಲಿಗೆ ಕಂಬಿ
ನಗುವ ಹೂವ ಮೊಗವ ಹೀರಿದಂತೆ ದುಂಬಿ
ಕುಂಚದಲ್ಲಿ ಅರಳಿದ ಛಾಯೆಯೇ
ಅಕ್ಷರದಿ ಮರೆಯಾದ ಮಾಯೆಯೇ
ಬಣ್ಣದಿ ಅರಳಿದ ಕೆಂಪು ಗುಲಾಬಿಯೇ
ಮರೆಯದ ಮನದ ನೆನಪುಗಳ ದಾರಿಯೇ
**********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment