ಏನೋ ಚೆಂದ




ಅಕ್ಕರೆ ಇಲ್ಲದ ನಗುವೇನ ಚೆಂದಾ 

ಸಕ್ಕರೆ ಇಲ್ಲದ ಸಿಹಿಯೇನ ಚೆಂದಾ 

ಮಾತಲಿ ಕಟ್ಟಿದ ಮನೆಯೇನ ಚೆಂದಾ 

ಕತ್ತಲಲಿ ಕಳೆದೋದ ಚಿತ್ರವೇನ ಚೆಂದಾ 


ಮುದ್ದು ನಗುವ ಹುಡುಗಿನೇ ಚೆಂದಾ 

ಮನದ ಆಸೆಗೆ ಬಿದ್ದ ಕನಸೇ ಚೆಂದಾ 

ನೆಲವ ಸೋಕಿದ ಪಾದವೇ ಚೆಂದಾ 

ಕಣ್ಣ ರೆಪ್ಪೆಗೆ ಕಪ್ಪು ಕಾಡಿಗೆ ಚೆಂದಾ 


ಬದುಕು ಸಾಗಿಸುವ ಬಂಡಿ ಚೆಂದಾ 

ಬಂಡಿ ಎಳೆವ ಗಂಡ ಗುಂಡಿ ಚೆಂದಾ 

ಭಾವನೆಗೆ ಬಣ್ಣ ಹಚ್ಚುವ ಜೀವನ ಚೆಂದಾ 

ಸುಖ ದುಃಖದಿ ನಡೆವ ದಾರಿಯೇ ಚೆಂದಾ 


ಪ್ರೀತಿಲಿ ಕರಗದ ಸಿಟ್ಟೆನ ಚೆಂದಾ

ಮುಟ್ಟದೆ ಮುನಿಯುವ ನಂಟೇನ ಚೆಂದಾ

ಸುಟ್ಟರೆ ಬೇಯದ ಬಯಕೆಯೇನ ಚೆಂದಾ

ಊಟಕೆ ಇಲ್ಲದ ಉಪ್ಪಿನಕಾಯೇನ ಚೆಂದಾ 


ಸಾಗುವ ನದಿಗೆ ತೇಲುವ ಅಲೆಯೇನ ಚೆಂದಾ 

ಬಾಳಲಿ ಬಿಡಿಸಲು ಬಾರದ ಒಗಟೆನ ಚೆಂದಾ 

ಬಿದ್ದರು ಏಳಲು ಬಾರದ ಬದುಕೇನ ಚೆಂದಾ 

ಏಕೊ ಏನೋ ಇದು ನನ್ನ ನಿನ್ನ ಬಿಡಿಸದ ಬಂದ


**********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್



Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa